ಅಂಬೇಡ್ಕರ್ ಮಹಾನಿರ್ವಾಣ ದಿನ ಆಚರಣೆ

ಕೋಲಾರ,ಡಿ.೮: ದಲಿತ ಸಂಘರ್ಷ ಸಮಿತಿ ಭೀಮವಾದ ಮತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಇವರ ಸಹಯೋಗದಲ್ಲಿ ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಅವರ ೬೫ನೇ ಮಹಾ ಪರಿನಿರ್ವಾಣ ಕಾರ್ಯಕ್ರಮವನ್ನು ಕೋಲಾರದ ಪತ್ರಕರ್ತರ ಭವನದಲ್ಲಿ ಏರ್ಪಡಿಸಲಾಗಿತ್ತು.
ಉಪನ್ಯಾಸಕ ಶ್ರೀನಿವಾಸ್ ಶಾಕ್ಯ ಮಾತನಾಡಿ, ಬಾಬಾ ಸಾಹೇಬರು ಈ ದೇಶಕ್ಕೆ ಪ್ರಪಂಚದಲ್ಲಿಯೇ ಅತ್ಯುನ್ನತವಾದ ಸಂವಿಧಾನವನ್ನು ನೀಡಿದ್ದಾರೆ. ಈ ಸಂವಿಧಾನವು ಸರಿಯಾದ ರೀತಿಯಲ್ಲಿ ಜಾರಿಯಾದರೆ ಕೇವಲ ಕೆಲವೇ ವರ್ಷಗಳಲ್ಲಿ ಈ ದೇಶ ಪ್ರಬುದ್ಧ ಭಾರತ ಆಗುವಲ್ಲಿ ಯಾವುದೇ ಸಂಶಯವಿಲ್ಲ. ಬಾಬಾ ಸಾಹೇಬರ ಕೊನೆಯ ಆರು ದಿನಗಳಲ್ಲಿ ಅವರ ಆಪ್ತ ಕಾರ್ಯದರ್ಶಿ ರತ್ತು ಹತ್ತಿರ ಏನೆಲ್ಲಾ ಹೇಳಿದರು. ಅವರ ಗೆಳೆಯರಂತಿದ್ದ ಪುಸ್ತಕಗಳ ಸಹವಾಸದಲ್ಲೇ ಕೊನೆಯ ಕ್ಷಣಗಳನ್ನು ಕಳೆದರು ಎಂಬುದನ್ನ ಸವಿಸ್ತಾರವಾಗಿ ತಿಳಿಸಿದ ಅವರು, ಬಾಬಾಸಾಹೇಬರು ನೀಡಿದಂತಹ ಸಂದೇಶವನ್ನು ಎಲ್ಲ ಯುವಕರು ಮನದಲ್ಲಿಟ್ಟುಕೊಂಡು ಅವರ ಆದರ್ಶಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕೆಂದು ಕರೆ ನೀಡಿದರು.
ರಾಜ್ಯ ಸಂಘಟನಾ ಸಂಚಾಲಕ ಮೆಡಿಹಾಳ ಎಂ.ಚಂದ್ರಶೇಖರ್ ಮಾತನಾಡಿ. ಸಂವಿಧಾನ ಉಳಿದರೆ ನಾವು-ನೀವು ನಮ್ಮ ಸಾಹೇಬರು ಅವರ ಜೀವನದುದ್ದಕ್ಕೂ ಅವರ ವಿರೋಧಿಗಳ ವಿರುದ್ಧ ಹೋರಾಡಿ ನಮಗೆ ಇಂತಹ ಒಳ್ಳೆಯ ಜೀವನವನ್ನು ನೀಡಿದ್ದಾರೆ ಅವರ ತ್ಯಾಗ ಬಲಿದಾನಕ್ಕೆ ನಾವುಗಳು ಸ್ವಲ್ಪವಾದರೂ ಋಣ ತೀರಿಸಬೇಕು ಅಂದರೆ ಅವರ ಆದರ್ಶ ಸ್ವಾಭಿಮಾನ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನೊಂದವರ ಪರ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲ ಡಾ.ಟಿ ಜಯರಾಮ್, ಜಿಲ್ಲಾ ಸಂಚಾಲಕ ವಕ್ಕಲೇರಿ ಶಂಕರ್, ವಕ್ಕಲೇರಿ ಗ್ರಾಮ ಪಂಚಾಯಿತಿ ಸದಸ್ಯ ಬೊಟ್ಟು ರಾಜಪ್ಪ, ವೇಮಗಲ್ ವಿಎಂ ರಮೇಶ್, ಮುದುವತ್ತಿ ಗ್ರಾಮ ಪಂಚಾಯತಿ ಅಧ್ಯಕ್ಷ ನಾಗೇಂದ್ರ, ಎಸ್.ಎಸ್.ಡಿ ಅಮರೇಶ್ ಕೋಲಾರ, ಆರ್‍ಪಿಐಕೆ ಜಿಲ್ಲಾಧ್ಯಕ್ಷ ಹಳೆಹಳ್ಳಿ ತಿಮ್ಮರಾಯಪ್ಪ, ಆರ್ ಪಿ ಐಕೆ ಜಿಲ್ಲಾ ಉಪಾಧ್ಯಕ್ಷ ರಾಜಶೇಖರ್ ಬೌದ್ಧ, ಚಾಂಪಿಯನ್ ಬಾಬಣ್ಣ, ಯರ್ರನಾಗನಹಳ್ಳಿ ವೆಂಕಟೇಶ್, ಲಕ್ಷ್ಮಿಪುರ ಶೈಲಜಮ್ಮಇನ್ನು ಮುಂತಾದ ನಿಷ್ಠಾವಂತ ಕಾರ್ಯಕರ್ತರು ಉಪಸ್ಥಿತರಿದ್ದರು.