
ಹನೂರು: ಮಾ.3:- ಪರಿಶಿಷ್ಟ ಜನಾಂಗದವರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಡಲಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿರುವ ಮತ ಅಸ್ತ್ರಕ್ಕೆ ಸರಿಯಾದ ಪ್ರಾತಿನಿಧ್ಯ ಕೊಡಬೇಕು ಎಂದು ವಕೀಲರ ಸಂಘದ ಅಧ್ಯಕ್ಷ ಬಸವರಾಜು ತಿಳಿಸಿದರು.
ಹನೂರು ಪಟ್ಟಣದ ಡಾ. ಬಿಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಹನೂರು ವಿಧಾನಸಭಾ ಕ್ಷೇತ್ರದ ಪರಿಶಿಷ್ಟ ಜನಾಂಗದ ಜಾಗೃತಿ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜನರ ನಾಡಿ ಮಿಡಿತಗಳನ್ನು ಅರಿತು ನಾಯಕ ರಾಗುವ, ನಾಯಕತ್ವವನ್ನು ಗುಣಗಳನ್ನು ಬೆಳಿಸಿಕೊಂಡಿರುವ ಸಮುದಾಯಕ್ಕೆ ಗೌರವ ನೀಡುವಂತಹ ವ್ಯಕ್ತಿಗೆ ಮತ ನೀಡಬೇಕು. ಕೇವಲ ಮತ ಹಾಕಲು ಮಾತ್ರ ಸೀಮಿತಗಬಾರದು.
ಹೊಲೆಯರು, ಮಾದಿಗರು ರಾಜ್ಯದಲ್ಲಿ 1.5ಕೋಟಿ ಜನಸಂಖ್ಯೆ ಇದ್ದೇವೆ. ಸಮುದಾಯದ ಸಂಘಟನೆಯ ಕೂಗು ಇಡೀ ರಾಜ್ಯದಲ್ಲಿ ಪಸರಿಸಲಿ. ಮುಂದಿನ ದಿನಗಳಲ್ಲಿ ನಮ್ಮ ಸಮುದಾಯದ ನಾಯಕರನ್ನು ಮುಖ್ಯಮಂತ್ರಿ ಯಾಗುವಂತೆ ಮಾಡಬೇಕು. ನಮ್ಮ ಜನಾಂಗಕ್ಕೆ ದುಡಿಯುವವವರಿಗೆ ಮತ ನೀಡಿ,
ಮುಖ್ಯ ಭಾಷಣಕರ ಸರ್ವ ಕ್ಷೇತ್ರದಲ್ಲೂ ಭಿನ್ನಾಭಿಪ್ರಾಯಗಳನ್ನು ತೊರೆದು ಒಂದಾಗಬೇಕು.
ರಾಷ್ಟ್ರೀಯ ಸಮುದಾಯ ಎಂದು ಕರೆಯಲ್ಪಡುವ ಪರಿಶಿಷ್ಟ ಜಾತಿ, ಬ್ರಾಹ್ಮಣ ಸಮುದಾಯವನ್ನು ರಾಷ್ಟ್ರೀಯ ಸಮುದಾಯದ ವಾಗಿ ಕರೆಯಲ್ಪಡುತ್ತೇವೆ ಆದರೆ ಸಮುದಾಯವನ್ನು ಗಣನೆಗೆ ತೆಗೆದುಕೊಳ್ಳದೆ ಕಡೆಗಣಿಸಲಾಗುತ್ತಿದೆ ಹಾಗಾಗಿ ಹೊಲೆಯ ಮಾದಿಗ ಸಮುದಾಯಗಳು ಸಂಘಟಿತರಾಗಿ ಒಗ್ಗಟ್ಟಾಗಬೇಕು ಎಂದು ತಿಳಿಸಿದರು.
ಮೈಸೂರು ಉರಿಲಿಂಗ ಪೆದ್ದಿಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ ಮಾತನಾಡಿ ರಾಜ್ಯದಲ್ಲಿ ಪ್ರಜಾಪ್ರಭುತ್ವ ಉಳಿಯ ಬೇಕಾದರೆ ಅದು ಹೊಲೆಯ ಮಾದಿಗ ಸಮುದಾಯದಿಂದ ಮಾತ್ರ ಸಾಧ್ಯ. ಯಾವುದೇ ಕಾರಣಕ್ಕೂ ತಲೆ ಬಗ್ಗಿ ನಡೆದ ಸಮುದಾಯವಲ್ಲ ತಲೆ ಎತ್ತಿ ದೇಶವನ್ನು ಅಳುವ ಸಮುದಾಯ ಯಾವುದೆಂದರೆ ಅದು ಹೊಲೆಯ ಮಾದಿಗ ಸಮುದಾಯ. ರಾಜ್ಯದಲ್ಲಿ ಹೊಲೆಯ ಮಾದಿಗರು ಒಗಟ್ಟಾಗಬೇಕು.
ಪ್ರಜೆಗಳ ಸಾಮಾಜಿಕ ಆರ್ಥಿಕ ಧಾರ್ಮಿಕ ಶೈಕ್ಷಣಿಕ ಬದುಕಿನಲ್ಲೂ ಕ್ರಾಂತಿಕಾರಿ ಬದಲಾವಣೆಗಳನ್ನು ತರಬಲ್ಲ ಆಡಳಿತ ವ್ಯವಸ್ಥೆಯೇ ಪ್ರಜಾಪ್ರಭುತ್ವ ಎಂದು ಎಚ್ಚರಿಸಿ ನಮಗೆ ಓಟು ಎಂಬ ಅಸ್ತ್ರವನ್ನು ನೀಡಿದವರು ಬಾಬಾ ಸಾಹೇಬ್ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು. ಅವರ ಆಶಯದಂತೆ ಸಮಾಜವು ಒಗ್ಗಟ್ಟಾಗಿ ದೇಶವನ್ನು ಕಟ್ಟಿ ಆಳುವಂತಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಚನ್ನಕೇಶವ ಮೂರ್ತಿ, ಪ್ರಸನ್ನ ಚಕ್ರವರ್ತಿ, ಜೀವಿ ಗೌಡ ಕಾಲೇಜು ಪ್ರಾಂಶುಪಾಲರಾದ ಶೈಲೇಶ್, ಉಪನ್ಯಾಸಕ ಶಾಂತರಾಜು, ವಕೀಲರು ಯೋಗೀಶ್, ಮಹದೇವಸ್ವಾಮಿ, ಕೊಳ್ಳೇಗಾಲ ರಾಜಶೇಖರ್, ಶಾಗ್ಯ ಮಹೇಶ್, ಕಿರಣ್ ಕುಮಾರ್, ಸಂಪತ್ ಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.