ಅಂಬೇಡ್ಕರ್ ಯುವ ಸೇನೆಯ ಪದಾಧಿಕಾರಿಗಳ ನೇಮಕ

ತುಮಕೂರು, ಜು. ೨೬- ನಗರದ ಹೊಯ್ಸಳ ಹೋಟೆಲ್ ಸಭಾಂಗಣದಲ್ಲಿ ಅಂಬೇಡ್ಕರ್ ಯವ ಸೇನೆಯ ಮಧುಗಿರಿ ತಾಲ್ಲೂಕು ಕೊಡಿಗೇನಹಳ್ಳಿ ಹೋಬಳಿ ಅಧ್ಯಕ್ಷರಾಗಿ ಅಶ್ವತ್ಥ್ ಎನ್. ನೇಮಕಗೊಂಡಿದ್ದಾರೆ.
ಉಪಾಧ್ಯಕ್ಷರಾಗಿ ನಾರಾಯಣಪ್ಪ, ಕಾರ್ಯದರ್ಶಿಯಾಗಿ ವೆಂಕಟೇಶ್, ಖಜಾಂಚಿಯಾಗಿ ಸುರೇಶ್, ಪ್ರಧಾನ ಕಾರ್ಯದರ್ಶಿಯಾಗಿ ಮೂರ್ತಿ ರವರನ್ನು ನೇಮಕ ಮಾಡಲಾಯಿತು.
ಅಂಬೇಡ್ಕರ್ ಯುವ ಸೇನೆಯು ತುಮಕೂರು ಜಿಲ್ಲಾದ್ಯಂತ ಹೋರಾಟ ಮಾಡಿಕೊಂಡು ಬಂದಿದ್ದು, ಭಾರತ ಸರ್ಕಾರದ ಅನುದಾನಗಳು ಮತ್ತು ಕರ್ನಾಟಕ ರಾಜ್ಯದ ೩೫ ಇಲಾಖೆಗಳಲ್ಲಿನ ಅನುದಾನಗಳನ್ನು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ತಾಲ್ಲೂಕು ಮಟ್ಟದಲ್ಲಿ, ಹೋಬಳಿ ಮಟ್ಟದಲ್ಲಿ ಮಾಡುತ್ತಾ ಬಂದಿದೆ. ನೋಂದವರಿಗೆ ನ್ಯಾಯ ಕೊಡಿಸುವ, ಕೆಲಸ ಮಾಡುತ್ತಿದೆ. ಪ್ರತಿವರ್ಷ ಅಂಬೇಡ್ಕರ್ ಯುವ ಸೇನೆಯಿಂದ ಜಾತ್ಯಾತೀತವಾಗಿ ವಿದ್ಯಾಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡುತ್ತಾ ಬರಲಾಗಿದೆ. ಸಂವಿಧಾನದ ಆಶಯಗಳಿಗೆ ಬದ್ಧವಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸುಗಳನ್ನು ಈಡೇರಿಸುವ ನಿಟ್ಟಿನಲ್ಲಿ ಹಗಲಿರುಳು ಅಂಬೇಡ್ಕರ್ ಯುವ ಸೇನೆ ಪದಾಧಿಕಾರಿಗಳು ಶ್ರಮವಹಿಸಿ ಕೆಲಸಗಳನ್ನು ಮಾಡುತ್ತಾ ಬಂದಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಎನ್.ವಿಜಯ್, ಸಂಘಟನಾ ಕಾರ್ಯದರ್ಶಿ ಸ್ವಾಮಿ, ಅಶ್ವತ್ಥ್, ವೆಂಕಟೇಶ್, ನಾರಾಯಣಪ್ಪ, ಸುರೇಶ್, ಮೂರ್ತಿ, ಗಂಗರಾಜು, ಗಂಗರಾಜು ಜಿ. ರಂಗಪ್ರಸಾದ್, ನರಸೀಯಪ್ಪ, ಪ್ರಸಾದ್, ಗೋಪಾಲಪ್ಪ, ಮಂಜುನಾಥ್, ಮೋಹನ್, ಹನುಮಂತರಾಯ ಮತ್ತಿತರರು ಉಪಸ್ಥಿತರಿದ್ದರು.