ಅಂಬೇಡ್ಕರ್ ಚಿಂತನೆಗಳು ಸರ್ವಕಾಲಕ್ಕೂ ಪ್ರಸ್ತುತ:ನಿಂಬೂರ

ಶಹಾಪೂರ:ಸೆ.7:ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ವಿಚಾರ, ಚಿಂತನೆ, ಆದರ್ಶಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂದು ಸುರಪುರ ಕ್ಷೇತ್ರ ಸಮನ್ವಯ ಅಧಿಕಾರಿ ಪಂಡಿತ ನಿಂಬೂರ ಹೇಳಿದರು,
ರಂಗಂಪೇಟೆಯ ಬಸವೇಶ್ವರ ಪದವಿ ಕಾಲೇಜಿನಲ್ಲಿ, ಸಾಹಿತ್ಯ ಅಕಾಡೆಮಿ ನವದೆಹಲಿ ಹಾಗೂ ಪ್ರತಿಸ್ಪಂದನ ಸಾಂಸ್ಕøತಿಕ ಸಂಘ ಕೆಂಭಾವಿ ವತಿಯಿಂದ ಆಯೋಜಿಸಿದ್ದ “ದಲಿತ ಚೇತನ” ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಶಿಕ್ಷಣ,ಸಂಘಟನೆ, ಹೋರಾಟಕ್ಕೆ ಮಹತ್ತರ ಪಾತ್ರ ನೀಡಿದ ಬಾಬಾ ಸಾಹೇಬರು ಪುಸ್ತಕ ಓದು ಮತ್ತು ಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. ಸಮಯ ಎಂದರೆ ಜ್ಞಾನಾರ್ಜನೆ ಎಂದು ಹೇಳುತ್ತಿದ್ದರು,
ಸಾಹಿತಿ ಶರಣಗೌಡ ಪಾಟೀಲ್ ಮಾತನಾಡಿ ಡಾ. ಬಾಬಾ ಸಾಹೇಬರ ವಿಚಾರ,ಚಿಂತನೆ,ಅಧ್ಯಯನ,ಪುಸ್ತಕ ಪ್ರೇಮ ಇಂದಿನ ಯುವ ಜನತೆಗೆ ಮತ್ತು ವಿದ್ಯಾರ್ಥಿಗಳಿಗೆ ಪ್ರೇರಣದಾಯಕವಾಗಿದೆ ಎಂದು ಹೇಳಿದರು,
ಸಾಹಿತಿ ಭೀಮರಾಯ ರಸ್ತಾಪುರ್ ದಲಿತ ಕಾವ್ಯ ಅನುಸಂಧಾನದ ಕುರಿತು ಉಪನ್ಯಾಸ ನೀಡಿದರು,ಹಿರಿಯ ಸಾಹಿತಿ ಶಾಂತಪ್ಪ ಬೂದಿಹಾಳ ಕಾರ್ಯಕ್ರಮ ಉದ್ಘಾಟಿಸಿದರು,ಸಗರನಾಡು ಸೇವಾ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು,ಕಾಲೇಜಿನ ಪ್ರಾಚಾರ್ಯ ವೀರೇಶ ಹಳೆಮನಿ ಅಧ್ಯಕ್ಷತೆ ವಹಿಸಿದ್ದರು,
ಪ್ರತಿಸ್ಪಂದನ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಮೌನೇಶ್ ಐನಾಪುರ ಮಾತನಾಡಿದರು,ಕಾರ್ಯಕ್ರಮವನ್ನು ಸಲೀಂ ಪಾಷಾ ನಿರೂಪಿಸಿದರು,ಮಾನಯ್ಯ ಗುತ್ತೇದಾರ ಸ್ವಾಗತಿಸಿದರು,ಪ್ರವೀಣ ಜಕಾತಿ ವಂದಿಸಿದರು