ಅಂಬೇಡ್ಕರ್ ಇಬ್ಬರು ವಾಲ್ಮೀಕಿ ಸಮಾಜದ ಎರಡು ಕಣ್ಣುಗಳು

ಕೋಲಾರ,ಮ,೨೭- ವಾಲ್ಮೀಕಿ ಸಮುದಾಯದಲ್ಲಿ ಎಲ್.ಜಿ. ಹಾವನೂರ್ ಅವರು ಡಾ,ಬಿ.ಆರ್. ಅಂಬೇಡ್ಕರ್ ಇಬ್ಬರು ಎರಡು ಕಣ್ಣುಗಳಿದ್ದಂತೆ ಅಗಿದ್ದು ಸಮಾಜಕ್ಕೆ ಬೆಳಕು ನೀಡಿದವರು. ಈ ಇಬ್ಬರು ಸಮಾಜದ ಕಣ್ಣುಗಳು ಅಗಿದ್ದಾರೆ. ವಾಲ್ಮೀಕಿ ಅವರು ರಚಿಸಿದ ರಾಮಯಾಣದ ಮಾರ್ಗದರ್ಶನ ಹಾಗೂ ಆದರ್ಶವನ್ನು ಜೀವನದಲ್ಲಿ ಎಲ್ಲರೂ ಅಳವಡಿಸಿಕೊಳ್ಳುವಂತಾಗ ಬೇಕೆಂದು ಮಾಜಿ ಸಚಿವ ಶ್ರೀರಾಮುಲು ಕರೆ ನೀಡಿದರು,
ನಗರದ ವಾಲ್ಮೀಕಿ ಭವನದಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ನಂತರ ಸಮುದಾಯದವರು ನೀಡಿದ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು. ಯಾವೂದೇ ಸಮುದಾಯವಾಗಲಿ ಸಂಟನೆಯಾಗಿ ಒಗ್ಗಟ್ಟು ಪ್ರದರ್ಶಿಸಿದಾಗ ಮಾತ್ರ ಯಾವೂದೇ ಸೌಲಭ್ಯಗಳನ್ನು ಪಡೆಯಲು ಸಾಧ್ಯ ಎಂದ ಅವರು ಬಿಜೆಪಿ ಸರ್ಕಾರದಲ್ಲಿ ಅಧಿಕಾರದಲ್ಲಿ ಇದ್ದಾಗ ವಾಲ್ಮೀಕಿ ಜಯಂತಿಯನ್ನು ಸರ್ಕಾರದಿಂದ ಆಚರಣೆ, ರಜೆ ಘೋಷಣೆ, ವಾಲ್ಮೀಕಿ ಸಮುದಾಯ ಅಭಿವೃದ್ದಿ ನಿಗಮ, ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಾತಿಯನ್ನು ೧೫ ರಿಂದ ೧೭ಕ್ಕೆ ಹಾಗು ೩ ರಿಂದ ೭ಕ್ಕೆ ಹೆಚ್ಚಳ ಮಾಡಲಾಯಿತು ಎಂದರು,
ವಾಲ್ಮೀಕಿ ಸಮುದಾಯಕ್ಕೆ ಸಮಾಜಿಕ ನ್ಯಾಯ ಮತ್ತು ಸಮನತೆಯನ್ನು ಕಲ್ಪಿಸುವ ಮೂಲಕ ಮುಂದಿನ ಪೀಳಿಗೆಗೆ ನ್ಯಾಯಯುತವಾದ ಸೌಲಭ್ಯಗಳನ್ನು ಕಲ್ಪಿಸ ಬೇಕಾಗಿದೆ ಹಾಗಾಗಿ ನಾವೆಲ್ಲರೂ ಗಟ್ಟಿಯಾದ ಸಂಘಟನೆ ಮಾಡ ಬೇಕು, ವಾಲ್ಮೀಕಿ ಸಮುದಾಯದ ನಾವೇಲ್ಲಾರೂ ಒಂದೇ ಕುಟುಂಬದವರೆಂಬ ಭಾವನೆಯನ್ನು ಹೊಂದಿದಾಗ ಮಾತ್ರ ನಮ್ಮಲ್ಲಿ ಸಂಘಟನೆ, ಒಗ್ಗಟ್ಟು ಸಧೃಡವಾಗಿರಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ಇದಕ್ಕೂ ಮುನ್ನ ವಾಲ್ಮೀಕಿ ಸಮುದಾಯದ ಹಿರಿಯ ಮುಖಂಡರಾದ ನರಸಿಂಯ್ಯ ಮಾತನಾಡಿ ಶ್ರೀರಾಮಲು ಅವರು ಸಚಿವರಾದ ನಂತರ ವಾಲ್ಮೀಕಿ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಸಿಕ್ಕಿದಂತೆ ಅಗಿದೆ. ಪ್ರಥಮವಾಗಿ ಮೀಸಲಾತಿ ಹೆಚ್ಚಳ, ಅಭಿವೃದ್ದಿ ನಿಗಮ, ವಾಲ್ಮೀಕಿ ಜಯಂತಿ ಸರ್ಕಾರದಿಂದ ಆಚರಣೆ, ರಜೆ ಘೋಷಣೆ ಸೇರಿದಂತೆ ಅನೇಕ ಸೌಲಭ್ಯಗಳನ್ನು ಕಲ್ಪಿಸಿದರು, ಅದಕ್ಕೂ ಮುನ್ನ ವಾಲ್ಮೀಕಿ ಸಮುದಾಯವು ಸ್ವಾತಂತ್ರ್ಯ ಬಂದು ಹಲವು ದಶಕಗಳೇ ಕಳೆದಿದ್ದರೂ ಶೋಷಣೆಗೆ ಒಳಗಾಗಿತ್ತು. ಅದಕ್ಕೆ ಶ್ರೀರಾಮಲು ಅವರು ಮುಕ್ತಿಯನ್ನು ಕಲ್ಲಿಸಿದರು ಎಂದು ನೆನಪಿಸಿದರು,
ಸಮುದಾಯದ ಹಲವು ಬೇಡಿಕೆಗಳನ್ನು ಈಡೇರಿಸಿದಂತೆ ಗುರುಪೀಠದಲ್ಲಿ ಗೊಂದಲವನ್ನು ನಿವಾರಿಸಲು ಮಧ್ಯ ಪ್ರವೇಶಿಸುವುದು ಅನಿವಾರ್ಯವಾಗಿದ್ದು, ಶೀಘ್ರವಾಗಿ ಗುರುಪೀಠ ಗೊಂದಲ ನಿವಾರಿಸಿ ಸಮ್ಮೇಳವನ್ನು ಆಯೋಜಿಸುವ ಮೂಲಕ ಸಂಘಟನೆಗೆ ಒತ್ತು ನೀಡಲು ನಮ್ಮ ಬೆಂಬಲವಿದೆ ಎಂದು ಘೋಷಿಸಿದರು.
ಈ ಸಂದರ್ಭಧಲ್ಲಿ ಸಮುದಾಯದ ಮುಖಂಡರಾದ ಮಾದೇಶ್, ಬಾಲಗೋವಿಂದ,ಪೆಟ್ರೋಲ್ ಬಂಕ್ ಮಂಜು, ಅವರುಗಳು ಶ್ರೀರಾಮುಲು ಅವರನ್ನು ಸನ್ಮಾನಿಸಿ ಗೌರವಿಸಿದರು, ಶ್ರೀರಾಮುಲು ಅವರು ಮುಖಂಡರಿಗೆ ತಮ್ಮ ಪುತ್ರಿಯ ಆಹ್ವಾನ ಪತ್ರಿಕೆಯನ್ನು ವಿತರಿಸಿ ವಿವಾಹಕ್ಕೆ ಅಮಂತ್ರಿಸಿದರು,