ಅಂಬೇಡ್ಕರ್ ಜಯಂತಿ: ಮದ್ಯಮಾರಾಟ ನಿಷೇಧ

ಕಲಬುರಗಿ,ಏ 13: ಜಿಲ್ಲೆಯಾದ್ಯಂತ ಮತ್ತು ನಗರದಲ್ಲಿ ನಾಳೆ ( ಏ 14) ಡಾ. ಬಿ.ಆರ್. ಅಂಬೇಡ್ಕರವರ 132ನೇ ಜಯಂತಿ ಆಚರಿಸಲಾಗುತ್ತಿದೆ. ಈ ನಿಮಿತ್ಯ ಉತ್ಸವ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊಂಡು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ನಗರದಲ್ಲಿ ಮತ್ತು ಜಿಲ್ಲೆಯಾದ್ಯಂತ ಇಂದು ಸಾಯಂಕಾಲ 6 ಗಂಟೆಯಿಂದ ಏ.15 ರ ಬೆಳಿಗ್ಗೆ 6 ಗಂಟೆಯವರೆಗೆ ಮುಂಜಾಗ್ರತ ಕ್ರಮವಾಗಿ ಎಲ್ಲಾ ತರಹದ ಮದ್ಯ, ಸರಾಯಿ, ಸೇಂಧಿ, ಸ್ವದೇಶಿ ಹಾಗೂ ವಿದೇಶಿ, ಮತ್ತು ಮಾದಕ ವಸ್ತುಗಳ ಮಾರಾಟ ಮಾಡುವುದನ್ನು ನಿಷೇಧಿಸಿ ಹಾಗೂ ಮದ್ಯದ ಅಂಗಡಿಗಳು,ಬಾರ್ ಅಂಡ್ ರೆಸ್ಟೋರೆಂಟಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಯಶವಂತ ಗುರುಕರ್ ಅವರು ಆದೇಶಿಸಿದ್ದಾರೆ.