ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಧನಸಹಾಯ ಭರವಸೆ

ಕೋಲಾರ,ಏ.೭:ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ದೊಡ್ಡವಲಗಮಾದಿ ಗ್ರಾಮ ಪಂಚಾಯತಿಯ ಸಿಂಗರಹಳ್ಳಿ ಗ್ರಾಮದಲ್ಲಿ, ಸಮಾಜ ಸೇವಕ ಹಾಗೂ ಕಾಂಗ್ರೆಸ್ ಮುಖಂಡರಾದ ಬೈರಗಾನಹಳ್ಳಿ ಗ್ರಾಮದ ಸದಸ್ಯ, ಕಿರಣ್ ಅವರು, ಗ್ರಾಮದಲ್ಲಿ, ಅಂಬೇಡ್ಕರ್ ಭವನ ಮತ್ತು ಮಹಾದ್ವಾರ ನಿರ್ಮಾಣಕ್ಕೆ ಹಾಗೂ ದೇವಸ್ಥಾನದ ಅಭಿವೃದ್ಧಿಗಾಗಿ ಧನ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ.
ಈ ವೇಳೆ ಕಿರಣ್ ಅವರು ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಸಂಚರಿಸಿ ಕಾಂಗ್ರೆಸ್ ಪಕ್ಷ ಬಲಪಡಿಸುವುದಲ್ಲದೇ ಮುಂದಿನ ತಾಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಚುಣಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದು ಹೇಳಿದರು.
ನಮ್ಮ ಜನಪ್ರಿಯ ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳು ಜನತೆಗೆ ತಿಳಿದಿದೆ. ಅವರ ನೇತೃತ್ವದಲ್ಲಿ ಗ್ರಾಮಗಳಲ್ಲಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು, ಸರ್ವ ಧರ್ಮಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಚುನಾವಣೆಗೆ ಈಗಿನಿಂದಲೆ ಸಿದ್ದರಾಗಲು ಕಿವಿಮಾತು ಹೇಳಿದರು. ಚಿಕ್ಕವಲಗಮಾದಿ ಮಾಜಿ ಸದಸ್ಯ ಮಾತನಾಡಿ ನಮ್ಮ ಕಿರಣ್ ಸರ್ ಅವರು ಪ್ರತಿ ಗ್ರಾಮಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ಅವರಿಗೆ ದೇವರು ಸುಖ, ಶಾಂತಿ, ನೆಮ್ಮದಿ ಆರೋಗ್ಯ ಆಯಸ್ಸು ಭಗವಂತ ನೀಡಿ ಗ್ರಾಮಗಳ ಜನತೆಗೆ ಒಂದು ವರವಾಗಿ ಬಂದಿದ್ದಾರೆ. ಇವರ ಸೇವೆಯನ್ನು ಸದುಪಯೋಗಪಡಿಸಿ ಕೊಳ್ಳೋಣವೆಂದು ತಿಳಿಸಿದರು. ಈ ಸಂದರ್ಭದಲ್ಲಿ ದೊಡ್ಡವಲಗಮಾದಿ ಗ್ರಾ.ಪಂ ಉಪಾಧ್ಯಕ್ಷ ಆಲಿಂಖಾನ್ ಸಿಂಗರಹಳ್ಳಿ ಹಾಗೂ ಚಿಕ್ಕವಲಗಮಾದಿ ಗ್ರಾಮಗಳ ಸದಸ್ಯರಾದ ಚೌಡಪ್ಪ ಮತ್ತು ಮುನಿಸ್ವಾಮಿ, ದೊಡ್ಡಚಿನ್ನಹಳ್ಳಿ ಸುಬ್ರಮಣಿ, ಐಮಾಸಪುರ ಜೀವನ್, , ಚಿಕ್ಕವಗಲಮಾದಿ ಮಾಜಿ ಗ್ರಾ.ಪಂ ಸದಸ್ಯ ಅಂಬೇಡ್ಕರ್, ಕಾಂಗ್ರೆಸ್ ಮುಖಂಡರಾದರಾಜ್‌ಕುಮಾರ್,ಮಲ್ಲೇಶ್, ಹಾಗೂ ಹಿರಿಯರು, ಸಿಂಗರಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.