ಅಂಬೇಡ್ಕರ್ ಭಾವ ಚಿತ್ರ ಇಡದೆ ರಾಷ್ಟ್ರೀಯ ಹಬ್ಬ ಆಚರಣೆ ಕ್ರಮಕ್ಕೆ ಆಗ್ರಹ

ಕೋಲಾರ,ಸೆ,೭- ಸ್ವಾತಂತ್ರ್ಯ ದಿನಾಚರಣೆಯಲ್ಲಿ ಕೆ.ಎಸ್.ಆರ್.ಟಿ.ಸಿ.ನಿಗಮದ ಮಾಲೂರು ಘಟಕದ ವ್ಯವಸ್ಥಾಪಕ ರಮೇಶ್ ಬಾಬು ಎಂಬುವರು ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರ ಭಾವ ಚಿತ್ರವನ್ನು ಇಡದೆ ಮಹಾತ್ಮಗಾಂಧಿಜೀಯವರ ಒಂದು ಭಾವಚಿತ್ರವನ್ನು ಇಟ್ಟು ಕರ್ತವ್ಯ ಲೋಪ ಮಾಡಿದ್ದಾರೆ. ಅಲ್ಲದೆ ಕಾಲಿನ ಷೋಗಳನ್ನು ತೆಗೆದು ರಾಷ್ಟ್ರೀಯ ಹಬ್ಬವನ್ನು ಆಚರಿಸದೆ ಷೋಗಳನ್ನು ಧರಿಸಿಯೇ ಕಾರ್ಯಕ್ರಮದಲ್ಲಿ ಭಾಗವಹಿಸಿದರುವುದು ಮಹನೀಯರಿಗೆ ಹಾಗೂ ರಾಷ್ಟ್ರೀಯತೆಗೆ ತೋರಿರುವ ಅಗೌರವಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ರಾಜ್ಯ ಅಧ್ಯಕ್ಷ ಡಾ.ಆಶ್ವಥನಾರಾಯಣ ಅಂತ್ಯಜ ಖಂಡಿಸಿದರು,
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಈ ಹಿಂದೆ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ಪೋಟೋವನ್ನು ನ್ಯಾ, ಮಲಿಕಾರ್ಜುನ್ ಪಾಟೀಲ್ ಅವರು ತೆಗೆದ ಸಂದರ್ಭದಲ್ಲಿ ಇಡೀ ರಾಜ್ಯವೇ ಖಂಡಿಸಿ ಪ್ರತಿಭಟಿಸುವ ಮೂಲಕ ಸರಕಾರಕ್ಕೆ ಕಣ್ಣು ತೆರೆಸಿದಾಗ ಸರ್ಕಾರವು ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಇಟ್ಟು ಗೌರವಿಸ ಬೇಕೆಂದು ಕಾನೂನು ಜಾರಿ ಮಾಡಿತ್ತು. ಅದರೆ ಇದನ್ನು ಉಲ್ಲಂಘಿಸಿದ ವಿರುದ್ದ ಕ್ರಮ ಜರುಗಿಸಿತ್ತು. ಈ ಃಟನೆಯು ಜನರ ಮನದಲ್ಲಿ ಮಾಸುವ ಮುನ್ನವೇ ಮಾಲೂರಿನಲ್ಲಿ ನಡೆದಿರುವ ಮತ್ತೊಂದು ಘಟನೆ ನಡೆದಿರುವುದು ದುರಂತದ ವಿಷಯವಾಗಿದೆ ಎಂದು ವಿಷಾಧಿಸಿದರು,
ಸ್ವಾತ್ಮತ್ರ್ಯ ದಿನಾಚರಣೆಯ ರಾಷ್ಟ್ರೀಯ ಹಬ್ಬದ ದಿನದಂದು ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ಇಡದೆ ನಿರ್ಲಕ್ಷಿಸಿರುವುದು ಕೆ.ಎಸ್.ಆರ್.ಟಿ.ಸಿ. ವ್ಯವಸ್ಥಾಪಕ ರಮೇಶ್ ಬಾವು ಅವರು ಸರ್ಕಾರದ ಕಾನೂನು ಉಲ್ಲಂಘಟನೆಯಾಗಿದೆ. ಇವರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಿಗಮದ ಇತರೆ ಸಿಬ್ಬಂದಿಗಳಾದ ಸಂಚಾರಿ ಅಧೀಕ್ಷಕ ಗೋಪಿ, ಹೆಡ್ ಮ್ಯಾಕಾನಿಕ್ ಕೆ.ಹೆಚ್. ಈರಪ್ಪ, ತರಭೇತಿಯ ಪ್ರಾಂಶುಪಾಲ ಅರಣ್ ಕುಮಾರ್. ಎ.ಟಿ.ಎಸ್. ಮನೋಹರ್ ಇವರುಗಳು ಅಂಬೇಡ್ಕರ್ ಅವರ ಭಾವಚಿತ್ರವನ್ನು ಇಡದೆ ಗಾಮಧಿಜೀಯವರ ಒಂದು ಪೋಟೋ ಇಟ್ಟು ಕಾಟಚಾರದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವ ಮೂಲಕ ಅಪಮಾನ ಮಾಡಿದ್ದಾರೆ ಎಂದು ದೂರಿದ್ದಾರೆ.
ಮುಂದಿನ ದಿನಗಳಲ್ಲಿ ಇಂಥಹ ಘಟನೆಗಳನ್ನು ಮರುಕಳುಹಿಸದಂತೆ ಇರಲು ಸರ್ಕಾರವು ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸ ಬೇಕು, ಮುಂದೆ ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ತಮ್ಮ ಪಾದರಕ್ಷೆಗಳನ್ನು ಕಳಜಿ ದೀಪಗಳನ್ನು ಬೆಳಗ ಬೇಕು, ಧ್ವಜಾರೋಹಣ ಮಾಡ ಬೇಕು, ಪುಷ್ಪನಮನಗಳನ್ನು ಸಲ್ಲಿಸ ಬೇಕು ಎಂದು ಆಗ್ರಹಿಸಿದ ಅವರು ಇವರ ವಿರುದ್ದು ತೆಗೆದು ಕೊಳ್ಳುವ ಕ್ರಮವು ಬೇರೆಯವರಿಗೆ ಪಾಠವಾಗ ಬೇಕೆಂದು ತಿಳಿಸಿದರು,
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂಘಟನಾ ಸಂಯೋಜಕ ಟೀಕಲ್ ನಾರಾಯಣಸ್ವಾಮಿ ಉಪಸ್ಥಿತರಿದ್ದರು,