ಅಂಬೇಡ್ಕರ್ ಜಯಂತಿ ನಿಮಿತ್ಯ ರಕ್ತದಾನ

ಜೇವರ್ಗಿ:ಎ.15 : ಸಂವಿಧಾನ ಶಿಲ್ಪ, ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ರವರ 132 ನೇ ಜಯಂತ್ಯೋತ್ಸವ ಸರಳವಾಗಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ರಕ್ತಧಾನ ಮಾಡಲಾಯಿತು.
ಪಟ್ಟಣದ ಡಾ. ಬಿ. ಆರ್. ಅಂಬೇಡ್ಕರ್ ಪುತ್ಥಳಿ ಆವರಣದಲ್ಲಿ 132 ನೇ ಜಯತ್ಯೋತ್ಸವ ನಿಮಿತ್ಯವಾಗಿ ಯುವಕರಿಂದ ರಕ್ತಧಾನ ಮಾಡಲಾಯಿತು.
ನಿತಿ ಸಂಹಿತೆ ಜಾರಿ ಇರುವುದರಿಂದ ಪಟ್ಟಣದಲ್ಲಿ ಯಾವುದೆ ರೀತಿಯ ಬಹಿರಂಗ ಸಭೆ ಹಾಗೂ ಮೇರವಣಿಗೆ ಮಾಡದೆ ಸರಳವಾಗಿ ಜಯಂತಿಯನ್ನು ಆಚರಿಸಲಾಯಿತು. ನಿತಿ ಸಂಹಿತೆಯನ್ನು ಪಾಲಿಸಬೇಕು ಎಂದು ತಾಲೂಕ ದಂಡಾಧಿಕಾರಿ ಪುರ್ವಭಾವಿ ಸಭೆಯಲ್ಲಿ ತಿಳಿಸಿದಂತೆ ಅವರ ನೇತೃತ್ವದಲ್ಲಿ ಬೆಳಿಗ್ಗೆ ಪುಸ್ಪನಮನ ಸಲ್ಲಿಸಲಾಯಿತು. ಅಧಿಕಾರಿಗಳು ಕೂಡ ಬಾಗವಹಿಸಿದರು. ಸಂವಿಧಾನ ಪೂರ್ವ ಪಿಠಿಕೆಯನ್ನು ಒದಿಸಲಾಯಿತು.
ಬೆಳಿಗ್ಗೆ 10 ಗಂಟೆಗೆ ಅಮರ ಬೊಮ್ಮನಳ್ಳಿ ಹಾಗೂ ಯುವಕರು ರಕ್ತಧಾನ ಮಾಡುವುದರ ಮುಲಕ ಬಾಬಾ ಸಾಹೇಬ್ ಅಂಬೇಡ್ಕರ್ ರವರಿಗೆ ನಮನ ಸಲ್ಲಿಸಿದರು. ಸುಮಾರು 25 ಕ್ಕು ಅಧಿಕ ಯುವಕರು ರಕ್ತಧಾನ ಮಾಡಿದರು. ಕಲಬುರಗಿಯ ನವಜೀವನ್ ಬ್ಲಡ್ ಬ್ಯಾಂಕ್ ನವರಿಗೆ ರಕ್ತಧಾನ ಮಾಡಲಾಯಿತು. ಪರಸ್ಪರ ಒಬ್ಬರಿಗೊಬ್ಬರು ಸಿಹಿ ಹಂಚಿಕೊಂಡು ಸಂತಸಪಟ್ಟರು.
ಈ ಸಂದರ್ಭದಲ್ಲಿ ಶಾಸಕ ಡಾ. ಅಜಯಸಿಂಗ್, ಶಿವರಾಜ ಪಾಟೀಲ್ ರದ್ದೆವಾಡಗಿ, ಚಂದ್ರಶೇಖರ ಹರನಾಳ, ರಾಜಶೇಖರ ಸಿರಿ, ಬಸವರಾಜ ಪಾಟೀಲ್ ನರಿಬೋಳ, ಮರೆಪ್ಪ ಬಡಿಗೇರ, ಸುಭಾಷ ಚನ್ನೂರ, ಶಾಂತಪ್ಪ ಕೂಡಲಗಿ, ಮಲ್ಲಣ ಕೊಡಚಿ, ಭಿಮರಾಯ ನಗನೂರ, ದೌಲಪ್ಪ ಮದನ್, ಪ್ರಭಾಕರ ಸಾಗರ, ರಾಜಶೇಖರ ಶಿಲ್ಪಿ, ರವಿ ಕೊಳಕೂರ, ಬೆಣ್ಣೆಪ್ಪ ಕೊಂಬಿನ್, ರವಿ ಕುಳಗೇರಿ, ಶ್ರೀಹರಿ ಕರಕಿಹಳ್ಳಿ, ಚಂದ್ರಶೇಖರ ನೇರಡಗಿ, ಸಂಗಮೇಶ ಕೊಂಬಿನ್, ಸಿದ್ದು ಕೇರುರ, ಬಸಣ್ಣ ಸರಕಾರ, ಬಸವರಾಜ ತೇಲ್ಕುರ್, ರಾಹುಲ್ ಪಂಚಶಿಲ್, ಮಹೇಶ ಕೋಕಿಲೆ, ವಿಕ್ರಮ ಬಡಿಗೇರ, ಅಮರ ಬೊಮ್ಮನಳ್ಳಿ, ದೇವರಾಜ ಕುಡಲಗಿ, ದೇವಿಂದ್ರ ಬಡಿಗೇರ, ಮಿಲಿಂದ ಸಾಗರ, ವಿಶ್ವ ಆಲೂರ, ದೇವರಾಜ ದೊಡ್ಮನಿ, ಘನಿ ರಾವಣ, ವಿಶ್ವರಾಧ್ಯ ಗೋಪಾಲ್ಕರ್ ಸೇರಿದಂತೆ ಅನೇಕರಿದ್ದರು.
ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಲು ಶಾಸಕ ಡಾ. ಅಜಯಸಿಂಗ್ ಆಗಮಿಸಿದರು. ಅದೆ ಸಂದರ್ಭದಲ್ಲಿ ಯುವಕರು ರಕ್ತಧಾನ ಮಾಡುವುದನನ್ನು ಕಂಡು ನಾನು ನಿಮ್ಮಜೋತೆ ಇಂದು ರಕ್ತಧಾನ ಮಾಡುತ್ತೆನೆ ಎಂದು ಸ್ವಯಂಪ್ರೇರಿತರಾಗಿ ರಕ್ತಧಾನ ಮಾಡಿದರು.