ಅಂಬೇಡ್ಕರ್ ನಿಮ್ಮೊಳಗೆ ನೆಲೆಸುವಂತೆ ಆಗಲಿ

ವಾಡಿ: ಡಿ.7:ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಭಾವನಾತ್ಮಕವಾಗಿ ನಂಬಿ ಪೂಜಿಸದೆ, ವೈಚಾರಿಕ ನೆಲೆಗಟ್ಟಿನಲ್ಲಿ ಅವರನ್ನು ಅರ್ಥಮಾಡಿಕೊಂಡು ಅವರು ನಿಮ್ಮೊಳಗೆ ನೆಲೆಸುವಂತಾಗಲಿ ಎಂದು ಡಾ.ಅಂಬೇಡ್ಕರ್ ಪದವಿ ಮಹಾವಿದ್ಯಾಲಯದ ಉಪನ್ಯಾಕ ವಸಂತ ವಾಸಿ ಹೇಳಿದರು.

ಡಾ ಅಂಬೇಡ್ಕರ್ ಅವರ 65ನೇ ಮಹಾ ಪರಿನಿರ್ವಾಣ ದಿನಾಚರಣೆ ನಿಮಿತ್ಯ ಸೋಮವಾರ ಡಾ.ಬಿ.ಆರ್. ಅಂಬೇಡ್ಕರ್ ತರುಣ ಸಂಘದ ವತಿಯಿಂದ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಆಯೋಜಿಸಲಾದ ರಕ್ತದಾನ ಶಿಬಿರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಅಂಬೇಡ್ಕರ್ ಬದುಕಿದ್ದಾಗಲೂ ಅವಮಾನ ಎದುರಿಸಿದ್ದರು, ತೀರಿಹೋದಮೇಲೂ ಅದು ಮುಂದುವರೆದಿರುವುದು ಈ ದೇಶದ ದುರಂತ, ಆದರೆ, ಅವರ ಬೇಳವಣಿಗೆಗೆ ಅವು ಯಾವುದೇ ಪರಿಣಾಮ ಬೀರಲಿಲ್ಲ ಎಂದರು.
ಈ ದೇಶದಲ್ಲಿ 18% ಪ್ರತಿಶತ ಮೀಸಲಾತಿ ಪಡೆದ ಎಸ್ಸಿ,ಎಸ್ಟಿಗಳು ಬಾಬಾ ಸಾಹೇಬರನ್ನು ದೇವರೆಂದು ಪೂಜಿಸಿದರೆ, 35% ಪ್ರತಿಶತ ಮೀಸಲಾತಿ ಪಡೆಯುತ್ತಿದ್ದ ಹಿಂದುಳಿದ ವರ್ಷಗಳು ಅಂಬೇಡ್ಕರ್ ಅವರನ್ನು ಅರ್ಥಮಾಡಿಕೊಳ್ಳದಿರುವು ವಿಶಾಧನೀಯ ಸಂಗತಿ. ಅವರ ಬರಹ ಭಾಷಣಗಳ ಸಂಪುಟ ಶೋಕೇಸ್‍ನಲ್ಲಿ ಶೃಂಗಾರ ವಸ್ತುಗಳಾಗಿ ಇಡದೇ ಓದಿ ಮನದಾಳದಲ್ಲಿ ಇರಿಸಿಕೊಳ್ಳಿ. ಈ ದೇಶದ ಮಹಿಳೆಯರಿಗಾಗಿ ಅವಿರತವಾಗಿ ದುಡಿದ ಅವರು, ಹಿಂದೂ ಕೋಡ್ ಬಿಲ್ ಬಿದ್ದುಹೋದ ಕಾರಣಕ್ಕಾಗಿ ಮಹಿಳೆಯರಿಗೆ ನ್ಯಾಯ ಕೊಡಿಸಲು ಸಾಧ್ಯವಾಗಿಲ್ಲ ಎಂದು ನೊಂದು ತಮ್ಮ ಸಚಿವ ಸ್ನಾನಕ್ಕೆ ರಾಜಿನಾಮೆ ನೀಡಿದ ಏಕೈಕ ವ್ಯಕ್ತಿ ಅಂಬೇಡ್ಕರ್ ಎಂದರು.

ಪೂಜ್ಯ ಭಂತೆ ಬುದ್ಧರತ್ನ ರಕ್ತದಾನ ನೀಡಿದರು ಈ ವೇಳೆಯಲ್ಲಿ 150ಕ್ಕೂ ಅಧಿಕ ಜನರು ಕಾರ್ಯಕ್ರಮದಲ್ಲಿ ರಕ್ತದಾನ ಮಾಡಿದರು.

ಈ ಸಂದರ್ಭದಲ್ಲಿ ಪೂಜ್ಯ ಭಂತೆ ಬುದ್ಧರತ್ನ ಪಂಚಶೀಲಗಳನ್ನು ಬೋಧಿಸಿದರು. ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮೆಹಮೂದ ಸಾಹೇಬ್, ಬೌದ್ಧ ಸಮಾಜದ ಅಧ್ಯಕ್ಷ ಟೋಪಣ್ಣ ಕೋಮಟೆ, ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ದೇವೇಂದ್ರ ನಿಂಬರ್ಗಾ, ಪದಾಧಿಕಾರಿಗಳಾದ ಇಂದ್ರಜಿತ್ ಸಿಂಗೆ, ಮಲ್ಲಿಕಾರ್ಜುನ್ ತುನ್ನೂರ, ಚಂದ್ರಸೇನ ಮೇನಗಾರ, ಸೂರ್ಯಕಾಂತ ರದ್ದೇವಾಡಿ, ಮುಖಂಡರಾದ ರಾಜು ಮುಕ್ಕಣ್ಣ, ಸಿದ್ದಣ್ಣ ಕಲಶೆಟ್ಟಿ, ವೀರಣ್ಣ ಯಾರಿ, ವಿಠ್ಠಲ ನಾಯಕ, ವಿಶಾಲ ನಂದೂರಕರ್, ಪಿಎಸ್ ಐ
ವಿಜಯಕುಮಾರ್ ಬಾವಗಿ, ಪಿಎಸ್ ಐ ತಿರುಮಲೇಶ್, ಎಸಿಸಿ.ಹೆಚ್.ಆರ್.ಮ್ಯಾನೇಜರ್ ಯತೀಶ ರಾಜಶೇಖರ್ ಇದ್ದರು. ರಣಧೀರ ನಿರೂಪಿಸಿದರು.