
ಗಬ್ಬೂರು,ಏ.೧೪- ದೇವದುರ್ಗ ತಾಲೂಕಿನ ಶಾವಂತಗೇರಾ ಗ್ರಾಮ ಪಂಚಾಯತಿ ಕಛೇರಿಯಲ್ಲಿ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮಕ್ಕೆ ಗೈರಾದ ತಾಂತ್ರಿಕ ಇಂಜಿನಿಯರ್ ಮೊಹಮ್ಮದ್ ಇಸಾಕ್ ವಿರುದ್ಧ ಡಿ.ಎಚ್.ನಾಯಕ ಆಕ್ರೋಶ ವ್ಯಕ್ತಪಡಿಸಿದರು.
ಹಲವು ಮಹನೀಯರ ಜಯಂತಿಗೆ ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಕಡ್ಡಾಯವಾಗಿ ಹಾಜರಿರಲು ಸರಕಾರ ಆದೇಶಸಿದ್ದರೂ,ಕೆಳಮಟ್ಟದ ಸಿಬ್ಬಂದಿಗೆ ಕಾಟಾಚಾರಕ್ಕೆಂಬಂತೆ ಭಾವಚಿತ್ರ ಪೂಜೆ ಮಾಡಲು ಹೇಳಿ ರಜಾ ದಿನ ಮಜಾ ಮಾಡುವ ಭ್ರಷ್ಟ ಅಧಿಕಾರಿಗಳ ವಿರುದ್ಧ ಡಿ.ಎಚ್. ನಾಯಕ ಹರಿಹಾಯ್ದರು.
ಈ ಸಂಬಂಧ ಅಭಿವೃದ್ಧಿ ಅಧಿಕಾರಿಯನ್ನು ಸಂಪರ್ಕಸಿದಾಗ ಜಯಂತಿಗೆ ಗೈರಾದ ಶಾವಂತಗೇರಾ ಗ್ರಾಮ ಪಂಚಾಯತಿ ತಾಂತ್ರಿಕ ಇಂಜಿನಿಯರ್ ಮೊಹಮ್ಮದ್ ಇಸಾಕ್‌ನಿಗೆ ಕುಮ್ಮಕ್ಕು ನೀಡುತ್ತಿದ್ದಾನೆ.
ಕೂಡಲೇ ಮೇಲಾಧಿಕಾರಿಗಳು ಮೊಹಮ್ಮದ್ ಇಸಾಕ್ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಮಾಡಬೇಕು ಎಂದು ಡಿ.ಎಚ್.ನಾಯಕ ಅವರ ಆರೋಪವಾಗಿದೆ.