ಅಂಬೇಡ್ಕರ್ ಜಯಂತೋತ್ಸವ ಸಮಿತಿ ಅಧ್ಯಕ್ಷರಾಗಿ ರಾಜು ಸಂಕಾ ಆಯ್ಕೆ

ಕಲಬುರಗಿ:ಮಾ.03:ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಡಾ. ಬಿಆರ್ ಅಂಬೇಡ್ಕರ್ ಅವರ 133ನೇ ಜಯಂತೋತ್ಸವ ಸಮಿತಿಯ ಜಿಲ್ಲಾಧ್ಯಕ್ಷರಾಗಿ ಹಿರಿಯ ದಲಿತ ಮುಖಂಡ ರಾಜು ಸಂಕಾ ಅವರನ್ನು ಸರ್ವಾನುಮತದಿಂದ ಇಂದು ಆಯ್ಕೆ ಮಾಡಲಾಯಿತು.
ಕಲಬುರಗಿ ನಗರದ ರಾಜಪುರ ಹತ್ತಿರ ಇರುವ ಬೌದ್ಧ ಮಹಾಸಭಾ ಸಭಾಂಗಣದಲ್ಲಿ ಸಮಾಜದ ಸಮಸ್ತ ಹಿರಿಯರು- ಕಿರಿಯರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಡಾ. ವಿಠ್ಠಲ್ ದೊಡ್ಮನಿ ಅವರು ಸಮಾಜದ ಪ್ರಗತಿಗಾಗಿ, ಏಳಿಗೆಗಾಗಿ ತಾವೆಲ್ಲರೂ ಒಗ್ಗಟ್ಟಾಗಿ ನಿಸ್ವಾರ್ಥದಿಂದ ಕೆಲಸ ಮಾಡಬೇಕು ಡಾ. ಅಂಬೇಡ್ಕರ್ ರವರ ತತ್ವ ಸಿದ್ಧಾಂತಗಳನ್ನು ನಾವೆಲ್ಲರೂ ಹೆಚ್ಚು ಪ್ರಚಾರಪಡಿಸಬೇಕೆಂದು ಕರೆ ನೀಡಿದರು.
ಸಭೆಯಲ್ಲಿ ಸಮಾಜದ ಎಲ್ಲರ ಅಭಿಪ್ರಾಯ ಪಡೆದು ನೂತನ ಅಧ್ಯಕ್ಷರನ್ನು ಡಾ. ವಿಠ್ಠಲ್ ದೊಡ್ಡಮನಿಯವರು ಘೋಷಣೆ ಮಾಡಿದರು.
ಸಭೆಯಲ್ಲಿ ಜಿಲ್ಲಾ ಜಯಂತೋತ್ಸವ ಸಮಿತಿಯ ಮಾಜಿ ಅಧ್ಯಕ್ಷರುಗಳಾದ ಡಾ. ಅಂಬಾರಾಯ ಅಷ್ಠಗಿ, ದಿಗಂಬರ್ ಬೆಳಮಗಿ, ಪ್ರಕಾಶ್ ಮೂಲಭಾರತಿ, ಬಾಬು ವಂಟಿ, ಎಸ್ಎಸ್ ತಾವಡೆ, ಗುಂಡಪ್ಪ ಲಂಡನಕರ್, ಸುರೇಶ್ ಹಾದಿಮನಿ, ದೇವಿಂದ್ರ ಸಿನ್ನೂರ್, ರಾಜು ಕಪನೂರ್, ರಾಹುಲ್ ಉಪಾರೆ, ಶ್ರೀನಿವಾಸ್ ಲಾಖೆ, ಅವಿನಾಶ್ ಗಾಯಕ್ವಾಡ್, ವಿಶಾಲ್ ನವರಂಗ್, ಪ್ರಕಾಶ ಅವರಾದಕರ್, ದಿನೇಶ್ ದೊಡ್ಡಮನಿ,

ಸಮಾಜದ ಹಿರಿಯ ಮುಖಂಡರಾದ ಭೀಮರಾವ್ ತೇಗಲತಿಪ್ಪಿ, ಮಹದೇವ್ ಧನ್ನಿ, ದೇವೇಂದ್ರ ಕಪನೂರ್, ಹನುಮಂತ ರಾವ್ ದೊಡ್ಡಮನಿ, ರವಿ ಮದನ್ಕರ್, ಮಲ್ಲಿಕಾರ್ಜುನ್ ಸಾಗರ್ ಪವನ್ ಕುಮಾರ್ ವಳಕೇರಿ, ಚಂದ್ರಮ ಹುಬ್ಳಿ, ಪ್ರಕಾಶ ವಂಟಿ, ಬಸವರಾಜ್ ವಾಲಿ, ಶಿವ ಅಷ್ಠಗಿ, ಹನಮಂತ ಬೋದನ್, ರಾಜು ಬೆಹರೆ, ಭೀಮಾಶಾ ಧರಿ, ಪ್ರಕಾಶ್ ನಾಗನಳ್ಳಿ, ಶಿವು ದೊಡ್ಮನಿ, ಸೇರಿದಂತೆ ಸಮಾಜದ ನೂರಾರು ಜನರು ಸಭೆಯಲ್ಲಿ ಉಪಸ್ಥಿತರಿದ್ದರು.

“ಬಾಬಾಸಾಹೇಬ್ ಅಂಬೇಡ್ಕರ್ ರವರು ಸಂವಿಧಾನದ ಮೂಲಕ ದೇಶದ ಎಲ್ಲ ಸಮುದಾಯದವರಿಗೆ ಸಮಾನವಾದ ನ್ಯಾಯ ಒದಗಿಸಿದ್ದಾರೆ. ಅವರ ಜಯಂತಿಯನ್ನು ಕೇವಲ ದಲಿತ ಸಮುದಾಯ ಅಷ್ಟೇ ಅಲ್ಲ, ಎಲ್ಲ ಸಮುದಾಯದವರು ಆಚರಿಸುವಂತಾಗಬೇಕು, ದೇಶದ ಪ್ರಗತಿಗಾಗಿ ಅವರ ಮಾಡಿದ ಮಹಾನ್ ಕಾರ್ಯಗಳು ದೇಶದ ಯುವ ಜನತೆಗೆ ಹೆಚ್ಚು ತಲುಪಬೇಕಾಗಿದೆ.”
ಅಂಬಾರಾಯ ಅಷ್ಠಗಿ, ಹಿರಿಯ ದಲಿತ ನಾಯಕ