ಅಂಬೇಡ್ಕರ್ ಪರಿನಿರ್ವಾಣ ದಿನ ಅರ್ಥಪೂರ್ಣವಾಗಿರಲಿ

ಕೋಲಾರ,ಡಿ,೮- ವಿಶ್ವನಾಯಕ ಡಾ. ಬಿ.ಆರ್.ಅಂಬೇಡ್ಕರ್ ರವರು ಪರಿನಿರ್ವಾಣವಾಗಿ ೬೭ ವಷ್ ಕಳೆದಿದೆ ಅವರ ಜೀವಿತಾವಧಿ ೬೫ ವರ್ಷದಲ್ಲಿ ೫೦ ವರ್ಷ ಮೇಲ್ಪಟ್ಟು ತಮ್ಮ ಜೀವನವನ್ನು ಸಮುದಾಯದ ಪರ ದ್ವನಿ ಎತ್ತುವುದರ ಮುಲಕ ಹೋರಾಟ ಸಂಘರ್ಷಗಳಲ್ಲೇ ಸವೆದಿದ್ದಾರೆ ಅವರ ದೇಶದ ಆಸ್ತಿಯೆಂಬುದಕ್ಕಿಂತ ವಿಶ್ವದ ಶಕ್ತಿ ಆಗಿದ್ದಾರೆ ಎಂದು ದಲಿತ ಹಕ್ಕುಗಳ ರಕ್ಷಣ ಸಮಿತಿ ರಾಜಾದ್ಯಕ್ಷ ಎಂ.ಆರ್.ಚೇತನ್ ಬಾಬು ಅಭಿಪ್ರಾಯಪಟ್ಟರು .
ನಗರದ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡಿದ ದಲಿತ ಸಂಘಟನೆಗಳ ಒಕ್ಕೂಟವನ್ನು ಉದ್ದೇಶಿಸಿ ಅವರು ಮಾತನಾಡಿ ಅಂಬೇಡ್ಕರ್ ರವರು ನಿದ್ರಿಸುತ್ತಿದ್ದುದು ಕೆಲವು ಗಂಟೆಗಳು ಮಾತ್ರ ಅವರಿಗೆ ಕನಸುಗಳಿರಲಿಲ್ಲ ಆದರೆ ತಮ್ಮ ಜಿವನದುದ್ದಕ್ಕೂ ಕಂಡಿದ್ದ ಅಸ್ಪೃಶ್ಯತೆ ಮತ್ತು ವರ್ಗಭೇದ ಹಾಗೂ ಸಮುದಾಯಕ್ಕೆ ಸಿಗಬೇಕಾದ ಹಕ್ಕುಗಳಿಗಾಗಿ ಚಿಂತನೆ ಮಾಡುತಿದ್ದರು ಹಾಗಾಗಿ ಅವರ ಚಿಂತನೆಗಳನ್ನ ಸಾಕಾರಗೊಳಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಇಂದಿಗೂ ವಿಫಲವಾಗಿವೆ ಎಂದು ಹೇಳಿದರು.
ಆರ್ಥಿಕವಾಗಿ ರಾಜಕೀಯವಗಿ ಮತ್ತು ಶೈಕ್ಷಣಿಕವಾಗಿ ಮುಂದುವರೆದವರು ತಮ್ಮ ಸಮುದಾಯದವರನ್ನು ಮೇಲೆತ್ತಲು ಮನಸ್ಸು ಮಾಡುತ್ತಿಲ್ಲ ಇದು ಬೇಸರದ ಸಂಗತಿಯಾಗಿದೆ . ಅಂಬೇಡ್ಕರ್ ರವರು ಸ್ವಾರ್ಥಕ್ಕಾಗಿ ಬದುಕಿದ್ದರೆ ಅಥವಾ ಜನಾಂಗಕ್ಕಾಗಿ ಬದುಕಿದ್ದರೆ ಎಂಬುದಲ್ಲಿ ಆಲೋಚಿಸಬೇಕಾಗಿದೆ ಎಂದರು.
