
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.30:- ಮಲ್ಲಿಕಾರ್ಜುನಖರ್ಗೆ ಅವರನ್ನು ರಾಷ್ಟ್ರೀಯ ಅಧ್ಯಕ್ಷರಾನ್ನಾಗಿ ಮಾಡಿದ ಕಾಂಗ್ರೆಸ್ ರಾಜ್ಯ ವಿಧಾನಸಭೆಯನ್ನು ದಲಿತರ ಮತಗಳನ್ನು ದೋಚಿ ಅಧಿಕಾರಕ್ಕೆ ಬಂತು. ಈಗ ರಾಹುಲ್‍ಗಾಂಧಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡುವ ಮೂಲಕ ದಲಿತರಿಗೆ ಅನ್ಯಾಯ ಮಾಡುತ್ತಿದೆ ಎಂದು ಮಾಜಿ ಸಚಿವ ಎನ್. ಮಹೇಶ್ ತೀವ್ರ ವಾಗ್ದಾಳಿ ಮಾಡಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಜಿಲ್ಲಾ ಪರಿಶಿಷ್ಟ ಜಾತಿ ಮೋರ್ಚಾದ ಜಿಲ್ಲಾ ಕಾರ್ಯಕಾರಣಿ ಸಭೆಯನ್ನು ಉದ್ಗಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಕಳೆದ 70 ವರ್ಷಗಳಿಂದ ದಲಿತರು, ಹಿಂದುಳಿದ ವರ್ಗಗಳಿಗೆ ಮೋಸ ಮಾಡುತ್ತಲೇ ಅಧಿಕಾರ ಪಡೆದುಕೊಳ್ಳುತ್ತಾ ಬಂದಿದೆ.
ಈಗ 2023ರಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಗು ಮುನ್ನಾ ಕರ್ನಾಟಕದವರೇ ಆದ ಹಿರಿಯ ರಾಜಕೀಯ ಮುತ್ಸದಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಿ, ಮುಂಬರುವ ಲೋಕಸಭಾ ಚುನಾವಣೆ ಅವರ ನೇತೃತ್ವದಲ್ಲಿ ನಡೆಯಲಿದೆ. ಅವರೇ ಪ್ರಧಾನಿ ಅಭ್ಯರ್ಥಿ ಎಂಬಂತೆ ಬಿಂಬಿಸಿತ್ತು.
ಇದನ್ನು ನಂಬಿದ ಕರ್ನಾಟಕದಲ್ಲಿರುವ ನಮ್ಮ ಜನ ವಿಧಾನಸಭಾ ಚುನವಣೆಯಲ್ಲಿ ದಲಿತ ನಾಯಕನಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ದೊರೆತಿದೆ. ಇನ್ನೇನು ಅವರು ಪ್ರಧಾನಿಯಾಗಲಿದ್ದಾರೆ ಎಂದು ಹೆಚ್ಚಿನ ಪ್ರಮಾಣದಲ್ಲಿ ಓಟು ಹಾಕಿ ಕಾಂಗ್ರೆಸ್ ಅಧಿಕಾರಕ್ಕೆ ಬರುವಂತೆ ಮಾಡಿದರು. ಕಾಂಗ್ರೆಸ್ 70 ವರ್ಷಗಳಿಂದ ಸುಳ್ಳು ಹೇಳುತ್ತಲೇ ಅಧಿಕಾರ ಅನುಭವಿಸುತ್ತಿದೆ. ಬಡತನ ನಿರ್ಮೂಲನೆ ಮಾಡುವುದಾಗಿ ನೆಹರು, ಇಂದಿರಾಗಾಂಧಿ ಕಾಲದಿಂದಲು ಹೇಳುತ್ತಾ ಬಂದಿದೆ.
ಈಗಾಗಲೇ ಸಿದ್ದರಾಮಯ್ಯ ನೀಡಿರುವ 5 ಗ್ಯಾರಂಟಿಗಳು ಸಹ ಬಡತನ ನಿರ್ಮೂಲನೆ ಗಾಗಿ ಎಂಬಂತಿವೆ. ಇದರಥರ್À ಕಾಂಗ್ರೆಸ್ಸಿಗರಿಗೆ ದೇಶದ ಜನರು ಶ್ರೀಮಂತರಾಗುವುದಕ್ಕೆ ಇಷ್ಟವಿಲ್ಲ. ಅವರನ್ನು ಬಡವರನ್ನಾಗಿಸಿಕೊಂಡೇ ಮತ ಪಡೆದು ಪಕ್ಷ ಶ್ರೀಮಂತವಾಗುತ್ತಿದೆ. ಕಾಂಗ್ರೆಸ್ ಪಕ್ಷದ ಮುಖಂಡರ ಆಸ್ತಿ ಪಾಸ್ತಿಗಳು ಹೊರರಾಜ್ಯಗಳಲ್ಲಿವೆ.
ಇದನ್ನು ನಮ್ಮ ದಲಿತರು ಅರ್ಥ ಮಾಡಿಕೊಳ್ಳಬೇಕು. ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಅಧಿಕಾರ ಕೊಡಲಿಲ್ಲ. ಅವರ ಜೀವಿತ ಅವಧಿ ಹಾಗೂ ಅವರ ಸತ್ತ ನಂತರವು ಸಹ ಶೋಷಣೆ ಮಾಡಿತ್ತು. ಕಾಂಗ್ರೆಸ್ ಉರಿಯುವ ಮನೆ. ನನ್ನ ಜನಾಂಗ ಆ ಪಕ್ಷದ ಹತ್ತಿರವು ಸುಳಿಯಬೇಡಿ ಎಂದಿದ್ದರು.
ಆದರೆ, ನಮ್ಮವರು ಆ ಪಕ್ಷವನ್ನೇ ಅಪ್ಪಿಕೊಂಡು ಮತ್ತಷ್ಟು ನೋವು ಪಡೆದುಕೊಳ್ಳಲು ಮುಂದಾಗಿದ್ದಾರೆ ಎಂದು ಮಹೇಶ್ ವಿಷಾದ ವ್ಯಕ್ತಪಡಿಸಿದರು.
ಜಿ.ಪಂ. ಮಾಜಿ ಅಧ್ಯಕ್ಷ ಎಸ್. ಮಹದೇವಯ್ಯ ಮಾತನಾಡಿ, ಬಿಜೆಪಿ ದಲಿತರ ಪರವಾಗಿ ಮಾಡಿದ ಒಳ್ಳೆಯ ಕೆಲಸಗಳು ಪ್ರಚಾರಕ್ಕೆ ಬರುವುದಿಲ್ಲ. ಯಾರೋ ಬಿಜೆಪಿ ಪುಡಿ ಲೀಡರ್ ಹೇಳಿದ ಮಾತನ್ನು ಕೇಳಿಕೊಂಡು ನಮ್ಮವರು ವೃಥ ಆರೋಪ ಮಾಡುವುದು ಸರಿಯಲ್ಲ. ಪ್ರಧಾನಿ ನರೇಂದ್ರ ಅವರು ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನ ನಮ್ಮ ಗ್ರಂಥ ಎಂದು ಹೇಳಿದ್ದರು. ಮುಂದಿನ ದಿನಗಳಲ್ಲಿ ದಲಿತರು ಬಿಜೆಪಿಯನ್ನು ಬೆಂಬಲಿಸುವ ಮೂಲಕ ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಖರ್ಗೆ ಅವರು ಪ್ರಧಾನಿಯಲ್ಲ ರಾಷ್ಟ್ರಪತಿಯಾಗಬೇಕμÉ್ಟೀ :
ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಮೂಡ್ನಾಕೂಡು ಪ್ರಕಾಶ್ ಪ್ರಸ್ತಾವಿಕವಾಗಿ ಮಾತನಾಡಿ, ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ್ ದಲಿತರ ಮತ ಪಡೆಯಲು ಒಂದೊಂದು ತಂತ್ರ ರೂಪಿಸುತ್ತಿದೆ.
ಆಗ ವಿಧಾನಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿಯಾಗುತ್ತಾರೆಂದು ಮತ ಪಡೆದು ಈಗ ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧಿಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ದಲಿತರಿಗೆ ಖರ್ಗೆಯವರನ್ನು ರಾಷ್ಟ್ರಪತಿ ಮಾಡುತ್ತೇವೆ ಎಂದು ಹೊಸ ನಾಟಕ ಶುರು ಮಾಡಿದರು ಅಚ್ಚರಿ ಇಲ್ಲ ಎಂದು ವ್ಯಂಗ್ಯವಾಡಿದರು ಇಂತಹ ಮೋಸ ಮಾಡುವ ಕಾಂಗ್ರೆಸ್ ಪಕ್ಷದ ಬಗ್ಗೆ ದಲಿತರು ಎಚ್ಚರಿಕೆಯಿಂದ ಇರಬೇಕು ಎಂದರು.
ಬಿಜೆಪಿ ಎಸ್ಸಿ ಮೋರ್ಚಾದಿಂದ ಸದ್ಯದಲ್ಲಿಯೇ ಪರಿಶಿಷ್ಟ ಜಾತಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಗುತ್ತದೆ ಎಂದು ಪ್ರಕಾಶ್ ತಿಳಿಸಿದರು.
ಸಭೆಯಲ್ಲಿ ಬಿಜೆಪಿ ಮುಖಂಡರಾದ ಎಸ್.ಬಾಲರಾಜು, ವೆಂಕಟರಮಣಸ್ವಾಮಿ(ಪಾಪು), ಅರಲಕವಾಡಿ ನಾಗೇಂದ್ರ, ಎಸ್ಸಿ ಮೋರ್ಚಾ ಗ್ರಾಮಾಂತರ ಘಟಕದ ಅಧ್ಯಕ್ಷ ಮುತ್ತಿಗೆ ಮೂರ್ತಿ, ಜಿಲ್ಲಾ ಉಪಾಧ್ಯಕ್ಷ ವೇಣುಗೋಪಾಲ್, ರಾಜಗೋಪಾಲ್, ಮಹಿಳಾ ಮೋರ್ಚಾ ಅಧ್ಯಕ್ಷೆ ಮಲೆಯೂರು ಕಮಲಮ್ಮ, ಜಯಶೀಲಾ, ವನಾಜಾಕ್ಷಿ, ದಾಕ್ಷಾಯಿಣಿ, ಬಸವನಪುರ ರಾಜಶೇಖರ್, ಹಾಗೂ ಜಿಲ್ಲೆಯ ನಾಲ್ಕು ವಿಧಾಣಸಬಾ ಕ್ಷೇತ್ರಗಳ ಎಸ್ಸಿ ಮೋರ್ಚಾ ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು.