ಅಂಬೇಡ್ಕರ್ ಭವನಕ್ಕೆ ಮರುಕಳಿಸಿದ ಜೀವ

ಕೋಲಾರ,ಡಿ.೭: ಕೋಲಾರ ಜಿಲ್ಲಾಡಳಿತ ಏರ್ಪಡಿಸಿದ್ದ ೬೫ ನೇ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿಗಳಾದ ಡಾ.ಸೆಲ್ವಮಣಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಉಕೇಶ್ ಕುಮಾರ್, ಜಿಲ್ಲಾ ರಕ್ಷಣಾಧಿಕಾರಿ ಡೆಕ್ಕಾ ಕಿಶೋರ್ ಬಾಬು ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ ಕೋಲಾರ ಜಿಲ್ಲಾ ಶಾಖೆ ವತಿಯಿಂದ ಜಿಲ್ಲಾ ಸಂಚಾಲಕ ನಾಗನಾಳ ಮುನಿಯಪ್ಪ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಕೋಲಾರ ನಗರದಲ್ಲಿ ಕಳೆದ ೨೦ ವರ್ಷಗಳ ಹಿಂದೆ ಅನೇಕ ದಲಿತ ಸಂಘಟನೆಗಳ ಒತ್ತಾಯದಿಂದ ಕೊಡಿಕಣ್ಣೂರು ಕೆರೆ ಅಚ್ಚು ಪ್ರದೇಶದಲ್ಲಿ ಅಂಬೇಡ್ಕರ್ ಭವನ ಕಟ್ಟಡ ನಿರ್ಮಾಣವಾಯಿತು. ಆದರೆ ಇದರಿಂದ ದಲಿತರಿಗೆ ಯಾವುದೇ ಪ್ರಯೋಜನವಾಗಲಿಲ್ಲ ತರಾತುರಿಯಲ್ಲಿ ಅಂದಿನ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿರವರು ಉದ್ಘಾಟನೆ ಮಾಡಿ ಹೋದ ಮೇಲೆ ೫ ವರ್ಷಗಳ ಕಾಲ ಅದು ಆಳ ಬಿದ್ದಿತ್ತು. ಮತ್ತೆ ದಲಿತ ಸಂಘಟನೆಗಳ ಒತ್ತಾಯದ ಮೇರೆಗೆ ಇಂದು ಜಿಲ್ಲಾ ಸಮಾಜ ಕಲ್ಯಾಣ ಕಚೇರಿ ಕೆಲಸ ನಿರ್ವಹಿಸುತ್ತಿದೆ. ದಲಿತ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ತರಭೇತಿ ನೀಡುವ ಕೇಂದ್ರವಾಗಬೇಕಾಗಿತ್ತು ಮತ್ತು ಸುಸಜ್ಜಿತವಾದ ಗ್ರಂಥಾಲಯ, ಅಂಬೇಡ್ಕರ್ ಅದ್ಯಯನ ಕೇಂದ್ರ ಪ್ರಾರಂಭ ಮಾಡಬೇಕಾಗಿತ್ತು ಆಗ ಮಾತ್ರ ಈ ಕಟ್ಟಡ ಸಾರ್ಥಕವಾಗುತ್ತದೆ ಎಂದರು.
ಈ ವೇಳೆ ಸಂಚಾಲಕರಾದ ನಾಗನಾಳ ಮುನಿಯಪ್ಪ, ರಾಜ್ಯ ಸಂಘಟನಾ ಸಂಚಾಲಕರಾದ ಸುಲಿಕುಂಟೆ ರಮೇಶ್, ಎಚ್. ಮುನಿಚೌಡಪ್ಪ, ಗನ್ ವೆಂಕಟರವಣಪ್ಪ, ಮದನಹಳ್ಳಿ ವೆಂಕಟೇಶ್, ಮುದುವತ್ತಿ ಕೇಶವ, ಗೋವಿಂದರಾಜು, ಟಿ. ಎಂ ನಾರಾಯಣಪ್ಪ, ಗಂಗಮ್ಮನ ಪಾಳ್ಯ ರಾಮಯ್ಯ, ವರದೇನಳ್ಳಿ ವೆಂಕಟೇಶ್, ಗಾಂಧಿನಗರ ಯಲ್ಲಪ್ಪ, ಡಾ.ಚಂದ್ರಶೇಖರ್, ಪಂಡಿತ್ ಮುನಿವೆಂಕಟಪ್ಪ ಹಾಜರಿದ್ದರು.