ಅಂಬೇಡ್ಕರ್ ಚಿಂತನೆ ಸಾರ್ವಕಾಲಿಕ :ಹೆಡಗಿನಾಳ

ಶಹಾಪುರ :ಎ.15: ಸಂವಿಧಾನ ಶಿಲ್ಪಿ ಮಹಾ ಮಾನವತಾವಾದಿ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳು ಸರ್ವಕಾಲಿಕವಾಗಿವೆ ಎಂದು ವೀರಶೈವ ಸಮಾಜದ ಮುಖಂಡ ಶ್ರೀ ಶಿವಶರಣಪ್ಪ ಹೆಡಗಿನಾಳ ಹೇಳಿದರು, ಶ್ರೀ ಬಸವಜ್ಯೋತಿ ಗ್ರಾಮೀಣ ಸಾಮಾಜಿಕ ಜಾಗೃತಿ ಮತ್ತು ಶಿಕ್ಷಣ ಅಭಿವೃದ್ಧಿ ಸಂಸ್ಥೆ ವತಿಯಿಂದ ರಂಗಂಪೇಟೆಯ ಬಸವಪ್ರಭು ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಇಂದು ನಡೆದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತೋತ್ಸವ ನಿಮಿತ್ತ ನಡೆದ ಬುದ್ದ ಬಸವ ಅಂಬೇಡ್ಕರ್ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು ,ಈ ಮೂರು ಜನ ಮಾನವತವಾದಿಗಳಾಗಿದ್ದು ಸಮಾಜಕ್ಕೆ ಇವರು ಕೊಡುಗೆ ಅಪಾರವಾಗಿದೆ ಎಂದರು, ಶೋಷಿತರ ದನಿಯಾಗಿ ಹಲವು ದಶಕಗಳ ಶ್ರಮಕ್ಕೆ ಹೋರಾಟ ಕಲ್ಪನೆ ಕೊಟ್ಟ ಸಂವಿಧಾನದ ಮೂಲಕ ಸರ್ವರಿಗೂ ಸಮಾನತೆಯನ್ನು ತಂದುಕೊಟ್ಟರು ಎಂದು ಹೇಳಿದರು,
ಉಪನ್ಯಾಸಕ ಬಲಬೀಮ ಪಾಟೀಲ್ ಡಾ.ಬಾಬಾ ಸಾಹೇಬರ ಜೀವನ ಚರಿತ್ರೆ ಕುರಿತು ಮಾತನಾಡಿದರು,ಮುಖ್ಯ ಅತಿಥಿಗಳಾಗಿ ರಾಘವೇಂದ್ರ ಭಕ್ರಿ,ಶ್ರೀಕಾಂತ ರತ್ತಾಳ,ಹಣುಮಂತ್ರಾಯ ದೇವತ್ಕಲ ವೇದಿಕೆ ಮೇಲೆ ಇದ್ದರು ಸಂಸ್ಥೆಯ ಅಧ್ಯಕ್ಷ ಸಿದ್ದಪ್ರಸಾದ್ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಅಮರೇಶ ಮುಷ್ಟಳ್ಳಿ ನಿರೂಪಿಸಿದರು