ಅಂಬೇಡ್ಕರ್ ಆಶಯದಂತೆ ಶಿಕ್ಷಣಕ್ಕೆ ಆಧ್ಯತೆ ನೀಡಿಃಹನುಮೇಶನಾಯಕ

ಜಾನೇಕಲ್‌ನಲ್ಲಿ ೩೯ನೇ ಮನೆ ಮನೆಗೆ ಅಂಬೇಡ್ಕರ್ ಕಾರ್ಯಕ್ರಮ
ಮಾನ್ವಿ, ಃ ಭಾರತ ದೇಶದಲ್ಲಿ ಅಕ್ಷರ ವಂಚಿತ ಮೂಲ ನಿವಾಸಿಗಳಾದ ದಲಿತರು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರ ಆಶಯದಂತೆ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕಿದೆ ಎಂದು ಪ್ರಗತಿಪರ ಚಿಂತಕ ಹನುಮೇಶನಾಯಕ ಜೀನೂರು ಹೇಳಿದರು.
ತಾಲೂಕಿನ ಜಾನೇಕಲ್ ಗ್ರಾಮದ ಯಂಕಮ್ಮ ಮುದುಕಪ್ಪನಾಯಕ ಮನೆಯಲ್ಲಿ ಬಹುಜನ ಸಂಘರ್ಷ ಸಮಿತಿ ವತಿಯಿಂದ ಆಯೋಜಿಸಿದ್ದ ೩೯ನೇ ಮನೆ ಮನೆಗೆ ಅಂಬೇಡ್ಕರ್ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರರು ಪ್ರತಿಯೂಬ್ಬರಿಗೂ ಶಿಕ್ಷಣ ಉದ್ಯೋಗ ಅಧಿಕಾರ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಸಮಾನ ಅವಕಾಶಗಳು ದೊರಕುವಂತೆ ಮಾಡಲು ಸಂವಿಧಾನವನ್ನು ರಚಿಸಿ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳನ್ನು ಕಲ್ಪಿಸಿರುವ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು.
ಮಾನ್ವಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರವಿಕುಮಾರ ಪಾಟೀಲ್ ವಕೀಲ ಮಾತನಾಡಿ ದೇಶದಲ್ಲಿರುವ ಬಹುಸಂಖ್ಯಾತ ಪ.ಜಾ.ಪ.ಪಂ. ಹಿಂದುಳಿದ ವರ್ಗಗಳು, ಧಾರ್ಮಿಕ ಅಲ್ಪಸಂಖ್ಯಾತರಾದ ಬಹುಜನರನ್ನು ಸ್ವತಂತ್ರವಾಗಿ ಬದುಕಲು ಅಂಬೇಡ್ಕರ್‌ರು ಮಾತ್ರ ಕಾರಣರಾಗಿದ್ದಾರೆ ಎಂದರು.
ಈ ಕಾರ್ಯಕ್ರಮವನ್ನುದ್ದೇಶಿಸಿ ಬಹುಜನ ಸಂಘರ್ಷ ಸಮಿತಿ ಅಧ್ಯಕ್ಷ ಜೆ.ಶರಣಪ್ಪ ಬಲ್ಲಟಗಿ, ಭಾರತೀಯ ದಲಿತ ಪ್ಯಾಂಥರ್ ಜಿಲ್ಲಾಧ್ಯಕ್ಷ ಲಕ್ಷ್ಮಣ್ ಜಾನೇಕಲ್, ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಜಿಲ್ಲಾಧ್ಯಕ್ಷ ಶರಣಬಸವನಾಯಕ ಜಾನೇಕಲ್, ಜನಶಕ್ತಿ ಮುಖಂಡ ಮಾರೆಪ್ಪ ಹರವಿ, ಶಿಕ್ಷಕ ಶಿವಪ್ಪನಾಯಕ ಕಲ್ಲೂರು ಮಾತನಾಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾತೆ ಸಾವಿತ್ರಿ ಬಾಯಿ ಪುಲೆ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಹನುಮಂತ ಜಾನೇಕಲ್ ವಹಿಸಿದ್ದರು.
ಈ ವೇಳೆ ಗ್ರಾ.ಪಂ.ಸದಸ್ಯರಾದ ಹನುಮಂತಿ ತಿಪ್ಪಣ್ಣ ಜಾನೇಕಲ್, ಮೌನೇಶಗೌಡ ಜಾನೇಕಲ್, ಕರಿಯಪ್ಪನಾಯಕ, ಮಹಿಳಾ ಜಾಗೃತಿ ಸಂಘಟನೆ ಕಾರ್ಯಕರ್ತೆ ನೀಲಾವತಿ ಜಾನೇಕಲ್, ಪ್ರವೀಣ್‌ಕುಮಾರ, ಸಾಯಿಕುಮಾರ, ಚನ್ನಬಸವನಾಯಕ, ಶಿವರಾಜ, ಚನ್ನಬಸವ ಜಾನೇಕಲ್, ಯಂಕಮ್ಮ ಮುದುಕಪ್ಪನಾಯಕ ಸೇರಿದಂತೆ ಅನೇಕ ಮುಖಂಡರು, ಮಹಿಳೆಯರು, ಯುವಕರು ಇದ್ದರು.