ಅಂಬೇಡ್ಕರ್ ತತ್ವ- ಆದರ್ಶಗಳ ಪಾಲನೆಗೆ ಕರೆ

ಜಗಳೂರು.ಏ.೧೫-: ಪಟ್ಟಣದ ಡಾ ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ನೂತನವಾಗಿ ನಿರ್ಮಿಸಿದ ಡಾ.ಬಿ.ಆರ್. ಬಾಬಾ ಸಾಹೇಬ್ ಅಂಬೇಡ್ಕರ್ 132ನೇ ಜಯಂತಿ ಪ್ರಯುಕ್ತ ಪುತ್ಥಳಿಗೆ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಮತ್ತು ತಾಲೂಕು ತಾಲೂಕು ಮಟ್ಟದ ಅಧಿಕಾರಿಗಳಿಂದ ಮಾಲಾರ್ಪಣೆ ಮಾಡಿ

ನಂತರ ತಾಲೂಕು ಕಚೇರಿ ಸಭಾಂಗಣದಲ್ಲಿ ಸರಳವಾಗಿ ಡಾ.ಬಿ ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.

ತಹಶೀಲ್ದಾರ್ ಸಂತೋಷ್ ಕುಮಾರ್ ಜಿ ಮಾತನಾಡಿ ಡಾ. ಬಿ ಆರ್. ಅಂಬೇಡ್ಕರ್  ಭಾರತಕ್ಕೆ ಸಂವಿಧಾನವನ್ನು ತಂದುಕೊಟ್ಟ ಮಹಾನ್ ವ್ಯಕ್ತಿ ಅವರ ತತ್ವ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕು ಅಂಬೇಡ್ಕರ್ ಅವರು ದೇಶ ವಿದೇಶಗಳಲ್ಲಿ ತಮ್ಮ ವಿದ್ಯಾಭ್ಯಾಸ ವನ್ನು ಮುಗಿಸಿ ಕಾನೂನು ತಜ್ಞರಾಗಿ ಸಂವಿಧಾನ ಶಿಲ್ಪಿಯಾಗಿ. ಭಾರತ ರತ್ನ ಎನಿಸಿಕೊಂಡ ಮಹಾನ್ ನಾಯಕ ಎಂಬ ಕೀರ್ತಿ ಡಾ. ಬಿ.ಆರ್ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದರು.ಈ ಸಂದರ್ಭದಲ್ಲಿ ಚುನಾವಣಾ ಅಧಿಕಾರಿ ಎಸ್.ರವಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾ ಯಕ ನಿರ್ದೇಶಕ ಬಿ.ಮಹೇಶ್ವರ ಪ್ಪ. ತಾಪಂ ಇ.ಓ ಚಂದ್ರ ಶೇಖರ್. ಪೋಲಿಸ್ ಸಬ್ ಇನ್ಸ್ಪೆಕ್ಟರ್ ಶ್ರೀನಿವಾಸ್. ಪ.ಪಂ ಮುಖ್ಯ ಅಧಿಕಾರಿ ಲೋಕ್ಯ ನಾಯ್ಕ ಆರ್. ಐ ಕುಬೇರ ನಾಯ್ಕ.ಡಾ.ಬಿ.ಆರ್ ಅಂಬೇಡ್ಕ ರ್ ಪುತಳಿ ಸಮಿತಿ ಅಧ್ಯಕ್ಷ ತುಪ್ಪದಹಳ್ಳಿ ಪೂಜಾರ್ ಸಿದ್ದಪ್ಪ.ದಲಿತ ಮುಖಂಡರಾದ ಸತೀಶ್.ಸೂರಗೊಂಡನಹಳ್ಳಿ ಕುಬೇಂದ್ರಪ್ಪ. ರಾಜನಟ್ಟಿ ಚಂದ್ರಪ್ಪ. ಓಬಣ್ಣ.ದೇವೇಂದ್ರಪ್ಪ. ನಿಂಗಪ್ಪ ಪ್ರಭು. ಆನೇಕಲ್ ಬಸವರಾಜಪ್ಪ ಮುಖಂಡರಾದ ಇಕ್ಬಾಲ್ ಅಹಮದ್. ತೋರಣಗಟ್ಟೆ ಬಡಪ್ಪ. ಬಾಬು.ಲಿoಗಣ್ಣನಹಳ್ಳಿ ತಿಪ್ಪೇಸ್ವಾಮಿ. ಸೇರಿದಂತೆ ಸಾರ್ವಜನಿಕರಿದ್ದರು