ಹಿರಿಯ ದಲಿತ ಮುಖಂಡ ನಾರಾಯಣಸ್ವಾಮಿ ಮಾತನಾಡಿ ಅಂಬೇಡ್ಕರ್ ರವರು ಮೊಟ್ಟಮೊದಲು ಈ ದೇಶದಲ್ಲಿ ರೂಪಾಯಿ ಮೌಲ್ಯದ ಕುರಿತು ಪ್ರಭಂದ ಮಂಡಿಸಿದವರು ಭಾರತೀಯ ರಿಸರ್ವ ಬ್ಯಾಂಕ್ ಸ್ಥಪನೆ ಮಾಡಿದ ಮೊದಲ ವ್ಯಕ್ತಿ ಮತ್ತು ದೇಶದ ಸರ್ವ ಜನಾಂಗದ ಜನರಿಗೆ ವೋಟಿನ ಹಕ್ಕು ನೀಡಿದವರು ಅವರನ್ನು ಪ್ರತಿಯೊಬ್ಬರು ನೆನೆಯಬೆಕು ಎಂದು ತಿಳಿಸಿದರು .
ನಗರಸಭೆ ಸದಸ್ಯ ಪ್ರವಿಣ್‌ಗೌಡ ಮಾತನಾಡಿ ಅಂಬೇಡ್ಕರ್ ರವರು ಕೇವಲ ಒಂದು ಜಾತಿಗೆ ಮಾತ್ರ ಸಂವಿಧಾನ ನೀಡಿಲ್ಲ ಅವರ ಜೊತೆಯಲ್ಲಿ ಸಂವಿಧಾನ ರಚನಾ ಸಮಿತಿಯಲ್ಲಿ ಇದ್ದವರೂ ಕ್ಯಕೊಟ್ಟರು ದೇಶಕ್ಕೆ ಸುಸಂಭದ್ದವಾದ ಸಂವಿಧಾನ ನೀಡಿರುವುದರಿಂದ ಇಂದು ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಾಗಿದೆ ಎಂದರು .
ದಲಿತ ಸಿಂಹ ಸೇನೆ ರಾಜ್ಯಾಧ್ಯಕ್ಷ ಹೂವಳ್ಳಿ ಪ್ರಕಾಶ್ ಮಾತನಾಡಿ ಹೆಣ್ಣು ಮಕ್ಕಳಿಗೆ ಮಿಸಲಾತಿ, ಹಕ್ಕು ಹಾಗೂ ಸವಶ್ಯಕತೆಗಳನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಅಂಬೇಡ್ಕರ್ ರವರು ಹಿಂದೂ ಕೋಡ್‌ಬಿಲ್ ಮಂಡನೆಗೆ ಅವರ ಪಟ್ಟ ಶ್ರಮವನ್ನು ಮಹಿಳೆಯರು ಮರೆಯುವಂತಿಲ್ಲ ಎಂದು ಹೇಳಿದರು .
ಕಾರ್ಯಕ್ರಮದಲ್ಲಿ ಎಸ್ಸಿ, ಎಸ್ಟಿ ಡಿಎಂ ಪ್ರತೀಮಾ, ಮುಖಡಂರಾದ ಖಾದ್ರಿಪುರ ಬಾಬು, ಅಂಬೇಡ್ಕರ್ ನಗರ ಸೋಮಶೇಖರ್ , ಸಾಹುಕಾರ ಶಂಕರಪ್ಪ, ಹೆಚ್ ಎನ್ .ಮೂರ್ತಿ, ಡಿಎಸ್‌ಎಸ್ ಲಕ್ಷ್ಮಿ, ಜೈಬೀಮ್ ಗಣೇಶ್, ಶ್ಯಾಂ , ಗೋವಿಂದ, ಶ್ರೀನಿವಾಸ್, ರವಿ, ಅಶೋಕ್ ಮುಂತಾದವರು ಉಪಸ್ಥಿತರಿದ್ದರು.