ಅಂಬೇಡ್ಕರ್ ಜನ್ಮದಿನಾಚರಣೆ

 ಚಿತ್ರದುರ್ಗ. ಏ.೧೬; ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ 130ನೇ ಜನ್ಮ ದಿನಾಚರಣೆಯನ್ನು ಚಳ್ಳಕೆರೆ ತಾಲ್ಲೂಕಿನ ಸೂರನಹಳ್ಳಿ ಗ್ರಾಮದಲ್ಲಿ , ಗ್ರಾಮಸ್ಥರಿಂದ ಹಮ್ಮಿಕೊಳ್ಳಲಾಗಿತ್ತು. ಅಂಬೇಡ್ಕರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಬಿಜೆಪಿ ಆರ್ಥಿಕ ಪ್ರಕೋಷ್ಠದ ಜಿಲ್ಲಾ ಸಂಚಾಲಕರಾದ ಎಸ್.ವಿ. ವಿಜಯಣ್ಣ ಮಾತನಾಡಿ ಸರ್ವರಿಗೂ ಸಮಾನತೆ ಕಲ್ಪಿಸಬೇಕು ಎಂದು ಶ್ರಮಿಸಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ,ವಿಶ್ವಕಂಡ ಸಮಾನತೆ ಹರಿಕಾರ ಶೋಷಿತರ ಧ್ವನಿಯಾಗಿ ಶ್ರೇಷ್ಥ ಮಹಾ ಮಾನವತಾವಾದಿ . ಭಾರತದಲ್ಲಿ 130 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಇಂದು ಅಂಬೇಡ್ಕರ್ ರವರ 130ನೇ ಜಯಂತಿಯನ್ನು ಗಲ್ಲಿ-ಗಲ್ಲಿಯಲ್ಲಿ ಆಚರಿಸುತ್ತಿದ್ದಾರೆ. ಅವರು ಹಾಕಿಕೊಟ್ಟ ಆದರ್ಶದ ಮಾರ್ಗದಲ್ಲಿ ನಡೆಯಬೇಕು ಎಂದು ತಿಳಿಸಿದರು. ಈ ಸಂಧರ್ಭದಲ್ಲಿ, ಗ್ರಾಮಸ್ಥರಾದ ತಿಪ್ಪೇಸ್ವಾಮಿ ಹನುಮಂತರಾಯ, ವೀರಭದ್ರಪ್ಪ, ವಸಂತ್ , ತಿಪ್ಪಯ್ಯ , ಆದಪ್ಪ ಉಪಸ್ಥಿತರಿದ್ದರು.