ಅಂಬೇಡ್ಕರ್ ದಿನಾಚರu

ಬಂಗಾರಪೇಟೆ,ಏ.೨- ತಾಲೂಕಿನ ಸಂಗೋoಡಹಳ್ಳಿ ಗ್ರಾಮದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಭೋಜನ ಸಮಕ್ಯ ಸಮಿತಿ ವತಿಯಿಂದ ಅಂಬೇಡ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಪುಷ್ಪ ಮಾಲೆ ಅರ್ಪಿಸಿ ಸದರಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಸಂಗೊoಡಹಳ್ಳಿ ಪಿಳ್ಳಪ್ಪ ಅವರು ಅಧ್ಯಕ್ಷತೆ ಹಾಗೂ ನೇತೃತ್ವವನ್ನು ವಹಿಸಿದ್ದರು. ಅವರು ಈ ಕುರಿತು ಮಾತನಾಡುತ್ತಾ, ಇಂದು ದಲಿತರಿಗೆ ಹಬ್ಬದ ದಿನವಾಗಿದೆ. ಏಕೆಂದರೆ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿದ ದಿನವಾಗಿರುವ ಕಾರಣ ಸಂಭ್ರಮದ ಹಬ್ಬವಾಗಿದೆ ಎಂದು ಹೇಳಬಹುದು. ಈ ದಿನವನ್ನು ನನ್ನ ಜೀವನ ಉದ್ದಕ್ಕೂ ಮರೆಯುವುದಿಲ್ಲ ಏಕೆಂದರೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಇಡೀ ವಿಶ್ವ ಸಂದ ದಲಿತರ ವಿಜಯೋತ್ಸವ ದಿನವಾಗಿದೆ ಎಂದು ಗುಣಗಾನ ಮಾಡಿದರು.