ಅಂಬೇಡ್ಕರ್ ಜಯಂತಿ ಪ್ರಯುಕ್ತ ಮಜ್ಜಿಗೆ ವಿತರಣೆ

ದಾವಣಗೆರೆ.ಏ.೧೪: ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಇಂದು ನಗರದ ಜಯದೇವ ವೃತ್ತದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಹಾಗೂ ಹಸಿರು ಕ್ರಾಂತಿ ಹರಿಕಾರ ಬಾಬು ಜಗಜೀವ ರಾವ್ ರವರ ಜಯಂತಿ ಕಾರ್ಯಕ್ರಮವನ್ನು ಆಚರಣೆ ಮಾಡಲಾಯಿತು. ಈ ವೇಳೆ ವೇದಿಕೆಯ ರಾಜ್ಯಧ್ಯಕ್ಷ ಅವಿನಾಶ್ ವಿ  ಮಾತನಾಡಿ ನಾವು ವರ್ಷದ ಪೂರ್ತಿ ದಿನ ಹಬ್ಬ ಹರಿದಿನಗಳನ್ನು ಆಚರಣೆ ಮಾಡುತ್ತೇವೆ ಆದರೆ ಈ ಏಪ್ರಿಲ್ 14ನೇ ತಾರೀಕು ವಿಶೇಷವಾದ ದಿನ ಕಾರಣ ಈ ದಿನ ನಮಗೆ ಸಂವಿಧಾನವನ್ನು ನೀಡಿದ ವಿಶ್ವಜ್ಞಾನಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹುಟ್ಟಿದ ದಿನ ಅವರ ಹುಟ್ಟು ಹಬ್ಬವನ್ನು ನಾವೆಲ್ಲರೂ ವಿಜೃಂಭಣೆಯಿಂದ ಆಚರಿಸಬೇಕು ಎಂದು  ಹೇಳಿದರು. ಇದೇ ವೇಳೆ ಸುಮಾರು 2000 ಮಜ್ಜಿಗೆ ಪ್ಯಾಕೆಟ್ ಗಳನ್ನು ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ವಿತರಿಸಿದ್ದರು.  ಕಾರ್ಯಕ್ರಮದಲ್ಲಿ  ವೇದಿಕೆಯ ಮಹಿಳಾ ರಾಜ್ಯಾಧ್ಯಕ್ಷೆ ಮಾಲಾ ನಾಗರಾಜ್, ಬಿ ಹೆಚ್ ಮಂಜುನಾಥ್, ಆನಂದ್ ಇಟ್ಟಿಗುಡಿ, ಫಯಾಜ್ ಖಾನ್, ಬಸವರಾಜ್, ಮಂಜುನಾಥ್, ರಾಮನಗರ ರಾಕೇಶ, ಅನಿಲ್, ಅಕ್ಬರ್ ಭಾಷಾ, ಸದ್ದಾಮ್ ಹುಸೇನ್ ರಾಘವೇಂದ್ರ, ಡಿ ಜೆ ಬಸವರಾಜ ಎಲಿಗಾರ್, ಫೈರೋಜ್, ಅಮಾನ್, ನಾಗರಾಜ್  ಅನೇಕರು ಉಪಸ್ಥಿತರಿದ್ದರು.