ಅಂಬೇಡ್ಕರ್  ಬದುಕು ಎಲ್ಲರಿಗೂ ಸ್ಪೂರ್ತಿದಾಯಕ.

ಹರಪನಹಳ್ಳಿ.ಏ.೧೫ : ಪಟ್ಟಣದ ಬಾಪೂಜಿ ನಗರದಲ್ಲಿ ತಾಲ್ಲೂಕು ಅಂಬೇಡ್ಕರ್ ಸಂಘದ ವತಿಯಿಂದ ಡಾ.ಬಿ.ಆರ್ ಅಂಬೇಡ್ಕರ್ ರವರ 132 ಹಾಗೂ ಬಾಬು ಜಗಜೀವನ್ ರಾಂ ಅವರ 116 ನೆ ಜಯಂತ್ಯುತ್ಸವನ್ನು ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನಲೆ ಸರಳವಾಗಿ ಆಚರಿಸಲಾಯಿತು ಪ್ರಗತಿ ಪರ ಚಿಂತಕ ಹಿರಿಯ ಪತ್ರಕರ್ತ ಅಲಗಿಲವಾಡದ ಎ.ಎಂ.ವಿಶ್ವನಾಥ್ ಮಾತನಾಡಿ ಬಾಬು ಜಗಜೀವನ್ ರಾಮ್ ಅವರು 1936 ರಿಂದ 1986 ರವರೆಗೆ 50 ವರ್ಷಗಳ ನಿರಂತರ ಸಂಸದರಾಗಿ ವಿಶ್ವ ದಾಖಲೆಯನ್ನು ಹೊಂದಿದ್ದಾರೆ.ಬಾಬೂಜಿ ಎಂದು ಜನಪ್ರಿಯರಾದ ಬಾಬು ಜಗಜೀವನ್ ರಾಮ್ ಅವರು ರಾಷ್ಟ್ರೀಯ ನಾಯಕ, ಸ್ವಾತಂತ್ರ‍್ಯ ಹೋರಾಟಗಾರ ಮತ್ತು ಸಾಮಾಜಿಕ ನ್ಯಾಯದ ಪ್ರತಿಪಾದಕರಾಗಿದ್ದರು. ಅವರು ಏಪ್ರಿಲ್ 5, 1908 ರಂದು ಬಿಹಾರದ ಚಂದ್ವಾ ಗ್ರಾಮದಲ್ಲಿ ಸೋಭಿ ರಾಮ್ ಮತ್ತು ವಸಂತಿ ದೇವಿ ದಂಪತಿಗಳಿಗೆ ಜನಿಸಿದರು.06 ಫೆಬ್ರವರಿ 1977 ರಂದು ನವದೆಹಲಿಯಲ್ಲಿ ನಡೆದ ಜನತಾ ಪಕ್ಷದ ರ್ಯಾಲಿಯಲ್ಲಿ ಜಯಪ್ರಕಾಶ್ ನಾರಾಯಣ್ ಮತ್ತು ಜಗಜೀವನ್ ರಾಮ್ (ಬಲ), ಭಾರತದ ಮಾಜಿ ಉಪ ಪ್ರಧಾನ ಮಂತ್ರಿತನ್ನ ಜಾತಿಯ ಕಾರಣದಿಂದ ತಾರತಮ್ಯವನ್ನು ಎದುರಿಸುತ್ತಿದ್ದರೂ, ಅವರು ತನ್ನ ತಾಯಿಯ ಮಾರ್ಗದರ್ಶನದೊಂದಿಗೆ ತನ್ನ ಮೆಟ್ರಿಕ್ಯುಲೇಷನ್ ಅನ್ನು ಪಾಸು ಮಾಡಿದರು. ನಂತರ ಅವರು ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ತಮ್ಮ ಅಂತರ ವಿಜ್ಞಾನ ಪರೀಕ್ಷೆಯನ್ನು ಪೂರ್ಣಗೊಳಿಸಿದರು ಮತ್ತು ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಪದವಿ ಪಡೆದರು. ಬಾಬು ಜಗಜೀವನ್ ರಾಮ್ ಅವರು ತುಳಿತಕ್ಕೊಳಗಾದ ವರ್ಗಗಳಿಗೆ ಸಮಾನ ಹಕ್ಕುಗಳಿಗಾಗಿ ಹೋರಾಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟರು’ಸಂವಿಧಾನ ಶಿಲ್ಪಿ’ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನ. ಪ್ರತಿ ವರ್ಷ ಏಪ್ರಿಲ್ 14 ರಂದು ಭಾರತದ ಸಂವಿಧಾನ ಶಿಲ್ಪಿ, ಭಾರತ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಡಾ.ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದ್ದೇವೆ. ನಮ್ಮ ದೇಶದ ಪ್ರತಿಯೊಬ್ಬರ ಪಾಲಿನ ಪವಿತ್ರ ಗ್ರಂಥವಾದ ಸಂವಿಧಾನದ ಹಿಂದಿನ ದೊಡ್ಡ ಶಕ್ತಿ ಬಾಬಾ ಸಾಹೇಬ್ ಅಂಬೇಡ್ಕರ್.ಅAಬೇಡ್ಕರ್ ಅವರ ಬದುಕು ಎಲ್ಲರಿಗೂ ಸ್ಫೂರ್ತಿ. ಸಮಾನತೆ, ಪ್ರಗತಿಯ ಕನಸು ಕಂಡ ಮೇರು ನಾಯಕ ನಮ್ಮ ಹೆಮ್ಮೆಯ ಸಂವಿಧಾನ ಶಿಲ್ಪಿ. ಇವರ ಆದರ್ಶ ಎಲ್ಲರ ಜೀವನಕ್ಕೆ ದಾರಿ. ಬಾಬಾ ಸಾಹೇಬರ ಚಿಂತೆನೆಗಳು ಇಂದಿಗೂ ಯುವಜನೆತೆಗೆ ಸ್ಫೂರ್ತಿ ನೀಡುತ್ತಲೇ ಇದೆ ಎಂದರು 

ವರದಿಗಾರ ಎಸ್.ಎನ್. ಸತೀಶ್ ಕುಮಾರ್ ಮಾತನಾಡಿ ಮಾಜಿ ಉಪ ಪ್ರಧಾನಿ ಬಾಬು ಜಗಜೀವನ್ ರವರು ಈ ದೇಶದ ರೈತರಿಗಾಗಿ ಹಸಿರು ಕ್ರಾಂತಿಯನ್ನೇ ಮಾಡಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ರವರು ಸಂದೇಶದAತೆ ಅಸ್ಪೃಶ್ಯತೆ, ಬಡತನ ನಿವಾರಣೆಗಾಗಿ ಆರ್ಥಿಕವಾಗಿ ಸದೃಢವಾಗಿರಿ ತಮ್ಮ ಮಕ್ಕಳನ್ನು ಶಿಕ್ಷಣವಂತರಾನ್ನಾಗಿ ಮಾಡಿ ಎಂದು ಕರೆನೀಡಿದರು