ಅಂಬೇಡ್ಕರ್ ಕಂಚಿನ ಪ್ರತಿಮೆ ಅನಾವರಣ

ಗಂಗಾವತಿ 22 : ನಗರದ 32 ನೇ ವಾರ್ಡ್ ಛಲವಾದಿ ಕಾಲೋನಿ ಹಿರೇಜಂತಗಲ್ ನಲ್ಲಿ ಅಂಬೇಡ್ಕರ್ ಕಂಚಿನ ಪ್ರತಿಮೆ ಅನಾವರಣ ಹಾಗೂ ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರ 130ನೇ ಜಯಂತಿ ಕಾರ್ಯಕ್ರಮ ನಡೆಯಿತು.
ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಅವರ ನಮ್ಮ ದೇಶಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಅವರ ತತ್ವ ಸಿದ್ದಾಂತಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳಬೇಕು‌ ಎಂದರು
ಈಗಾಗಲೇ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಕೋಟಿ ರೂಪಾಯಿ ಅನುದಾನ ಬಿಡುಗಡೆ ಆಗಿದೆ. ನಗರದಲ್ಲಿ ಸೂಕ್ತವಾದ ಸ್ಥಳ ನೋಡಿ ಶೀಘ್ರದಲ್ಲೇ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ನಗರಸಭೆ ಸದಸ್ಯರಾದ ಹುಸೇನಪ್ಪ ಹಂಚಿನಾಳ, ರಾಘವೇಂದ್ರ ಶೆಟ್ಟಿ, ಮುಖಂಡರಾದ ತಿಮಣ್ಣ ಹಂಚಿನಾಳ, ಪರಶುರಾಮ ಕಿರಿಕಿರಿ, ಜೆಡೇಯಪ್ಪ ಹಂಚಿನಾಳ, ಆರತಿ ಹನಮಂತಪ್ಪ, ಪಂಪಣ್ಣ, ಜಗದೀಶ ಇದ್ದರು.