ಅಂಬೇಡ್ಕರ್ ಮೂರ್ತಿ ಧ್ವಂಸ ಕ್ರಮಕ್ಕೆ ಒತ್ತಾಯ

ರಾಯಚೂರು, ನ.೦೨, ತೆಲಂಗಾಣ ರಾಜ್ಯದ ಜೋಗುಳಾಂಬ ಗದ್ವಾಲ್ ಜಿಲ್ಲೆಯ ದರೂರು ಮಂಡಲದ ರೇವುಲಪಲ್ಲಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ ಮೂರ್ತಿಯನ್ನು ದ್ವಂಸಗೊಳಿಸಿದ ಕಿಡಿಗೇಡಿ ವಿರುದ್ಧ ದೇಶದ್ರೋಹ ಪ್ರಕರಣದಡಿಯಲ್ಲಿ ಬಂಧಿಸಿ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ತೆಲಂಗಾಣ ಮುಖ್ಯಮಂತ್ರಿ ಹಾಗೂ ರಾಷ್ಟ್ರಪತಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ತೆಲಂಗಾಣ ರಾಜ್ಯದ ಜೋಗುಳಾಂಬ ಗದ್ವಾಲ್ ಜಿಲ್ಲೆಯ ದರೂರು ಮಂಡಲದ ರೇವುಲಪಲ್ಲಿ ಗ್ರಾಮದ ಪೂರಾ ರಘುರೆಡ್ಡಿ ಎಂಬ ಕಿಡಿಗೇಡಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ ಅವರ ಮೂರ್ತಿಯವರ ದ್ವಂಸಗೊಳಿಸಿದ್ದು, ಘಟನೆಯು ಅತ್ಯಂತ ಖೇದಕರ ವಿಷಯವಾಗಿರುತ್ತದೆ ಎಂದು ಆಕ್ರೋಶ ಹೊರಹಾಕಿದರು.ದೇಶದ ಪ್ರತಿಯೊಬ್ಬ ಕಟ್ಟ ಕಡೆಯ ವ್ಯಕ್ತಿಗೂ ಸಂವಿಧಾನಬದ್ಧವಾಗಿ ಹಕ್ಕು ನೀಡಿರುವ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರಿಗೆ ದೇಶದಲ್ಲಿ ಒಂದಲ್ಲೊಂದು ಪ್ರದೇಶದಲ್ಲಿ ನಿರಂತರವಾಗಿ ಅವರ ಮೂರ್ತಿಗಳಿಗೆ ಅಪಮಾನಗೊಳಿಸುವಂತ ಕ್ರಮಗಳು ಇತ್ತಿಚೇಗೆ ಕೋಮುವಾದ ಶಕ್ತಿಗಳು ಅಧಿಕಾರಕ್ಕೆ ಬಂದಮೇಲೆ ಅಧಿಕವಾಗಿವೆ. ಮತ್ತು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ೭೫ ವರ್ಷಗಳಾಗುತ್ತಿದ್ದು, ನಿರಂತರವಾಗಿ ದಲಿತರ ಮೇಲೆ ದಬ್ಬಾಳಿಕೆಗಳು ಮತ್ತು ಬಹಿಷ್ಕಾರದಂತ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದೆ. ಇವುಗಳನ್ನು ತಡೆಗಟ್ಟುವಲ್ಲಿ ಆಳುವ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿರುವ ಕಾರಣ ಈ ರೀತಿಯ ದೌರ್ಜನ್ಯ ಅಪಮಾನಗಳು, ದಲಿತರ ಮೇಲೆ ಮತ್ತು ಬಾಬಾ ಸಾಹೇಬರ ಮೂರ್ತಿಗಳ ದ್ವಂಸ ಘಟನೆಗಳು ನಡೆಯುತ್ತಿದ್ದು, ಇವುಗಳನ್ನು ತಡೆಗಟ್ಟ ಬೇಕಾದರೆ ಇಂತಹ ಘಟನೆಗಳಿಗೆ ಕಾರಣರಾದ ಆರೋಪಿಗಳಿಗೆ ಉಗ್ರ ಶಿಕ್ಷೆಗೆ ಒಳಪಡಿಸಬೇಕು. ಆ ನಿಟ್ಟಿನಲ್ಲಿ ಕಠಿಣವಾದ ಕಾನೂನುಗಳನ್ನು ಜಾರಿಗೊಳಿಸಬೇಕು. ಮತ್ತು ತೆಲಂಗಾಣ ರಾಜ್ಯದ ರೇವಲಪಲ್ಲಿ ಗ್ರಾಮದಲ್ಲಿ ಅಂಬೇಡ್ಕರ್ ರವರ ಮೂರ್ತಿ ಧ್ವಂಸಗೊಳಿಸಿದ ಆರೋಪಿಯನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ರಾಷ್ಟ್ರಪತಿಗಳಿಗೆ ಮತ್ತು ತೆಲಂಗಾಣ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.ಈ ಸಂದರ್ಭದಲ್ಲಿ ಹನುಮೇಶ ಅರೋಲಿ, ವಿನೋದಸಾಗರ್, ಎಸ್. ನರಸಿಂಹಲು, ತಿಮ್ಮಪ್ಪ ಸೇರಿದಂತೆ ಉಪಸ್ಥಿತರಿದ್ದರು.