ಅಂಬೇಡ್ಕರ್ ಆದರ್ಶ,ತತ್ವಗಳು ಪಾಲನೆಯಾಗಬೇಕು

ದೇವದುರ್ಗ.ನ.೧೬- ಸಂವಿಧಾನ ಬರೆಯುವ ಮೂಲಕ ದೇಶಕ್ಕೆ ಡಾ.ಬಿ.ಆರ್. ಅಂಬೇಡ್ಕರ್‌ವರ ಕೊಡಗೆ ಅನನ್ಯ ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಪಾಟೀಲ ಇಟಗಿ ಹೇಳಿದರು. ಸಮೀಪದ ಗೂಗಲ್ ಗ್ರಾಮದ ಅಲ್ಲಮಂ ಪ್ರಭು ಕಲ್ಯಾಣ ಮಂಟಪದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಮಹಾನಾಯಕ ದಾರವಾಹಿ ಬ್ಯಾನರ್ ಕಾರ್‍ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಿಂದುಳಿದ ಸಮಾಜ ಜತೆಗೆ ಪ್ರತಿಯೊಂದು ಸಮಾಜಕ್ಕೆ ಸಮಾನತೆ ನೀಡಿದ್ದಾರೆ. ಈದೇಶದ ಕಟ್ಟಕಡೆ ವ್ಯಕ್ತಿಗೂ ಸಮಾನತೆ ಸಾಮಾಜಿಕವಾಗಿ ಯೋಜನೆಗಳು ಜಾರಿಗೆ ತರುವಲ್ಲಿ ಅವರ ಕೊಡಗೆ ಅನನ್ಯ ಎಂದರು. ಪ್ರತಿಯೊಂದು ಸಮಾಜವೊ ಎಲ್ಲಾ ರಂಗದಲ್ಲಿ ಮುಂದೆ ಬರಬೇಕಾರೇ ಶೈಕ್ಷಣಿಕವಾಗಿ ಶಿಕ್ಷಣ ಸೌಲಭ್ಯ ಬಹಳ ಮುಖ್ಯವಾಗಿದೆ. ಶಿಕ್ಷಣದಿಂದ ಅನೇಕ ಸೌವಲತ್ತುಗಳು ಪಡೆಯಲು ಅನುಕೂಲವಾಗುತ್ತದೆ ಎಂದು ಹೇಳಿದರು. ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ ಡಾ.ಬಿ.ಆರ್. ಅಂಬೇಡ್ಕರ್ ಜೀವನಾಧರಿತವಾದ ಮಹಾನಾಯಕ ಧಾರವಾಹಿ ಪ್ರತಿಯೊಬ್ಬರು ನೋಡುವ ಜತೆ ಜೀವನಕ್ಕೆ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಮಂಜುನಾಥ ಮಾತ್ಪಳ್ಳಿ, ಗೋವಿಂದ ನಾಯಕ, ಮಾನಪ್ಪ ಮೇಸ್ತ್ರೀ, ಶಾಂತಕುಮಾರ ಹೊನ್ನಟಗಿ, ಹನುಮಂತ ಮನ್ನಾಪುರಿ, ಬಸವರಾಜ ಮನ್ನಾಪುರಿ, ಬಸವರಾಜ ಬ್ಯಾಗವಾಟ ಸೇರಿ ಇತರರು ಇದ್ದರು.