ಅಂಬೇಡ್ಕರ್ ಬರೆದ ಸಂವಿಧಾನ ಜಗತ್ತಿಗೆ ಮಾದರಿ: ಶಂಕರಗೌಡ ಬಿರಾದಾರ

ಬಸವನಬಾಗೇವಾಡಿ:ಎ.15: ಇಡೀ ಜಗತ್ತಿನಲ್ಲಿ ರಾಜಕೀಯ ಸಮಾಜ ಸಂಸ್ಕøತಿ ಆರ್ಥಿಕತೆ ಎಲ್ಲವನ್ನು ಒಟ್ಟಾಗಿ ನೋಡಿದ ಪರಿಪೂರ್ಣ ಚಿಂತಕರು ಯಾರಾದರೂ ಇದ್ದರೆ ಅವರೇ ಡಾ:ಬಾಬಾಸಾಹೇಬ್ ಅಂಬೇಡ್ಕರ್ ಅವರು ಎಂದು ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷರಾದ ಶಂಕರಗೌಡ ಬಿರಾದಾರ್ ಅವರು ಹೇಳಿದರು
ಪಟ್ಟಣದ ವೀರರಾಣಿ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಜಯಂತೋತ್ಸವದ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ದೇಶದಲ್ಲಿ ಗಟ್ಟಿಯಾದ ಪ್ರಜಾಪ್ರಭುತ್ವವನ್ನು ರೂಪಿಸುವ ಹಾಗೂ ರಾಜಕೀಯ ಅಧಿಕಾರವನ್ನು ಅರ್ಥಪೂರ್ಣವಾಗಿ ಬಳಸುವ ಅಂಬೇಡ್ಕರ್ ಮಾದರಿಯನ್ನು ಸರಿಯಾಗಿ ಅರಿಯುವ ಅಗತ್ಯವಿದೆ ದೇಶದಲ್ಲಿ ಸ್ವಾತಂತ್ರ್ಯ ಚಳುವಳಿ ನಡೆಯುತ್ತಿದ್ದ ಸಂದರ್ಭದಲ್ಲಿ ಸಾವಿರಾರು ವರ್ಷಗಳಿಂದ ರಾಜರು ವಿದೇಶಿ ಸುಲ್ತಾನರು ಪಾಳೇಗಾರರು ಜಮೀನುದಾರರು ಪುರೋಹಿತರು ಪ್ರಬಲ ಜಾತಿಗಳು ಹಾಗೂ ಬ್ರಿಟಿಷರ ಪ್ರಭುತ್ವ ಇವೆಲ್ಲದರ ಗುಲಾಮಗಿರಿಗೆ ಒಗ್ಗಿ ಹೋಗಿದ್ದ ಜನರಿಗೆ ತಮ್ಮನ್ನೇ ತಾವು ಆಳಿಕೊಳ್ಳುವ ಪ್ರಜಾಪ್ರಭುತ್ವವನ್ನು ಕಲಿಸುವುದು ಹೇಗೆ ಎಂಬ ಸವಾಲು ಅಂಬೇಡ್ಕರ್ ಅವರ ಎದುರಿಗಿತ್ತು ಈ ಸವಾಲಿಗೆ ಉತ್ತರ ಹುಡುಕಿ ಅವರು ಆಳವಾದ ಅಧ್ಯಯನ ಚಿಂತನೆಗಳನ್ನು ನಡೆಸಿದರು ಪೂರಕವಾದ ಕ್ರಿಯೆಗಳನ್ನು ರೂಪಿಸಿ ಪ್ರಜಾಪ್ರಭುತ್ವದ ಆಶಯಗಳಿಗೆ ಪ್ರಬಲ ಅಡ್ಡಿಯಾಗಿದ್ದ ಭಾರತೀಯರ ಜಾತಿಪೀಡಿತ ಮೆದುಳುಗಳನ್ನು ಸ್ವಚ್ಛಗೊಳಿಸುವ ಕೆಲಸ ಮಾಡಿ ಜಾತಿ ಪದ್ಧತಿಯ ಸರ್ವಾಧಿಕಾರವನ್ನು ಹಿಮ್ಮಟ್ಟಿಸಿ ವ್ಯಕ್ತಿ ಜಾತಿಪ್ರಜ್ಞೆಯಿಂದ ಬಿಡುಗಡೆ ಪಡೆಯದಿದ್ದರೆ ಭಾರತೀಯರಿಗೆ ವ್ಯಕ್ತಿ ಸ್ವಾತಂತ್ರ್ಯವಾಗಲಿ ಸಾಮಾಜಿಕ ಪ್ರಜಾಪ್ರಭುತ್ವವಾಗಲಿ ದಕ್ಕುವುದಿಲ್ಲ ಎಂಬುದನ್ನು ಮನಗಂಡ ಅವರು ನಮ್ಮ ದೇಶಕ್ಕೆ ಬೇಕಾಗಿರುವ ಸಂವಿಧಾನವನ್ನು ರಚನೆ ಮಾಡಿದ ಮಹಾನ್ ಪುರುಷ ಅಂಬೇಡ್ಕರ್ ರವರು ಸದಾ ಶೋಷಿತರ ದುರ್ಬಲರ ಏಳಿಗೆಗೆ ಶ್ರಮಿಸಿ ನಮ್ಮ ದೇಶಕ್ಕೆ ಮಾದರಿಯಾದಂತಹ ಸಂವಿಧಾನವನ್ನು ಕೊಟ್ಟಿದ್ದಾರೆ ಆ ಸಂವಿಧಾನವನ್ನು ಉಳಿಸುವ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯ ಪ್ರಜೆಗಳ ಮೇಲಿದೆ ಎಂದು ಹೇಳಿದರು

ಈ ಸಂದರ್ಭದಲ್ಲಿ ರಾಷ್ಟ್ರೀಯ ಬಸವ ಸೈನ್ಯದ ಮುಖಂಡರಾದ ಶ್ರೀಕಾಂತ್ ಕೊಟ್ರಶೆಟ್ಟಿ ಸುನಿಲ್ ಗೌಡ ಚಿಕ್ಕೋಂಡ ಮನ್ನಾನ ಶಾಬಾದಿ ಪ್ರಶಾಂತ್ ಮುಂಜಾನೆ ನಿಂಗಪ್ಪ ಅವಟಿ ರವಿ ರಾಠೋಡ್ ಜಟ್ಟಿಂಗರಾಯ ಮಾಲಗಾರ ಶಂಕರಸಿಂಗ ರಜಪೂತ್ ಮಲ್ಲು ಬನಾಸಿ ಶಿದ್ದು ಬಿರಾದಾರ ಮಾಂತೇಶ್ ಹೆಬ್ಬಾಳ್ ಮತಾಬ್ ಬೊಮ್ನನಹಳ್ಳಿ ಸಿದ್ದಲಿಂಗ ಒಡೆಯರ್ ಬಸವರಾಜ್ ಅವಟಿ ಮಾಂತೇಶ್ ಮನಗೂಳಿ ಭೀಮನಗೌಡ ಚಿಕ್ಕೋಂಡ ರಾಮಣ್ಣ ಕಲ್ಲೂರ್ ಶ್ರೀಶೈಲ ಚೌರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು