ಅಂಬೇಡ್ಕರ್ ಪರಿನಿರ್ವಾಣ ದಿನ ಆಚರಣೆ

ಕೋಲಾರ,ಡಿ.೭: ಕರ್ನಾಟಕ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಕೋಲಾರ ಜಿಲ್ಲಾ ಶಾಖೆ ವತಿಯಿಂದ ವೇಮಗಲ್ ನಗರದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಅಂಬೇಡ್ಕರ್ ರವರ ೬೬ನೇ ಪರಿ ನಿರ್ವಹಣ ದಿನವನ್ನು ಬಹಳ ಅದ್ದೂರಿಯಿಂದ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಜಿಲ್ಲಾಧ್ಯಕ್ಷ ಪುರಹಳ್ಳಿ ಜಿ ಯಲ್ಲಪ್ಪ, ಉಪಾಧ್ಯಕ್ಷ ನಾಗನಾಳ ರಮೇಶ್, ಪ್ರಧಾನ ಕಾರ್ಯದರ್ಶಿ ಕಲ್ಕೆರೆ ವಿಜಯಕುಮಾರ್, ಖಜಾಂಚಿ ಬಿ ನಾಗರಾಜ್, ಚನಪನಹಳ್ಳಿ ವೈರ್ ಮುನಿಯಪ್ಪ, ವೇಮಗಲ್ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರುಗಳಾದ ರಮೇಶ್, ಕೃಷ್ಣ, ನಾಗರಾಜ್, ವೇಮಗಲ್ ಆನಂದ್, ನಿವೃತ್ತ ಪಿಎಸ್.ಐ ಯಲ್ಲಪ್ಪ, ಹಿರಿಯ ಪತ್ರಕರ್ತ ನಾಗನಾಳ ನಾಗರಾಜ್, ಸಮಿತಿಯ ಸಂಘಟನಾ ಸಂಚಾಲಕರಾದ ನಾಗನಾಳ ಶಂಕರ್, ರಾಂಪುರ ಮುನಿರಾಜು, ಚನಪನಹಳ್ಳಿ ನಾಗರಾಜ್, ಕೆಇಬಿ ಚಂದ್ರು, ಜಿಂಕೆ ರಾಮು, ವಲ್ಲಬಿ ಮಂಜು, ವಿಜಿ, ಕೃಷ್ಣಾಪುರ, ಮಂಜುನಾಥ್, ವೆಂಕಟೇಶ್, ರಾಂಪುರ ಗ್ರಾಮ ಪಂಚಾಯಿತಿ ಸದಸ್ಯರಾದ ಅಂಬರೀಶ್, ವೇಮಗಲ್ ಯುವ ಮುಖಂಡ ಸಂದೀಪ್ ಇನ್ನು ಮುಂತಾದವರು ಹಾಜರಿದ್ದು ಜಿ ಗಂಗಪ್ಪ ಮತ್ತು ಸಂಗಡಿಗರಿಂದ ಕ್ರಾಂತಿಗೀತೆಗಳನ್ನು ನೆರವೇರಿಸಿದರು.