ಅಂಬೇಡ್ಕರ್ ಭವನ ದುರಸ್ತಿಗೊಳಿಸಲು ಶಿವಕುಮಾರ್ ಮನವಿ

ಮಾನವಿ.ಮಾ.೨೭- ಪಟ್ಟಣದ ಕೋನಾಪುರು ಪೇಟೆಯ ವಾರ್ಡ್ ನಂಬರ್ ೧೦ ರಲ್ಲಿ ಇರುವ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಭವನವನ್ನು ದುರಸ್ತಿ ಮಾಡುವುದರ ಜೊತೆಗೆ ಸಮರ್ಪಕ ವಿದ್ಯುತ್ ಸೌಲಭ್ಯ ಹಾಗೂ ಭವನದ ಹೊರಗಡೆ ಮರಮ್ ಹಾಕಿಸಿ ನವೀಕರಣಗೊಳಿಸುವಂತೆ ಒತ್ತಾಯಿಸಿ ಪತ್ರಕರ್ತ ಶಿವಕುಮಾರ್ ಜಗ್ಲಿ ಪುರಸಭೆ ಮುಖ್ಯಾಧಿಖಾರಿಗೆ ಮನವಿ ಪತ್ರ ಸಲ್ಲಿಸಿದರು.
ಸುಮಾರು ಏಳು ಎಂಟು ವರ್ಷಗಳ ಹಿಂದೆ ಭವನಕ್ಕೆ ಸುಣ್ಣ ಬಣ್ಣ ಬಳಿದು ವಿದ್ಯುತ ರಿಪೇರಿ ಕೆಲಸವನ್ನು ಮಾಡಿದ್ದು ಅಲ್ಲಿಂದ ಇಲ್ಲಿಯವರೆಗೆ ಭವನಕ್ಕೆ
ಯಾವುದೇ ರೀತಿಯಾಗಿ ದುರಸ್ತಿಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸದೆ ಅಂಬೇಡ್ಕರ್ ಭವನವನ್ನು ಹದಗೆಟ್ಟ ಸ್ಥಿತಿಗೆ ಕಾರಣವಾಗಿದ್ದರೆ.
ಮುಂದಿನ ತಿಂಗಳು ೧೪ ಕ್ಕೆ ಡಾ. ಬಿ.ಆರ್ ಅಂಭೆಡ್ಕರ್ ಜಯಂತಿ ಇರುವ ಕಾರಣ ಪಾಳು ಬಿದ್ದಿರಿವ ಭವನಕ್ಕೆ ಸುಣ್ಣ ಬಣ್ಣ ಬಳಿದು ಮತ್ತು ವಿದ್ಯುತ್‌ಗೆ ಸಂಬಂದಿಸಿದ ಎಲ್ಲಾ ರೀತಿಯ ಫ್ಯಾನ್ ಹಾಗೂ ಬಲ್ಬ್ ಮತ್ತು ಭವನದ ಹೊರಾಂಗಣದ ಮೈದಾನಕ್ಕೆ ಮರಂ ಹಾಕಿ ಭವನದ ಮುಂದಿರುವ ಹದಗೆಟ್ಟಿರುವ ಚರಂಡಿಯನ್ನು ದುರಸ್ತಿಗೊಳಿಸಿ ಮುಂಬರುವ ಅಂಬೇಡ್ಕರ್ ದಿನಾಚರಣೆಗೆ ಕಟ್ಟಡವನ್ನು ನೂತನ ಕಟ್ಟವನ್ನಾಗಿ ಮಾರ್ಪಡಿಸಿಕೊಡಬೇಕೆಂದು ಇದೇ ವೇಳೆ ಪತ್ರಕರ್ತ ಶಿವಕುಮಾರ್ ಜಗ್ಲಿ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.