ಅಂಬೇಡ್ಕರ್ ಜಯಂತಿ ಆಚರಣೆ ಅನುಮತಿಗೆ ಮನವಿ

ರಾಯಚೂರು, ಏ.೧೦- ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಜಯಂತಿ ಮೆರವಣಿಗೆ ಅನುಮತಿ ನೀಡುವಂತೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ನವ ಯುವಕ ಸಮತಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. ಸಾರ್ವತ್ರಿಕ ವಿಧಾನಸಭಾ ಚುನಾವಣೆ ವಾರ್ಡ್ ನಂ ೧೪ ರಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ ಮಾಡಲಾಗುವುದು. ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ ವೇಳೆ ದ್ವನಿ ವರ್ಧಕಗಳನ್ನು ಅಳವಡಿಸಿ ಕಲಾ ತಂಡಗಳ ಮೂಲಕ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುವುದು. ಮೆರವಣಿಗೆಯಲ್ಲಿ ಸುಮಾರು ೨ ಸಾವಿರ ಕ್ಕೂ ಅಧಿಕ ಜನರು ಸೇರುವ ನಿರೀಕ್ಷೆ ಇದ್ದು ಆದಕಾರಣ ಅಂಬೇಡ್ಕರ್ ಜಯಂತಿಗೆ ಅನುಮತಿ ನೀಡುವಂತೆ ಮನವಿ ಮಾಡಿದರು.ಈ ಮೆರವಣಿಗೆ ಶಾಂತಪೂರ್ವಕವಾಗಿ ನಡೆಯುತ್ತಿದ್ದು ಯಾವುದೇ ಪಕ್ಷದ ದ್ವಜಗಳು ಮತ್ತು ಬ್ಯಾನರ್ ಅಳವಡಿಸುವುದಿಲ್ಲ ಮತ್ತು ರಾಜಕೀಯ ಮುಖಂಡರು ಅಹ್ವಾನ ಮಾಡುವುದಿಲ್ಲ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎನ್ ಸತ್ಯನಾರಾಯಣ ರಾಜು ಪಟ್ಟಿ ವಾಸುದೇವ್ ಪರಶುರಾಮ್ ಬಾಬು ನಂದು ರಮೇಶ್ ವಿನಾಯಕ್ ಚಲವಾದಿ ಗೌತಮ್ ಸಂತೋಷ್ ವಿಜಯಕುಮಾರ್ ಲಕ್ಷ್ಮಣ್ ಹನ್ಮಂತು ಪ್ರಕಾಶ್ ರಾಕೇಶ್ಹಾ ದೇವದಾಸ ಸುರೇಶ ಪಟ್ಟಿ ಮಂಗಳವಾರಪೇಟೆ ಅಂಬೇಡ್ಕರ್ ನವ ಯುವಕ ಸಂಘದ ನೂರಾರು ಸದಸ್ಯರು ಉಪಸ್ಥಿತರಿದ್ದರು.