ಅಂಬೇಡ್ಕರ್ ಪ್ರತಿಮೆಗೆ ನೆರಳಿನ ವ್ಯವಸ್ಥೆ

ಅರಸೀಕೆರೆ, ಜು. ೨೪- ನಗರದ ಅಂಬೇಡ್ಕರ್ ವೃತ್ತದಲ್ಲಿರುವ ಡಾ. ಅಂಬೇಡ್ಕರ್ ರವರ ಪ್ರತಿಮೆಯನ್ನು ೨೦೧೦-೧೧ನೇ ಸಾಲಿನಲ್ಲಿ ಪ್ರತಿಷ್ಠಾಪಿಸಲಾಗಿದ್ದು, ಈ ಪ್ರತಿಮೆಗೆ ಮಳೆ ಮತ್ತು ಬಿಸಿಲಿನ ರಕ್ಷಣೆಗಾಗಿ ಅಗತ್ಯ ಸೂರನ್ನು ಸಹ ನಗರಸಭೆ ಒದಗಿಸಿದೆ. ಅಲ್ಲದೆ ಫೋಕಸ್ ಲೈಟ್‌ಗಳನ್ನು ಅಳವಡಿಸಿ ರಾತ್ರಿಯೂ ಕೂಡ ಮೂರ್ತಿಯೂ ಸುಂದರವಾಗಿ ಕಾಣುವಂತೆ ನಗರಸಭೆ ನಿರ್ವಹಿಸಿದೆ.
ನಗರಸಭಾ ಅಧ್ಯಕ್ಷ ಗಿರೀಶ್ ಆರೋಗ್ಯ ಹಿರಿಯ ನಿರೀಕ್ಷಕ ರೇವಣ್ಣ ಹಾಗೂ ಸಿಬ್ಬಂದಿಗಳು, ಡಾ. ಅಂಬೇಡ್ಕರ್ ರವರ ಪ್ರತಿಮೆಯನ್ನ ಸ್ವಚ್ಛಗೊಳಿಸಿದರು. ಅಧ್ಯಕ್ಷರು ಸ್ವಚ್ಛಗೊಳಿಸುವಂತೆ ಸೂಚಿಸಿದ್ದರೆ ಸಾಕಿತ್ತು. ಕೆಲಸ ಆಗುತ್ತಿತ್ತು. ಆದರೆ ತಾವು ಸಹ ಸ್ವಚ್ಛತಾ ಕಾರ್ಯದಲ್ಲಿ ಸಾಥ್ ನೀಡಿ ಮಾದರಿಯಾದರು.
ಈ ಪ್ರತಿಮೆ ಸ್ವಚ್ಛತಾ ಕಾರ್ಯದಲ್ಲಿ ಈವರೆಗೆ ಸಕ್ರಿಯವಾಗಿ ಪಾಲ್ಗೊಂಡವರೆಂದರೆ ಗಿರೀಶ್ ಮಾತ್ರ ಎನ್ನಬಹುದು.