
ಸಿರವಾರ,ಏ.೧೫- ಜಗ್ಗತೆ ಮೆಚ್ಚುವ ನಾಯಕ ಡಾ.ಬಿ.ಆರ್.ಅಂಬೇಡ್ಕರ್, ಅವರು ಇಲ್ಲದ ಭಾರತ ಊಹಿಸಿಕೊಳಲು ಅಸಾದ್ಯವಾಗಿದೆ, ಒಂದು ವೇಳೆ ಅವರು ಭಾರತದಲ್ಲಿ ಹುಟ್ಟದೆ ಇದರೆ ನಾನು ಸೇರಿ ಅನೇಕ ದಲಿತ, ಅಲ್ಪಸಂಖ್ಯಾತರು ರಾಜಕೀಯ ಪ್ರಾತಿನಿದ್ಯ ಸಿಗುತ್ತಿರಲಿಲ, ಶಾಸಕರಾಗುತ್ತಿರಲಿಲ್ಲ ಎಂದು ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.
ತಾಲೂಕಿನ ಗಣದಿನ್ನಿ ಗ್ರಾಮದಲ್ಲಿ ನಡೆದ ಅಂಬೇಡ್ಕರ್ ಅವರ ೧೩೨ ನೇ ಜಯಂತ್ಯೋತ್ಸವ ಹಾಗೂ ಪುತ್ಥಳಿ ಅನಾವರಣಗೊಳಿಸಿ ನಂತರ ಮಾತನಾಡಿದ ಅವರು, ಭಾರತ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಡಾ.ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನ ಭಾರತೀಯರ ಪವಿತ್ರ ಗ್ರಂಥವಾದ ದೇಶದ ಆತ್ಮವೆಂದೇ ಕರೆಯಬಹುದಾದ ಸಂವಿಧಾನ ರಚನೆಯ ಹಿಂದಿನ ಶಿಲ್ಪಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬದುಕು, ಅವರ ಆದರ್ಶಗಳು ಭಾರತೀಯರ ಪಾಲಿಗೆ ಸ್ಪೂರ್ತಿ, ಎಲ್ಲರಲ್ಲೂ, ಎಲ್ಲದರಲ್ಲೂ ಸಮಾನತೆಯನ್ನು ಕಂಡ ಓರ್ವ ನಾಯಕ. ಇವರ ಚಿಂತನೆಗಳು ಎಲ್ಲ ಯುವ ಜನತೆಗೂ ಸ್ಪೂರ್ತಿದಾಯಕ.
ದೇಶದ ಪ್ರತಿಯೊಬ್ಬ ನಾಗರಿಕನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾನ ಅವಕಾಶಗಳನ್ನು ಪಡೆದುಕೊಂಡು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಬೆಳೆದು ದೇಶದ ಅಭಿವೃದ್ದಿಗಾಗಿ ಸರ್ವರೂ ಕೊಡುಗೆ ನೀಡಬಲ್ಲ ವ್ಯವಸ್ಥೆಯನ್ನು ಜಾರಿಗೆ ತರಲು ಸಂವಿಧಾ ನವನ್ನು ರಚಿಸಿದ ಧೀಮಂತ ನಾಯಕ ಸಂವಿ ಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಎಂದು ಹೇಳಿದರು.
ಇದೇ ವೇಳೆ ಗ್ರಾಮದ ಗ್ರಾಮ ಪಂಚಾಯತಿ ಯಿಂದ ಪುತ್ಥಳಿ ವರೆಗೆ ಮಹಿಳೆಯರ ಕಳಸ ಡೊಳ್ಳು ಕುಣಿತದೊಂದಿಗೆ ಭಾವಚಿತ್ರ ಮೆರವಣಿಗೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಬಲ್ಲಟಿಗಿ, ಗ್ರಾ.ಪಂ ಸದಸ್ಯರಾದ ಸೂಗುರಯ್ಯ ಸ್ವಾಮಿ, ಮುದುಕಪ್ಪ ನಾಯಕ ಗರಡಿ, ನೀಲಮ್ಮ ಗಂಡ ಪ್ರಕಾಶ, ಹನುಮಂತ ಹರಿಜನ, ದಾನಪ್ಪ, ಎಂ ಮನೋಹರ್, ಲಕ್ಷ್ಮಣ ಸಿರವಾರ, ಎಪಿಎಂಸಿ ಮಾಜಿ ಅಧ್ಯಕ್ಷ ಮೌಲಸಾಬ್ ಗಣದಿನ್ನಿ, ಸುಕೇಂದ್ರ ರೆಡ್ಡಿ ಗೌಡ, ಎಸ್ಡಿಎಂಸಿ ಅಧ್ಯಕ್ಷ ಮಲ್ಲೇಶ ನಾಯಕ, ಮಲ್ಲೇಶ ಮಾಚನೂರು, ವಿಜಯ ಮಾಚನೂರು, ಜೆಜಿ ರಾಮ, ರವಿಕುಮಾರ್, ಹನುಮಂತ ಬಲ್ಲಟಿಗಿ, ಉಮೇಶ, ಜಂಬಣ್ಣ, ದೇವಪ್ಪ, ಯಲ್ಲಪ್ಪ, ರಾಜು, ಕೃಪದಾಸ್, ಬಸ್ಸಪ್ಪ ಅಮರೇಶ ಸೇರಿದಂತೆ ದಲಿತ ಮುಖಂಡರು ಹಾಗೂ ಯುವಕರಿದ್ದರು.