ಅಂಬೇಡ್ಕರ್ ಮಹಾಪರಿನಿರ್ವಾಣ ದಿನ : ಸಂವಿಧಾನ ಶಿಲ್ಪಿ ಸ್ಮರಣೆ

(ಸಂಜೆವಾಣಿ ವಾರ್ತೆ)
ಔರಾದ : ಡಿ.6:ಪಟ್ಟಣದಲ್ಲಿನ ಬೌದ್ಧ ನಗರದ ಡಾ. ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ 65ನೇ ಮಹಾ ಪರಿನಿರ್ವಾಣ ದಿನದ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೇಬ ಅಂಬೇಡ್ಕರ್ ಅವರಿಗೆ ಗೌರವ ನಮನ ಸಲ್ಲಿಸಲಾಯಿತು.
ಡಾ. ಬಾಬಾ ಸಾಹೇಬ ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಜೀವನವೇ ಒಂದು ಆದರ್ಶ, ಅವರು ತಮ್ಮ ಜೀವನದುದ್ದಕ್ಕೂ ಅನೇಕ ಸವಾಲುಗಳನ್ನು ಎದುರಿಸಿ, ಅವುಗಳನ್ನು ಸರಳವಾಗಿ ಎದುರಿಸಿ ಮೇಲೆ ಬಂದವರು. ಅನೇಕ ಶತಮಾನಗಳಿಂದಲೂ ತುಳಿಕ್ಕೊಳಗಾದವರಿಗೆ ಸಂವಿಧಾನದ ಮೂಲಕ ಸಾಮಾಜಿಕ ನ್ಯಾಯ ಒದಗಿಸಿದ ಮಹಾನ್ ಮಾನವತಾವಾದಿ ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ಬಾಬುರಾವ ತಾರೆ, ನರಸಿಂಗ ಕೊಂಡೆ, ನಾಗನಾಥ ಚಿಟ್ಮೆ , ಬಿ.ಎಮ್. ಅಮರವಾಡಿ, ಸೋಪಾನರಾವ ಡೋಂಗರೆ, ಯಾದು ಮೇತ್ರೆ, ಶಿವರಾಜ ಜುಲಾಂಡೆ, ವಿಲಾಸ ಪೆÇೀಲಿಸ್, ಶಾಮಸುಂದರ ಖಾನಾಪೂರ, ದತ್ತು ಡೋಂಗರೆ, ದಾದಾರಾವ ಖರಾತ, ನಾಗನಾಥ ಭಂಗಾರೆ, ನರಸಿಂಗ ಮೈಲಾರೆ, ಶಿವು ಕಾಂಬಳೆ, ಪ್ರಕಾಶ ಭಂಗಾರೆ, ರಾಜು ಮೈಲಾರೆ, ಸುನೀಲ್ ಮಿತ್ರಾ, ಸುನೀಲ ವಾಗಮಾರೆ, ಸಂತೋಷ ಶಿಂದೆ, ಪ್ರವಿಣ ಕಾರಂಜೆ, ರಾಜು ತಾರೆ, ಗೌತಮ ತಾರೆ, ನಾಗಶೇನ ತಾರೆ, ಸುಂದರ ಮೇತ್ರೆ, ಹಾಗೂ ಮಹಿಳೆಯರು, ಮಕ್ಕಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.