ಅಂಬೇಡ್ಕರ್ ಯುವ ಸೇನೆ ಹಾಗೂ ಭಿಮ್ ಆರ್ಮಿ ವತಿಯಿಂದ ಗ್ರಾ. ಪಂ. ಮುತ್ತಿಗೆ

ಕಲಬುರಗಿ.ನ.19: ಶರಣ ಸಿರಸಗಿ ಗ್ರಾಮ ಪಂಚಾಯತನಲ್ಲಿ ಬಸವ ವಸತಿ ಯೋಜನೆ ಹಾಗೂ ಉದ್ಯೋಗ ಖಾತ್ರಿ ಯೋಜನೆಯಡಿ ಭಾರಿ ಅವ್ಯವಹಾರ ಕುರಿತು ಗ್ರಾಮ ಪಂಚಾಯತ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ಹಾಗೂ ಕಲಬುರಗಿ ಅಫಜಲಪುರ ಮುಖ್ಯ ರಸ್ತೆ ತಡೆ ಮಾಡಿ ಬೃಹತ್ ಪ್ರತಿಭಟನೆ ಮಾಡಲಾಯಿತು,
ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಇಸ್ಮಾಯಿಲ್ ಹಾಗೂ ಕಲಬುರಗಿ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ ಅವರು ಸ್ಥಳಕ್ಕೆ ಧಾವಿಸಿ ಮನವಿ ಪತ್ರ ಸ್ವಿಕರಿದರು.
ಬಸವ ವಸತಿ ಯೋಜನೆಯ ಮನೆಗಳನ್ನು ಗ್ರಾಮ ಸಭೆ ಮಾಡದೆ ಕಾನೂನು ಬಾಹಿರವಾಗಿ ಗ್ರಾಮ ಪಂಚಾಯತ್ ಕಂಪ್ಯೂಟರ್ ಅಪರೇಟರ್ ಸಂತೋಷ ಅವರ ಒಂದೇ ಕುಟುಂಬಕ್ಕೆ ಏಳು (7) ಮನೆಗಳನ್ನು ಮಂಜುರು ಮಾಡಿ ಮನೆ ಕಟ್ಟದೆ ಒಂದೇ ಕಟ್ಟಡಕ್ಕೆ 7 ಬಾರಿ ಜಿಪಿಎಸ್ ಮಾಡಿಸಿ ಹಣ ಲಪಟಾಯಿಸಲಾಗಿದೆ ಉದ್ಯೋಗ ಖಾತ್ರಿ ಯೋಜನೆ ಯಡಿ ಕಾಮಗಾರಿ ಮಾಡದೆ ಸಾಮಗ್ರಿ ವೆಚ್ಚ ಪಾವತಿಸಲಾಗಿದೆ.
14ನೇ ಹಣಕಾಸು ಯೋಜನೆಯಡಿ ರಸ್ತೆಗಳು ನಿರ್ಮಿಸಿರುವುದ್ದಾಗಿ ಬೋಗಸ್ ಬಿಲ್ಲು ಪಿಡಿಓ ಹಾಗೂ ಕಂಪ್ಯೂಟರ್ ಅಪರೇಟರ್ ಅಧ್ಯಕ್ಷರು ಕೂಡಿಕೊಂಡು ಎತ್ತಿಹಾಕಿದ್ದಾರೆ. ಮತ್ತು ಉದ್ಯೋಗ ಖಾತ್ರಿ ಯೋಜನೆಯಡಿ ನೂರಾರು ಬೋಗಸ್ ಜಾಬ್ ಕಾರ್ಡ್ ತಯ್ಯಾರಿಸಿ ಲಕ್ಷಾಂತರ ರೂಪಾಯಿ ಕೊಳ್ಳೆ ಹೋಡೆದಿದ್ದಾನೆ ಈ ಕಂಪ್ಯೂಟರ್ ಅಪರೇಟರ್ ಸಂತೋಷ ಮರತೂರ ರವರು..
ಕಂಪ್ಯೂಟರ್ ಅಪರೇಟರ್ ವಿರುದ್ಧ ಜೆಇ ರವರ ಮೇಲೆ ಹಲ್ಲೆ ಮಾಡಿದ ದೂರು ಇರೋದರಿಂದ ಸೇವೆಯಿಂದ ವಜಾಗೊಳಿಸಬೇಕೆಂದು ಮಾನ್ಯ ಸಿಇಓ ರವರು ಆದೇಶ ಮಾಡಿದ್ದರೂ. ಆದರೆ ಮತ್ತೆ ಇದೇ ಪಂಚಾಯತಿನಲ್ಲಿ ಮತ್ತೆ ವಕ್ಕರಿಸಿದ್ದಾನೆ.
ಪಂಚಾಯತ ಅಧ್ಯಕ್ಷರು ಈ ಕಂಪ್ಯೂಟರ್ ಅಪರೇಟರನ ಸ್ವಂತ ಅತ್ತಿಗೆ ಇರೋದರಿಂದ ಭಾರಿ ಪ್ರಮಾಣದ ಅವ್ಯವಹಾರ ಮಾಡೋದು ಇವನಿಗೆ ಸಲಿಸಾಗಿದೆ.

ಕಾನೂನು ಬಾಹಿರವಾಗಿ ಅನುದಾನ ಪಡೆಯಲು ಸಹಕರಿಸಿದ ಪಿಡಿಓ ಹಾಗೂ ಕಂಪ್ಯೂಟರ್ ಅಪರೇಟರ್ ಮೇಲೆ ಕ್ರೀಮಿನಲ್ ಮೊಕ್ಕದಮ್ಮೆ ದಾಖಲಿಸಿ ಸೇವೆಯಿಂದ ವಜಾಗೋಳಿಸಬೇಕೆಂದು ಅಂಬೇಡ್ಕರ್ ಯುವ ಸೇನೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ತಳಕೇರಿ ಹಾಗೂ ಭೀಮ ಆರ್ಮಿ ವಿಭಾಗಿಯ ಅಧ್ಯಕ್ಷರಾದ ಅರುಣ ಎಸ್ ಭರಣಿ ಯವರು ಆಗ್ರಹಿಸಿದರು. ಒಂದು ವೇಳೆ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸದೆ ಇದ್ದ ಪಕ್ಷದಲಿ ಮುಂಬರುವ ದಿನಗಳಲ್ಲಿ ಜಿಲ್ಲಾ ಪಂಚಾಯತ್ ಕಾರ್ಯಲಯದ ಎದುರು ಉಪವಾಸ ಸತ್ಯಗ್ರಹ ಮಾಡಲಾಗುವುದಾಗಿ ಅರುಣ ಎಸ್ ಭರಣಿ ಆಗ್ರಹಿಸಿದರು. ಭೀಮ್ ಆರ್ಮಿ ಯುವ ಘಟಕದ ಮುಖ್ಯಸ್ಥ ಸಂತೋಷ ಬಿ ಪಾಳಾ, ಶಿವಮೂರ್ತಿ ನಡಗೇರಿ, ಅನೀಲ್ ಪೂಜಾರಿ, ಹಾಗೂ ಶರಣಸಿರಸಗಿ ಗ್ರಾಮಸ್ಥರು ಉಪಸ್ಥಿತರಿದ್ದರು.