ಅಂಬೇಡ್ಕರ್ ಅವರು ಸಮಾನತೆಯನ್ನು ಸೃಷ್ಠಿಸಿದ ಮಹಾಮಾನವತಾವಾದಿ:ಬಂಕ್ಲಿ

ಸೈದಾಪುರ:ಡಿ.7:ಸಮಾಜದಲ್ಲಿರುವ ಅಸ್ಪøಶ್ಯತೆಯನ್ನು ತೊಲಗಿಸಿ, ನ್ಯಾಯ, ಸಮಾನತೆಯ ಹೋರಾಟಕ್ಕಾಗಿ ತಮ್ಮ ಸೇವೆಯನ್ನು ಮುಡುಪಾಗಿಟ್ಟ ಡಾ.ಅಂಬೇಡ್ಕರ್ ಅವರು ಮಹಾ ಮಾನವತವಾದಿ ಎಂದು ಸೈದಾಪುರ ಪೊಲೀಸ್ ಠಾಣೆಯ ಪಿಎಸಐ ಭೀಮರಾಯ ಬಂಕ್ಲಿ ಅಭಿಪ್ರಾಯಪಟ್ಟರು.
ಪಟ್ಟಣದ ರೈಲು ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಮಹಾ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಆಕಾಶದಲ್ಲಿ ಲಕ್ಷಾಂತರ ನಕ್ಷತ್ರಗಳಿದ್ದರೂ ಕೂಡ ಸೂರ್ಯ ಮಾತ್ರ ಜಗತ್ತನ್ನು ಬೆಳಗುವನು. ಅದರಂತೆ ವಿಶ್ವವೇ ನಶಿಸಿ ಹೋಗುವವರೆಗೂ ಕೂಡ ಬಾಬ ಸಾಹೇಬರು ಜನ ಮನಗಳಲ್ಲಿ ಅಜರಾಮರ. ಅವರ ಆತ್ಮಕ್ಕೆ ಎಂದು ಸಾವಿಲ್ಲ. ಅವರ ಜೀವನವಿಡಿ ಕಷ್ಟಗಳ ಜೊತೆಯಲ್ಲಿ ಹೋರಾಟ ಮಾಡಿ ಬೆಳದು ಬಂದರು. ಇಂದಿನ ಯುವ ಜನರು ಅವರ ಹೋರಟದ ಜೀವನವನ್ನು ಆದರ್ಶವನ್ನಾಗಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಅಪರಾಧ ವಿಭಾಗದ ಪಿಎಸ್‍ಐ ಹಣಮಂತ್ರಾಯ ನಾಯಕ, ಪೇದೆ ಮಾಣಿಕಪ್ಪ, ಬಸ್ಸಪ್ಪ, ರಮೇಶ ರೆಡ್ಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾಳಪ್ಪ ಅರಿಕೇರಿ, ಸದಸ್ಯರಾದ ವಲಿಯೋದ್ದೀನ್, ಹಣಮಂತ, ರಾಜು ದೊರೆ, ಬಸವಲಿಂಗಪ್ಪ ವಡಗೇರಿ, ಭೀಮಣ್ಣ ಮಡಿವಾಳ, ಲಕ್ಷ್ಮಣ ಓಬಳಾಪುರ, ಷಣ್ಮುಖ ಬಡಿಗೇರ್, ದೇವಿಂದ್ರಪ್ಪ ಕೂಡ್ಲೂರು, ಮಹಿಪಾಲರೆಡ್ಡಿ ಮುನಗಾಲ, ನೀಲಕಂಠ, ನಾಗಪ್ಪ, ವಿಜಯ ಕುಮಾರ, ಮಂಜುನಾಥ ಚೆಲುವಾದಿ, ಮಲ್ಲಿಕಾರ್ಜುನ, ಭೀಮಣ್ಣ ಸಂಗವಾರ, ಪರಶಿವ ಚೇಂಗುಟ, ಭೀಮರಾಯ ಕೂಡ್ಲೂರು, ಶಿವರಾಜ್ ಗೊಂದೆಡಗಿ, ಮರಿಲಿಂಗ ಮುನಗಾಲ ಸೇರಿದಂತೆ ಇತರರಿದ್ದರು.