ಅಂಬೇಡ್ಕರ್ ಆದರ್ಶಗಳು ಸರ್ವಕಾಲಿಕ-ರಘುನಂದನ್

ರಾಯಚೂರು,ಏ.೧೭-ಡಾ.ಬಿ.ಆರ್.ಅಂಬೇಡ್ಕರ್‌ರವರ ಆದರ್ಶ ಸರ್ವಕಾಲಿಕವೆಂದು ಆರ್‌ಎಸ್‌ಎಸ್ ಪ್ರಜ್ಞಾ ಪ್ರವಾಹ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಯೋಜಕ ರಘುನಂದನ ಹೇಳಿದರು.
ಅವರಿಂದು ನಗರದ ನವಚೇತನ ಶಾಲೆಯಲ್ಲಿ ಆರ್‌ಎಸ್‌ಎಸ್ ಆಯೋಜಿಸಿದ ಅಂಬೇಡ್ಕರ್ ಜಯಂತಿಯಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿದರು.ಅಂಬೇಡ್ಕರ್ ಒಬ್ಬ ರಾಷ್ಟ್ರೀಯ ನಾಯಕ ಅವರು ಸಂವಿಧಾನ ಶಿಲ್ಪಿ ಹಾಗೂ ದಲಿತ ನಾಯಕ ಮಾತ್ರವಲ್ಲದೆ ಓರ್ವ ಮಹಾ ಮಾನವತಾವಾದಿ ಎಂದು ಹೇಳಿದರು.
ಅಂಬೇಡ್ಕರ್ ಯಾವುದೆ ಧರ್ಮವನ್ನು ದ್ವೇಷಿಸುತ್ತಿರಲಿಲ್ಲ ಬದಲಾಗಿ ಧರ್ಮದ ಹೆಸರಲ್ಲಿ ವಂಚನೆ ಮಾಡುವುದನ್ನು ಉಗ್ರವಾಗಿ ಖಂಡಿಸುತ್ತಿದ್ದರು ಅವರು ಭಾರತ ದೇಶಕ್ಕೆ ಒಂದು ರತ್ನವಿದ್ದಂತೆ ಎಂದರು.
ಅಂಬೇಡ್ಕರ್ ತತ್ವಾದರ್ಶಗಳು ಸರ್ವಕಾಲಿಕವಾಗಿದ್ದು ಅವರನ್ನು ನಾವು ಗೌರವಿಸಬೇಕೆಂದು ಅವರು ಅಂಬೇಡ್ಕರ್ ಕಮ್ಯೂನಿಷ್ಟ್ ಸಿದ್ದಾಂತವನ್ನು ಒಪ್ಪುತ್ತಿರಲಿಲ್ಲ ದೇಶದಲ್ಲಿ ಧರ್ಮ ಮತ್ತು ಆಧ್ಯಾತ್ಮಿಕತೆಯಿರಬೇಕು ಆಗಮಾತ್ರ ಜನರಲ್ಲಿ ಸಾಮರಸ್ಯ ಮೂಡಲು ಸಾಧ್ಯವೆಂದರು.
ಅಂಬೇಡ್ಕರ್ ಸಮಾಜದಲ್ಲಿ ಸಾಮರಸ್ಯ ಕಾಪಾಡಲು ಅನೇಕ ರೀತಿಯ ಪ್ರಯತ್ನ ಮಾಡಿದರು ಅದರಲ್ಲಿ ತಕ್ಕ ಮಟ್ಟಿಗೆ ಯಶಸ್ವಿಯಾದರೂ ಅದರೆ ನಮ್ಮ ದೇಶದಲ್ಲಿ ಅಸ್ಪೃಶ್ಯತೆ ನಿವಾರಣೆಯಾಗದ ಹೊರತು ಪ್ರಗತಿ ಅಸಾಧ್ಯವೆಂದು ನುಡಿದಿದ್ದರು ಎಂದರು.
ಅಂಬೇಡ್ಕರ್‌ರವರಿಗೆ ಅನೇಕರು ಸಹಾಯ ಮಾಡಿದ್ದರು ತೆಂಗಡೆ, ಸಾಹು ಮಾಹರಾಜ ಇನ್ನೂ ಅನೇಕ ಸಹಾಯ ಮಾಡಿ ಅವರನ್ನು ಸಂವಿಧಾನ ಶಿಲ್ಪಿಯನ್ನಾಗಿ ರೂಪುಗೊಳ್ಳಲು ಪರೋಕ್ಷವಾಗಿ ಬೆಂಬಲಿಸಿದ್ದರು ಎಂದರು.
ವೇದಿಕೆ ಮೇಲೆ ಡಾ.ವಿರುಪಾಕ್ಷಪ್ಪ ಇದ್ದರು.ಅನೇಕ ಸ್ವಯಂ ಸೇವಕರು, ಸಮಾಜದ ಗಣ್ಯರು ಇದ್ದರು.