ಅಂಬೇಡ್ಕರ್ ಅವರಿಗಿದ್ದ ಜ್ಞಾನಕ್ಕೆ ವಿದೇಶಿಯರು ಬೆರಗಾಗಿದ್ದರು : ಅಜೀತ

ಅಥಣಿ :ನ.15: ಸಂಘಟನೆಯ ಶಕ್ತಿಯು ಅದರ ಸದಸ್ಯರ ಸಂಖ್ಯೆಯ ಮೇಲೆ ಅವಲಂಬಿತವಾಗಿಲ್ಲ ಬದಲಾಗಿ ಅವರ ಪ್ರಾಮಾಣಿಕತೆ, ನಿಷ್ಠೆ ಮತ್ತು ಶಿಸ್ತಿನ ಮೇಲೆ ನಿಂತಿದೆ ಎಂಬುದು ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ವಾದವಾಗಿತ್ತು ಎಂದು ಕರ್ನಾಟಕ ಭೀಮ ಸೇನೆ ಅಥಣಿ ಘಟಕದ ಅದ್ಯಕ್ಷ ಅಜೀತ ಕಾಂಬಳೆ ಹೇಳಿದರು.
ಅವರು ಅಥಣಿ ಪ್ರವಾಸಿ ಮಂದಿರದಲ್ಲಿ ಪದಾಧಿಕಾರಿಗಳ ಸಭೆಯನ್ನ ಉದ್ದೇಶಿಸಿ ಮಾತನಾಡಿದ ಅವರು ಡಾ.ಬಾಬಾಸಾಹೇಬರ ವಿದ್ವತ್ತು, ವಾಕಚಾತುರ್ಯ, ಅವರ ಪ್ರತಿಭೆ ಮತ್ತು ದೇಶದ ಶೋಷಿತರ ಕುರಿತು ಅವರಿಗಿದ್ದ ಜ್ಞಾನಕ್ಕೆ ವಿದೇಶಿಯರು ಬೇರಗಾಗಿದ್ದರು, ನಮ್ಮ ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳು ಹಾಗೂ ಸಮಾನ ಅವಕಾಶಗಳನ್ನು ಕಲ್ಪಸಿರುವ ಅವರು ಪ್ರಜಾಪ್ರಭುತ್ವದ ಪ್ರಭಲ ಪ್ರತಿಪಾದಕರು ಮತ್ತು ಮಹಾನ ಆರಾದಕರೂ ಆಗಿದ್ದರು ಅವರ ಆಶೆಯದಂತೆ ಸಿದ್ದಾಂತ, ತತ್ವಾದರ್ಶಗಳನ್ನು ಪಾಲಿಸಿಕೊಂಡು ನಾವೆಲ್ಲರೂ ಪ್ರಗತಿ ಪಥದಲ್ಲಿ ಸಾಗೋಣ ಇಂದಿನ ಪರಿಸ್ಥಿತಿಯಲ್ಲಿ ರಾಜಕೀಯ ಅಧಿಕಾರಕ್ಕಿಂತಲೂ ಮೊದಲು ಇಲ್ಲಿನ ಸಮಾಜ ವ್ಯವಸ್ಥೆ ಯಲ್ಲಿ ಸಮಾನತೆ ನೆಲೆಸುವುದು ಅತೀ ಅಗತ್ಯ ಎಂದು ಅವರು ಬಲವಾಗಿ ನಂಬಿದ್ದರು ಎಂದು ತಿಳಿಸಿದರು.
ಈ ವೇಳೆ ಪ್ರಧಾನ ಕಾರ್ಯದರ್ಶಿ ಅವಿನಾಶ್ ಶಿಂಧೆ ಮಾತನಾಡಿ ಅಮೇರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯ ದಿಂದ 1917ರಲ್ಲಿ ಡಾಕ್ಟರೇಟ್ ಪದವಿ ಪಡೆದ ಮೊಟ್ಟಮೊದಲ ಭಾರತೀಯ ವಿದ್ಯಾರ್ಥಿ ