ಅಂಬೇಡ್ಕರ್ ಜಯಂತಿ ಆಚರಣೆ; ಫೆಕ್ಸ್- ಬ್ಯಾನರ್ ಅಳವಡಿಕೆಗೆ ಶುಲ್ಕ; ಖಂಡನೆ

ದಾವಣಗೆರೆ. ಏ.೧೧; ರಾಷ್ಟ್ರೀಯ ನಾಯಕರು,ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಜನ್ಮದಿನದ ಸಮಾರಂಭ ಆಚರಣೆ ಹಿನ್ನೆಲೆಯಲ್ಲಿ ಫೆಕ್ಸ್ ಹಾಗೂ ಬ್ಯಾನರ್ ಅಳವಡಿಸಲು ಅನುಮತಿ ಕೇಳಿದರೆ ಮಹಾನಗರ ಪಾಲಿಕೆ ಅಧಿಕಾರಿಗಳು ಶುಲ್ಕ ಸಂಗ್ರಹಕ್ಕೆ ಮುಂದಾಗಿರುವುದು ಖಂಡನೀಯ ಎಂದು ಕರ್ನಾಟಕ ಭೀಮ್ ಸೇನೆ ಜಿಲ್ಲಾಧ್ಯಕ್ಷ ಆರ್.ಸೂರ್ಯಪ್ರಕಾಶ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕರ್ನಾಟಕ ಭೀಮ್ ಸೇನೆ ವತಿಯಿಂದ ಏ.೧೪ ರಂದು ನಗರದ ಪ್ರಮುಖ ವೃತ್ತದಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಜನ್ಮದಿನ ಹಮ್ಮಿಕೊಳ್ಳಲಾಗಿದೆ. ಅದಕ್ಕಾಗಿ ನಗರದಲ್ಲಿ ಫೆಕ್ಸ್  ಹಾಗೂ ಬ್ಯಾನರ್ ಅಳವಡಿಸಲು ಪಾಲಿಕೆ ಶುಲ್ಕ ಅಳವಡಿಸಿರುವ ಕ್ರಮ ಸರಿಯಲ್ಲ.ಮಹಾನ್ ನಾಯಕರ ಜನ್ಮದಿನ ಆಚರಣೆಗೆ ಅನುಮತಿ ಪಡೆಯಬೇಕಾದ ವಿಪರ್ಯಾಸ ಎದುರಾಗಿದೆ ಎಂದರು. ಅಂದು ಬೆಳಗ್ಗೆ ೮ ರಿಂದ ನಗರದ ಜಯದೇವವೃತ್ತ,ಗಾಂಧಿವೃತ್ತ,ಪಿ.ಬಿ ರಸ್ತೆ, ಎವಿಕೆ ರಸ್ತೆ ಸೇರಿದಂತೆ ವಿವಿಧೆಡೆ ಅಂಬೇಡ್ಕರ್ ಭಾವಚಿತ್ರದೊಂದಿಗೆ ಮಂಗಳಮುಖಿಯರು,ದಮನಿತ ಮಹಿಳೆಯರು, ಸಂಘಟನೆಯ ಪದಾಧಿಕಾರಿಗಳು, ವಿವಿಧ ಸಂಘಟನೆಯ ಮುಖಂಡರು ಹಾಗೂ ಶಾಲಾ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ .ಅಂದು ನಗರದ ಎಲ್ಲಾ ಸಂಘಟನೆಗಳು ಒಂದೆಡೆ ಸೇರಿ ಅಂಬೇಡ್ಕರ್ ಜಯಂತಿ ಆಚರಣೆ  ಮಾಡಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಎನ್.ಸಂತೋಷ್,ಎನ್.ಆರ್ ರಮೇಶ್,ಕೆ.ರಾಘವೇಂದ್ರ ಉಪಸ್ಥಿತರಿದ್ದರು.