ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಗಾಯತ್ರಿ ಸಿದ್ದೇಶ್ವರ್

ಸಂಜೆವಾಣಿ ವಾರ್ತೆ

ದಾವಣಗೆರೆ.ಏ.೧೪: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮತಿ ಗಾಯಿತ್ರಿ ಸಿದ್ದೇಶ್ವರ್ ರವರು ದಾವಣಗೆರೆಯ ಅಂಬೇಡ್ಕರ್ ನಗರದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಅಂಬೇಡ್ಕರ್ ಜಯಂತಿ ಆಚರಿಸಿದರು.ಈ ವೇಳೆ ಮಾತನಾಡಿದ ಅವರು ದೇಶಕ್ಕೆ ಸಂವಿಧಾನ ರಚಿಸಿದ ಕೀರ್ತಿ ಮಹಾನ್ ನಾಯಕ ಡಾ.ಬಿ.ಆರ್ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ.ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲಾ ನಡೆಯಬೇಕು ಎಂದರು.ನಮ್ಮ ಪ್ರಧಾನಿ‌ನರೇಂದ್ರ ಮೋದಿಯವರು ಕೂಡ ಮಹಾನ್ ನಾಯಕ ಅವರು ಮತ್ತೊಮ್ಮೆ ದೇಶದ ಚುಕ್ಕಾಣಿ ಹಿಡಿಯಬೇಕಿದೆ ಅದಕ್ಕಾಗಿ‌ ಪ್ರಬುದ್ದ ಮತದಾರರು ದೇಶದ ಹಿತಕ್ಕಾಗಿ,ಭದ್ರತೆಗಾಗಿ ಹಾಗೂ ಭವಿಷ್ಯಕ್ಕಾಗಿ ಮೋದಿಜಿ ಬೆಂಬಲಿಸಬೇಕು ಎಂದರು.ನನ್ನನ್ನು ಲೋಕಸಭೆಗೆ ಆರಿಸಿ ಕಳಿಸಿ ಮೋದಿ ಗೆಲ್ಲಿಸಬೇಕೆಂದರು ಈ ಸಂದರ್ಭದಲ್ಲಿ ಬಿಜೆಪಿ ಯುವ ನಾಯಕ ಜಿ.ಎಸ್.ಅನಿತ್ ಕುಮಾರ್, ಜಿಲ್ಲಾಧ್ಯಕ್ಷ ರಾಜಶೇಖರ, ವಿರೋಧ ಪಕ್ಷದ ನಾಯಕ ಪ್ರಸನ್ನ ಕುಮಾರ್, ಎಸ್.ಟಿ. ವಿರೇಶ್, ಗೌರಮ್ಮ ಗಿರೀಶ್, ಆಲೂರ್ ನಿಂಗರಾಜ್, ರಾಜಪ್ಪ, ಗಂಗಾಧರ, ಶಿವಾನಂದ್, ಶ್ರಿನಿವಾಸ್, ಮಂಜನಾಯ್ಕ್,  ಕಡ್ಲಬಾಳು ಧನಂಜಯ್, ರಾಜನಹಳ್ಳಿ ಶಿವಕುಮಾರ್, ಹನುಮಂತ ನಾಯ್ಕ್, ಎಸ್ಸಿ ಘಟಕದ ಕಾರ್ಯಕರ್ತರು, ಮುಖಂಡರು ಇದ್ದರು…