ಅಂಬೇಡ್ಕರ್ ಜಯಂತಿ ಸರಳವಾಗಿ ಆಚರಣೆ

ಬಳ್ಳಾರಿ,ಮಾ.30: ಕೋವಿಡ್-19 ಕರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಮುಂಬರುವ ಯುಗಾದಿ ಹೋಳಿ, ಷಭ್-ಎ-ಬರಾತ್, ಗುಡ್ ಫ್ರೈಡೇ, ಜಾತ್ರೆ ಉತ್ಸವಗಳು, ಸಮಾಜ ಸುಧಾರಕರು ಹಾಗೂ ಗಣ್ಯರ ಜಯಂತಿಗಳು ಇತ್ಯಾದಿ ಹಬ್ಬಗಳಲ್ಲಿ ಗುಂಪುಗೂಡುವಿಕೆ ಹಾಗೂ ಸಾರ್ವಜನಿಕ ಸಭೆಗಳನ್ನು ಸೇರುವುದನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿಗಳ ಆದೇಶ ಜಾರಿಗೊಳಿಸಿರುವ ಹಿನ್ನಲೆಯಲ್ಲಿ ಏ.05 ರಂದು ನಡೆಯುವ ಡಾ.ಬಾಬು ಜಗಜೀವನರಾಂ ಅವರ 114ನೇ ಮತ್ತು ಏ.14 ರಂದು ನಡೆಯುವ ಭಾರತರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 130ನೇ ಜಯಂತೋತ್ಸವವನ್ನು ಜಿಲ್ಲಾಡಳಿತದಿಂದ ಆಚಣೆ ಮಾಡಲು ಕರೆದಿದ್ದ ಪೂರ್ವಭಾವಿ ಸಿದ್ಧತಾ ಸಭೆಯನ್ನು ರದ್ದುಗೊಳಿಸಲಾಗಿದೆ ಎಂದು ಸಮಾಜಕಲ್ಯಾಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.ಸರ್ಕಾರದ ಮಾರ್ಗಸೂಚಿಯಂತೆ ಜಯಂತಿಗಳನ್ನು ಏ.5ರಂದು ಡಾ.ಬಾಬು ಜಗಜೀವನರಾಂ ಮತ್ತು ಏ.14ರಂದು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಸರಳವಾಗಿ ಆಚರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.