
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.24: ಬೀದರ್ ಜಿಲ್ಲೆಯ
ಬಾಲ್ಕಿ ತಾಲೂಕಿನ ಮಾರೂರ ಗ್ರಾಮದಲ್ಲಿ ಶನಿವಾರ ರಾತ್ರಿ ಡಾ. ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಸಗಣಿ ಬಳಿದು ಅವಮಾನ ಮಾಡಿದಂತ ಕಿಡಿಗೇಡಿಗಳನ್ನು ಕೂಡಲೆ ಪತ್ತೆ ಹಚ್ಚಿ ಬಂಧಿಸಿ ಉಗ್ರ ಶಿಕ್ಷೆಯನ್ನು ವಿಧಿಸಿ ಗಡಿಪಾರು ಮಾಡಬೇಕೆಂದು
ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದೆ.
ಅಂಬೇಡ್ಕರ್ ಅವರ ನಾಮ ಫಲಕದ ಮೇಲಿನ ಭಾವಚಿತ್ರಕ್ಕೆ ಸಗಣಿ ಬಳಿದು ಅವಮಾನ ಮಾಡಿರುತ್ತಾರೆ ಈ ಹಿಂದೆ ಕೂಡ ಇಂತಹ ಘಟನೆ ಮಾರೂರ ಗ್ರಾಮದಲ್ಲಿ ಜರುಗಿತ್ತು. ಇದೀಗ ಮತ್ತೆ ಉದ್ದೇಶಪೂರ್ವಕವಾಗಿ ಕಿಡಿಗೇಡಿಗಳು ಅಂಬೇಡ್ಕರ್ ಅವರಿಗೆ ಅವಮಾನ ಮಾಡಿ ವಿಕೃತಿ ಎಸೆಗಿದ್ದಾರೆ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಸಿ ಬಳಿದು ಅವಮಾನ ಮಾಡಿದ್ದನ್ನು ನೋಡಿದರೆ ಬರಿ ದಲಿತ ವರ್ಗಕ್ಕೆ ಅವಮಾನ ಮಾಡಿದಂತಲ್ಲ ಇಡೀ ಭಾರತ ದೇಶದ ನಾಗರಿಕರಿಗೆ ಅವಮಾನ ಮಾಡಿ ಮನುಕುಲವೇ ತಲೆತಗ್ಗಿಸುವಂಥಾಗಿದೆ.
ದುಷ್ಕಮಿಗಳನ್ನು ಕೂಡಲೇ ಪತ್ತೆ ಹಚ್ಚಿ ಅವರ ಮೇಲೆ ಪ್ರಕರಣ ದಾಖಲಿಸಿಕೊಂಡು ಬಂಧಿಸಿ ಉಗ್ರ ಶಿಕ್ಷೆಯನ್ನು ವಿಧಿಸಿ ಗಡಿಪಾರು ಮಾಡಬೇಕೆಂದು
ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಶಂಕರ್ ನಂದಿಹಾಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.