ಅಂಬೇಡ್ಕರ್ ಚಿಂತನೆಗಳು ಸಮಾಜಕ್ಕೆ ಮಾರ್ಗದರ್ಶಿ:ಸಂತೋಷ ಬಂಡೆ

ವಿಜಯಪುರ, ಡಿ.8-ಮನುಷ್ಯ ಮನುಷ್ಯರ ನಡುವಿನ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ಸಮಾಜದಲ್ಲಿ ಜೀವನ ನಡೆಸಲು ಅಂಬೇಡ್ಕರ್ ಅವರ ತತ್ವ, ಮಾರ್ಗದರ್ಶನ ಅಗತ್ಯ ಎಂದು ಸಾಹಿತಿ ಸಂತೋಷ ಬಂಡೆ ಅಭಿಪ್ರಾಯಪಟ್ಟರು.
ಅವರು ನಗರದ ಕೆ ಸಿ ನಗರದಲ್ಲಿ ಭಾರತ ಯುವ ವೇದಿಕೆ ಚಾರಿಟೇಬಲ್ ಫೌಂಡೇಷನ್ ವತಿಯಿಂದ ಹಮ್ಮಿಕೊಂಡ ಡಾ.ಬಿ ಆರ್ ಅಂಬೇಡ್ಕರ್ ಪರಿನಿರ್ವಾಣ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ರಾಷ್ಟ್ರಕ್ಕೆ ಕೊಟ್ಟಿರುವ ಸಂವಿಧಾನ ಕೇವಲ ಒಂದು ಜಾತಿ, ವರ್ಗಕ್ಕೆ ಸೀಮಿತವಾದುದಲ್ಲ. ಎಲ್ಲ ಸಮುದಾಯದವರಿಗೂ ಅನ್ವಯವಾಗುವಂತೆ ಸಂವಿಧಾನ ರಚಿಸಿರುವ ಬಾಬಾ ಸಾಹೇಬ್ ವಿಶ್ವಕ್ಕೆ ಮಾರ್ಗದರ್ಶಿಯಾಗಿದ್ದಾರೆ ಎಂದರು.
ಉಪನ್ಯಾಸಕ ಅಮರೇಶ ಸಾಲಕ್ಕಿ ಮಾತನಾಡಿ, ಅಂಬೇಡ್ಕರ್‍ರ ತತ್ವಾದರ್ಶ ಇಂದಿಗೂ ಪ್ರಸ್ತುತ. ಅವರು ಶೋಷಿತರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳು, ರೈತರು ಸೇರಿದಂತೆ ಸಮಾಜದ ಎಲ್ಲಾ ವರ್ಗಗಳಿಗೂ ನೆರವಾದರು. ಅವರನ್ನು ಒಂದು ದಿನಕ್ಕೆ ಸ್ಮರಿಸುವುದಲ್ಲ. ಇಡೀ ಬದುಕಿನಲ್ಲಿ ಅವರ ಆಶಯ?ಅಳವಡಿಸಿಕೊಂಡು ಮುಂದೆ ಸಾಗಬೇಕು ಎಂದರು.
ಫೌಂಡೇಶನ್ ಅಧ್ಯಕ್ಷ ಸುನೀಲ ಜೈನಾಪುರ ಮಾತನಾಡಿ, ಅಸಮಾನತೆ, ಅಸ್ಪೃಶ್ಯತೆ ತೊಡೆದು ಹಾಕುವಲ್ಲಿ ಅಂಬೇಡ್ಕರ್ ಕೊಡುಗೆ ಅಪಾರ. ಅವರು ದೇಶಕ್ಕೆ ಉತ್ತಮ ಸಂವಿಧಾನ ನೀಡಿದ್ದಾರೆ. ಅವರು ಜೀವನದಲ್ಲಿ ಅನುಭವಿಸಿದ ಕಷ್ಟಗಳನ್ನು ಸಮಾಜ ಎಂದಿಗೂ ಅನುಭವಿಸಬಾರದೆಂಬ?ದೂರದೃಷ್ಟಿಯಿಂದ ಕಾನೂನು?ರಚಿಸಿದ್ದಾರೆ. ಅವರ ಬದುಕು, ಬರಹ, ಚಿಂತನೆಯನ್ನು ಯುವಕ ಯುವತಿಯರಿಗೆ ತಿಳಿಸಬೇಕು.?ಅವರ ತತ್ವ?ಪಾಲಿಸುವುದೇ ಅವರಿಗೆ ನೀಡುವ ದೊಡ್ಡ ಗೌರವ’ ಎಂದು ಅಭಿಪ್ರಾಯಪಟ್ಟರು.
ಆರ್.ಎಸ್.ಪಟ್ಟಣಶೆಟ್ಟಿ, ಬೀರು ಗಾಢವೆ, ಅವಧೂತ ಕೋಳಿ, ಚಂದ್ರಕಾಂತ ಹೊನಕೇರಿ, ಮಂಜುನಾಥ ಹೊನಕೇರಿ, ವಿವೇಕ ಹೊನಕೇರಿ, ದತ್ತಾ ಉಕ್ಕಲಿ, ಆನಂದ ಬ್ಯಾಲ್ಯಾಳ, ಕಿರಣ ಆಲಕುಂಟೆ, ಸತೀಶ ದೊಡಮನಿ, ಬಿ ಪಿ ಹಿರೇಮಠ, ಪ್ರಮೋದ, ಅಮನ್ ಮುಲ್ಲಾ, ಸತೀಶ ನಾಗಠಾಣ, ಉಮೇಶ ಗುಡಿಸಲಮನಿ, ಶಿವಾಜಿ ಮೋರೆ, ಸುದರ್ಶನ ರಾಠೋಡ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.