ಅಂಬೇಡ್ಕರ್ ಉತ್ಸವ

ರಾಮನಗರ, ಜು. ೨೩:೨೪ರಂದು ಸಂಜೆ ೪ ಗಂಟೆಗೆ ನಗರದ ಕೃಷ್ಣಸ್ಮೃತಿ ಕಲ್ಯಾಣ ಮಂಟಪದಲ್ಲಿ ಅಂಬೇಡ್ಕರ್ ಉತ್ಸವ-೨೦೨೨ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಚಲುವರಾಜು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಿಪಬ್ಲಿಕನ್ ಸೇನೆ ರಾಷ್ಟ್ರೀಯ ಅದ್ಯಕ್ಷ ಆಯುಷ್ಮಾನ್ ಆನಂದರಾಜ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅಧ್ಯಕ್ಷತೆವಹಿಸಲಿದ್ದಾರೆ ಎಂದರು.ವಿಶ್ರಾಂತ ಪ್ರಾಧ್ಯಾಪಕ ಮಹೇಶ್‌ಚಂದ್ರ ಗುರು ಉಪ ನ್ಯಾಸ ನೀಡಲಿದ್ದು, ಸಂಸದ ಡಿ.ಕೆ.ಸುರೇಶ್, ಶಾಸಕಿ ಅನಿತಾಕುಮಾರಸ್ವಾಮಿ, ಎಸ್ಸಿ/ಎಸ್ಟಿ ಆಯೋಗದ ನೆಹರೂ ಚ.ಹೋಲೆಕರ್, ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ, ನಿವೃತ್ತ ಪೊಲೀಸ್ ಕಮಿಷನರ್ ಭಾಸ್ಕರ್‌ರಾವ್, ಮಾಜಿ ಶಾಸಕ ಕೆ.ರಾಜು, ಜಿಪಂ ಮಾಜಿ ಅಧ್ಯಕ್ಷ ಇಕ್ಸಾಲ್ ಹುಸೇನ್, ಚಿತ್ರನಟರಾದ ದುನಿಯ ವಿಜಿ, ಡಾಲಿ ಧನಂಜಯ್ಯ, ಚೇತನ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮ ಆಯೋಜಕ ಜಗದೀಶ್ ಮಾತನಾಡಿ, ವೇದಿಕೆ ಕಾರ್ಯಕ್ರಮ ಆರಂಭಕ್ಕೂ ಮುನ್ನ ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಸಂತೋಷ್ ಬಾಬು ಹಾಗೂ ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ ಅವರು ಸ್ತಬ್ಧ ಚಿತ್ರಗಳ ಮೆರವಣಿಗೆಗೆ ಚಾಲನೆ ನೀಡುವರು ಎಂದರು. ಅಂಬೇಡ್ಕರ್ ಅವರ ಮೊಮ್ಮಗ ಆಯುಷ್ಮಾನ್ ಆನಂದ್‌ರಾಜ್ ಅಂಬೇಡ್ಕರ್ ಅವರನ್ನು ೧೫ಕ್ಕೂ ಹೆಚ್ಚು ವಿವಿಧ ಮಹನೀಯರ ಸಬ್ದ ಚಿತ್ರಗಳೊಂದಿಗೆ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಗುವುದು. ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರಗು ತುಂಬಲಿವೆ ಎಂದು ತಿಳಿಸಿ ದರು. ಸುದ್ದಿಗೋಷ್ಠಿಯಲ್ಲಿ ಉತ್ಸವ ಸಮಿತಿಯ ಶಿವಶಂಕರ್, ಪ್ರಕಾಶ್, ಗುಡ್ಡೆ ವೆಂಕಟೇಶ್, ಜಗದೀಶ್, ಕಿರಣ್, ಶೇಖರ್, ಶಿವರಾಜ್ ಇದ್ದರು.