ರಾಯಚೂರು, ಏ.೧೫- ತಾಲೂಕಿನ ಗಂಜಹಳ್ಳಿ ಗ್ರಾಮದಲ್ಲಿ ಭಾರತರತ್ನ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ೧೩೨ ಜಯಂತಿ ಅಂಗವಾಗಿ ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ಗ್ರಾಮದ ಬಿದಿ ಬಿದಿಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ ಮಾಡುವುದರ
ಸಂವಿಧಾನ ಶಿಲ್ಪಿಗೆ ಅರ್ಥಪೂರ್ಣವಾಗಿ ಗೌರವ ನಮನ ಸಲ್ಲಿಸಲಾಯಿತು.ಅಂಬೇಡ್ಕರ್ ಅವರ ಭಾವಚಿತ್ರ ಮೆರವಣಿಗೆ ಮಾಲಾರ್ಪಣೆ ಮಾಡಲಾಯಿತು.
ಡ್ರಾಮ್ಸ್ ಮೂಲಕ ಅಂಬೇಡ್ಕರ್ ಜಯಂತಿಗೆ ಮೆರುಗು ತುಂಬಿತು.
ರಾರಾಜಿಸಿದ ನೀಲಿ ಬಾವುಟ: ಸರಕಾರಿ ಶಾಲೆಯ ಆವರಣದಿಂದ ಆರಂಭಗೊಂಡ ಮೆರವಣಿಗೆ ಗ್ರಾಮದ ವಿವಿಧ ಓಣಿಗಳಲ್ಲೂ ಅಂಬೇಡ್ಕರ್ ಭಾವಚಿತ್ರವಿದ್ದ ನೀಲಿ ಬಾವುಟ ರಾರಾಜಿಸಿತು. ಯುವಕರು, ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ತಿಮ್ಮಪ್ಪ ಗಂಜಹಳ್ಳಿ ಮಾತನಾಡುತ್ತಾ, ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಭಾವ ಚಿತ್ರಗಳ ಮೆರವಣಿಗೆಗಿಂತ ಅವರ ವಿಚಾರಗಳ ಪಾಲನೆ ಅಗತ್ಯವಾಗಿದೆ ಎಂದ ಅವರುಅಂಬೇಡ್ಕರ್ ಹೇಳಿಕೊಟ್ಟ ವಿಚಾರಗಳು, ಅವರ ಬದುಕಿನ ಸಂದೇಶಗಳು ಸಮಾಜದಲ್ಲಿ ಹರಡುವಂತಾಗಲು ನಾವೆಲ್ಲರೂ ಶ್ರಮಿಸಬೇಕಾಗಿದೆ. ನಮ್ಮ ಮನೆ ಮನಗಳಲ್ಲಿ ಅಂಬೇಡ್ಕರ್ ನೆಲೆಸುವಂತಾಗಬೇಕು ಎಂದು ಅವರು ತಿಳಿಸಿದರು.
ಅತಿಥಿ ಶಿಕ್ಷಕ ಲಚಪ್ಪ ಮಾತನಾಡಿ, ಅಂಬೇಡ್ಕರ್ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಎಂದರು.
ಈ ಸಂದರ್ಭದಲ್ಲಿ ರಮೇಶ, ಮಹೇಶ, ನರಸಿಂಹ, ಸತ್ಯ, ನಾಗರಾಜ, ಶಿವು, ಅಂಜಿ,ಮಾರ್ತಾಂಡ, ಬಸವರಾಜ, ಯುವಕರು ಸೇರಿದಂತೆ ಉಪಸ್ಥಿತರಿದ್ದರು.