ಅಂಬೇಡ್ಕರ್ ಭಾವಚಿತ್ರ ನಿರ್ಮಾಣಕ್ಕೆ ಅಡ್ಡಿ;ಡಿಸಿಗೆ ಮನವಿ

ಕೋಲಾರ,ಸೆ.೨೫- ತಾಲ್ಲೂಕಿನ ಸೂಲಿಕುಂಟೆ ಪಂಚಾಯಿತಿ ವ್ಯಾಪ್ತಿಯ ಅಕ್ಷತ್ರಗೊಲ್ಲಹಳ್ಳಿ ಗ್ರಾಮದ ಸರ್ವೆನಂ.೧೨ರಲ್ಲಿ ಸರ್ಕಾರಿ ಬಂಡೆ, ವಿಸ್ತೀರ್ಣ ೨ಎಕರೆ ೩೪ಗುಂಟೆ ಪೈಕಿ ೧೦ಗುಂಟೆ ಜಮೀನನ್ನು ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕಾಗಿ ಸ್ಥಳ ಮಂಜೂರಾತಿ ಮಾಡಿಕೊಡಬೇಕೆಂದು ಪ್ರಜಾಶಕ್ತಿ ಸೇವಾ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷ ಕಾವರನಹಳ್ಳಿ ಜಿ.ಬ್ಯಾಟಪ್ಪ ಅವರು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಈ ವೇಳೆ ಮನವಿ ಸ್ವೀಕರಿಸಿ ಮಾತನಾಡಿ ಜಿಲ್ಲಾಧಿಕಾರಿಗಳು, ಒಂದು ವಾರದೊಳಗೆ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಇರ್ತಥ್ಯಪಡಿಸುವುಗಾಗಿ, ಬಿ.ಆರ್.ಅಂಬೇಡ್ಕರ್ ಭವನ ಹಾಗೂ ಭಾವಚಿತ್ರಕ್ಕೆ ೧೦ಗುಂಟೆ ಜಮೀನನ್ನು ಮೀಸಲಿಡುತ್ತೇವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಆಂಜಪ್ಪ, ಕೋಕಿಲ, ಜಯಮ್ಮ, ನಾಗರಾಜ್, ಹಾಗೂ ಗ್ರಾಮಸ್ಥರು, ಸಂಘದ ಪದಾಧಿಕಾರಿಗಳು ಮುಂತಾದವರು ಇದ್ದರು