ಅಂಬೇಡ್ಕರ್ ಪ್ರತಿಯೊಬ್ಬರಿಗೂ ಮಾದರಿ- ಬಸವರಾಜ ಬ್ರೂಸ್ಲಿ

ಸಂಡೂರು:ಏ:18: ಪ್ರತಿಯೊಬ್ಬ ಯುವಕರಿಗೆ ಅಂಬೇಡ್ಕರ ಮಾದರಿ ನಾಯಕ ಅವರು ಬಾಲ್ಯದಿಂದಲೂ ಸಹ ಹೋರಾಟದ ಬದುಕನ್ನು ಸಾಗಿಸಿ ಅತಿ ಹೆಚ್ಚು ಶಿಕ್ಷಣ ಪಡೆಯುವ ಮೂಲಕ ಶಿಕ್ಷಣದ ಮಹತ್ವವನ್ನು ತಿಳಿಸಿದವರು ಡಾ. ಬಿ.ಅರ್. ಅಂಬೇಡ್ಕರ್ ಅಗಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿಯ ನಗರ ಘಟಕದ ಅಧ್ಯಕ್ಷ ಬಸವರಾಜ್ ಬ್ರೂಸ್ಲಿ ತಿಳಿಸಿದರು.
ಅವರು ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ರಾತ್ರಿ ಕ್ಯಾಂಡಲ್ (ದೀಪ) ಹಚ್ಚಿ ಡಾ.ಬಿ.ಅರ್. ಅಂಬೇಡ್ಕರ್ ಅವರ ಹುಟ್ಟು ಹಬ್ಬಕ್ಕೆ ಚಾಲನೆ ನೀಡಿ ಪ್ರತಿಯೊಬ್ಬ ಅಭಿಮಾನಿಯೂ ಸಹ ದೀಪ ಬೆಳಗಿಸಿ ಅಂಬೇಡ್ಕರ್ ಜಯಂತಿಯ ಶುಭಕೋರಿದರು.
ಈ ಸಂದರ್ಭದಲ್ಲಿ ಬಸವರಾಜ ಬ್ರೂಸ್ಲಿ ಮಾತನಾಡಿ ಡಾ. ಅಂಬೇಡ್ಕರ್ ಎಂದರೆ ಬರೀ ಒಬ್ಬ ವ್ಯಕ್ತಿಯಲ್ಲ ಅವರೊಂದು ಶಕ್ತಿ, ಅವರು ಸಾಗಿದ ಮಾರ್ಗ ತಪ್ಪಸ್ಸಿನ ಮಾರ್ಗವಾಗಿತ್ತು, ಅದ್ದರಿಂದಲೇ ಅವರಿಗೆ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಸಂವಿಧಾನ ರಚಿಸುವಂತಹ ಶಕ್ತಿಯನ್ನು ಪಡೆದುಕೊಂಡಿದ್ದರು, ಅವರು ಬರೀ ಸಂವಿಧಾನ ಶಿಲ್ಪಿಯಲ್ಲದೆ ಒಬ್ಬ ಶ್ರೇಷ್ಠ ಅರ್ಥಿಕ ತಜ್ಞ, ರಾಜಕಾರಣಿ, ಕಾರ್ಮಿಕ ಮುಖಂಡ, ದಲಿತ ನಾಯಕ, ಸಮಾನತೆಯ ಹರಿಕಾರ, ಏಕತೆಯ ಬುನಾದಿ, ಅಂತಹ ಎಲ್ಲಾ ಉತ್ತಮ ಅಂಶಗಳನ್ನು ಜಗತ್ತಿಗೆ ನೀಡಿದ್ದಾರೆ, ಅವರು ನೀಡಿದ ಸಂದೇಶ ಇಂದು ನಾವೆಲ್ಲರೂ ಪಾಲಿಸುವ ಮೂಲಕ ಉತ್ತಮ ಪ್ರಜೆಗಳಾಗುವುದು ಅತಿ ಅಗತ್ಯವಾಗಿದೆ. ಎಂದರು.
ಕಾರ್ಯಕ್ರಮದಲ್ಲಿ ಇಡೀ ಲಕ್ಷ್ಮೀಪುರ ಗ್ರಾಮದ ಮುಖಂಡರು, ಸಮಾಜದ ಗಣ್ಯರು ಉಪಸ್ಥಿತರಿದ್ದರು ಡಾ. ಬಿ.ಅರ್. ಅಂಬೇಡ್ಕರ್ ಜಯಂತಿ ಆಚರಿಸಿದರು.