ಅಂಬೇಡ್ಕರ್ ಚಿಂತನೆಗೆ ವಿಶ್ವಸಂಸ್ಥೆ ಮನ್ನಣೆ

ಬೀದರ್:ಎ.16: ಅಂಬೇಡ್ಕರ್ ಅವರ ಚಿಂತನೆಗಳಿಗೆ ವಿಶ್ವಸಂಸ್ಥೆ ಮನ್ನಣೆ ನೀಡಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ನಿರ್ದೇಶಕ ಎಚ್.ಟಿ. ಪೆÇೀತೆ ಹೇಳಿದರು.

ಡಾ. ಅಂಬೇಡ್ಕರ್ ಜಯಂತಿ ಪ್ರಯುಕ್ತ ಡಾ. ಬಾಬಾಸಾಹೇಬ ಅಂಬೇಡ್ಕರ್ ಜಯಂತ್ಯುತ್ಸವ ಸಮಿತಿ ವತಿಯಿಂದ ನಗರದ ಡಾ. ಅಂಬೇಡ್ಕರ್ ವೃತ್ತದಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡಾ. ಅಂಬೇಡ್ಕರ್ ಅವರು ಭಾರತವನ್ನು ಅಂತರರರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಿದ್ದರು. ಆದರೆ, ಇದೇ ನೆಲದ ಜಾತಿ, ಧರ್ಮದ ಕೆಲ ವಿಷ ನೆತ್ತರಿನವರು ಅವರ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಡಾ. ಅಂಬೇಡ್ಕರ್ ಅವರು ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆ ಹೋಗಲಾಡಿಸಲು ಹೋರಾಟ ನಡೆಸಿದ್ದರು. ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದರು ಎಂದು ಬಣ್ಣಿಸಿದರು.

ಕಲಬುರಗಿಯ ಹೋರಾಟಗಾರ್ತಿ ಅಶ್ವಿನಿ ಮದನಕರ್, ಜಯಂತ್ಯುತ್ಸವ ಸಮಿತಿಯ ಗೌರವಾಧ್ಯಕ್ಷ ಅನಿಲಕುಮಾರ ಬೆಲ್ದಾರ್ ಮಾತನಾಡಿದರು. ಭಂತೆ ಜ್ಞಾನಸಾಗರ್ ಸಾನಿಧ್ಯ ವಹಿಸಿದ್ದರು. ಸಮಿತಿ ಅಧ್ಯಕ್ಷ ಬಾಬುರಾವ್ ಪಾಸ್ವಾನ್ ಅಧ್ಯಕ್ಷತೆ ವಹಿಸಿದ್ದರು.

ಪ್ರಮುಖರಾದ ಮಾರುತಿ ಬೌದ್ಧೆ, ಸುಬ್ಬಣ್ಣ ಕರಕನಳ್ಳಿ, ಮಹೇಶ ಗೋರನಾಳಕರ್, ಬಸವರಾಜ ಮಾಳಗೆ, ಪ್ರಶಾಂತ ದೊಡ್ಡಿ, ಮೋಹನ್ ಕಾಳೇಕರ್, ಶ್ರೀಪತರಾವ್ ದೀನೆ, ಶಾಲಿವಾನ್ ಬಡಿಗೇರ್, ಶಿವಕುಮಾರ ನೀಲಕಟ್ಟಿ, ಅನಿಲಕುಮಾರ ಗಂಜಕರ್, ರಾಜಕುಮಾರ ಮೂಲಭಾರತಿ, ಅಶೋಕ ಮಾಳಗೆ, ಮುಕೇಶ ರಾಯ್, ರಮೇಶ ಪಾಸ್ವಾನ್, ಅವಿನಾಶ ದೀನೆ, ಸಾಯಿ ಸಿಂಧೆ, ರಾಜಕುಮಾರ ಗುನ್ನಳ್ಳಿ, ವಿಷ್ಣುವರ್ಧನ್ ವಾಲ್ದೊಡ್ಡಿ, ಪವನ್ ಮಿಠಾರೆ, ವಿನೋದ ಬಂದಗೆ, ಭಗತ್ ಸಿಂಧೆ, ರಾಹುಲ್ ಡಾಂಗೆ, ಪ್ರಸನ್ನ ಡಾಂಗೆ, ಅಜಯ್ ದೀನೆ, ಸಂದೀಪ್ ಕಾಂಟೆ, ಪ್ರದೀಪ್ ನಾಟೇಕರ್ ಮೊದಲಾದವರು ಇದ್ದರು.

ಸಮಿತಿ ಕಾರ್ಯಾಧ್ಯಕ್ಷ ಉಮೇಶಕುಮಾರ ಸ್ವಾರಳ್ಳಿಕರ್ ಸ್ವಾಗತಿಸಿದರು. ಅಂಬಾದಾಸ ಗಾಯಕವಾಡ್ ನಿರೂಪಿಸಿದರು. ಅರುಣ ಪಟೇಲ್ ವಂದಿಸಿದರು.