ಅಂಬೇಡ್ಕರ್ ತತ್ವ ಸಿದ್ದಾಂತದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು: ಡಾ. ಜಾವಿದ ಜಮಾದಾರ

ಸಂಜೆವಾಣಿ ವಾರ್ತೆ,
ವಿಜಯಪುರ,ಏ.20:ಮಹಾಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರ ಸ್ಮರಿಸಲು ಮತ್ತು ಅವರ ಚಿಂತನೆಗಳನ್ನು ದೇಶಾದ್ಯಂತ ಹರಡಲು ಅವರು ತೋರಿಸಿದಂತಹ ಅಸ್ಪøಶ್ಯತೆ ಸಾಮಾಜಿಕ ಸ್ವಾತಂತ್ರದ ಬಗ್ಗೆ ಜಾಗೃತಿ ಮೂಡಿಸಲು ಯುವಕರು ಪಣ ತೊಡಬೇಕೆಂದು ರಾಷ್ಟ್ರ ಪ್ರಶಸ್ತಿ ಪುರಸ್ಕøತರ ಪೌಂಢೇಶನದ ರಾಷ್ಟ್ರೀಯ ಅಧ್ಯಕ್ಷ ಡಾ. ಜಾವಿದ ಜಮಾದಾರ ನುಡಿದರು.
ನಗರದ ಜಿ.ಪಂ. ಮೈದಾನದಲ್ಲಿ ಡಾ. ಬಿ.ಆರ್. ಅಂಬೇಡ್ಕರ 133ನೇ ಜಯಂತಿ ಅಂಗವಾಗಿ ಗ್ಯಾಲಕ್ಷಿ ಕ್ಲಬ್ ಆಶ್ರಯದಲ್ಲಿ ವಿಜಯಪುರ ಐಪಿಎಲ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.
ಮಾನವ ಚೇತನರ ಜನ್ಮ ದಿನದಂದು ಯುವಕರಲ್ಲಿ ಕ್ರೀಡಾ ಪ್ರೇಮ ಸಹೋದರತೆಯ ಭಾವನೆ ಬೆಳೆಸುವ ಉದ್ದೇಶದಿಂದ ಕ್ರಿಕೆಟ್ ಪಂದ್ಯಾವಳಿ ಸಂಘಟಿಸಿದ್ದು ಶ್ಲಾಘನೀಯ. ಅವರ ಪರಿಕಲ್ಪನೆಯಂತೆ ಜಾತಿ ವ್ಯವಸ್ಥೆ ಸಮಾನತೆಗಾಗಿ ಶ್ರಮಿಸಬೇಕಾಗಿದೆ. ಯುವಕರು ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು ದೈಹಿಕವಾಗಿ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮೂಲಕ ರೋಗ ಮುಕ್ತ ಜೀವನಕ್ಕೆ ನಾಂದಿಯಾಗಬೇಕೆಂದರು.
ದಲಿತ ಮುಖಂಡ ನ್ಯಾಯವಾದಿ ನಾಗರಾಜ ಲಂಬು ಮಾತನಾಡಿ, ಡಾ. ಬಾಬಾಸಾಹೇಬ ಅವರು ಜನರ ಬಣ್ಣ ಜಾತಿ ಮತ್ತು ಧರ್ಮದ ತಾರತಮ್ಯವನ್ನು ಲೆಕ್ಕಿಸದೆ ಸ್ವತಂತ್ರವಾಗಿ ಬದಕಲು ಪ್ರೇರೆಪಿಸಿದರು. ನಮ್ಮ ದೇಶಕ್ಕೆ ವಿಶ್ವಕ್ಕೆ ಮಾದರಿಯಾಗುವಂತಹ ಶ್ರೇಷ್ಠ ಸಂವಿಧಾನ ನೀಡಿ ದೇಶದ ಅಭಿವೃದ್ಧಿಗೆ ನಾಂದಿ ಹಾಡಿದರು.
ಸುವಿದಾ ಸಹಕಾರಿ ಸಂಘದ ಅದ್ಯಕ್ಷ ಫಯಾಜ ಕಲಾದಗಿ ಮಾತನಾಡಿ, ಈ ಜಗತ್ತು ಕಂಡ ಶ್ರೇಷ್ಠ ವ್ಯಕ್ತಿ ಡಾ. ಬಿ.ಆರ್. ಅಂಬೇಡ್ಕರ ಅವರ ಜೀವನ ಮತ್ತು ಬೋಧನೆಗಳಿಂದ ನಾವು ಸ್ಪೂರ್ತಿ ಪಡೆಯೋಣ ಶಾಂತಿ ಅಹಿಂಸಾ ಮಾರ್ಗದಿಂದ ಲಿಂಗವನ್ನು ಲೆಕ್ಕಿಸದೇ ಗೌರವ ಮತ್ತು ಘನತೆಯಿಂದ ನಡೆದುಕೊಳ್ಳುವ ಸಮಾಜ ನಿರ್ಮಿಸಲು ಶ್ರಮಿಸೋಣ ಎಂದರು.
ಕಾರ್ಯಕ್ರಮದಲ್ಲಿ ಯುವ ಮುಖಂಡರಾದ ರಾಜ ತೊರವಿ, ಇಕಲಾಸ ಸುನ್ನೆವಾಲೆ, ನಿಜಾಮುದ್ದೀನ ಹರಿಮಾಲ, ಅಬ್ಬು ಅಂಬಾರಖಾನೆ ಉಪಸ್ಥಿತರಿದ್ದರು.