
ಸಂಜೆವಾಣಿ ವಾರ್ತೆ
ಕುಕನೂರು, ಮಾ.10: ಅಂಬೇಡ್ಕರ್ ಜಯಂತಿ ಆಚರಿಸಲು ಅಖಂಡ ಯಲಬುರ್ಗಾ ಕುಕನೂರು ತಾಲೂಕಿನ ಪ್ರತೀ ಹಳ್ಳಿಗೆ ಎನ್ ಸಿ ಪಿ ಪಕ್ಷದಿಂದ ಹತ್ತು ಸಾವಿರ ರೂಗಳ ಧನ ಸಹಾಯ ಮಾಡಲಾಗುವುದು ಎಂದು ಎನ್ ಸಿ ಪಿ ಅಭ್ಯರ್ಥಿ ಆರ್ ಹರೀಶ್ ಹೇಳಿದ್ದಾರೆ.
ಕುಕನೂರು ತಾಲೂಕಿನ ನಿಂಗಾಪುರ ಗ್ರಾಮದಲ್ಲಿ ಕಾರ್ಯಕರ್ತರು, ಮುಖಂಡರ ಎನ್ ಸಿ ಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದರು.
ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಹಿನ್ನೆಲೆಯಲ್ಲಿ ಮುಂಚಿತವಾಗಿ ಏಪ್ರಿಲ್ ಏಪ್ರಿಲ್ 10 ರ ಒಳಗೆ ಪ್ರತೀ ಹಳ್ಳಿಗೆ ಅಂಬೇಡ್ಕರ್ ಜಯಂತಿ ಆಚರಿಸಲು ಆರ್ಥಿಕ ಸಹಾಯ ಮಾಡತ್ತೇವೆ, ಅಲ್ಲದೇ ಮುಂಬರುವ ಜೂನ್ ತಿಂಗಳ ವೇಳೆಗೆ ಅವಳಿ ತಾಲೂಕಿನ ಪ್ರತೀ ರೈತರಿಗೆ ಎನ್ ಸಿ ಪಿ ಪಕ್ಷದಿಂದ ಉಚಿತ ಗೊಬ್ಬರ ನೀಡಲಾಗುವುದು ಎಂದರು.
ಅಂಬೇಡ್ಕರ್ ಜಯಂತಿ ಆಚರಣೆ ಮಾಡಲು ಪ್ರತೀ ಹಳ್ಳಿಗೆ ಹತ್ತು ಸಾವಿರ ಆರ್ಥಿಕ ಸಹಾಯ ನೀಡುತ್ತೇವೆ
ನಾನು ಯಾವ ಜಾತಿಗೂ ಸೀಮಿತವಾಗಿಲ್ಲ ಕನಕ ದಾಸರ ಜಯಂತಿಗೆ ಪ್ರತೀ ಹಳ್ಳಿಗೆ ಐದು ಸಾವಿರ ಕೊಟ್ಟಿದ್ದೇನೆ
ಈಗ ಅಂಬೇಡ್ಕರ್ ಜಯಂತಿ ಆಚರಣೆಗೆ ಪ್ರತೀ ಹಳ್ಳಿಗೆ ಹತ್ತು ಕೊಡುತ್ತಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ ಎನ್ ಸಿ ಪಿ ಜಿಲ್ಲ್ಲಾ ಅಧ್ಯಕ್ಷ ಬಸವರಾಜ್ ಹಳ್ಳಿ ಇತರರು ಉಪಸ್ಥಿತರಿದ್ದರು.
One attachment • Scanned by Gmail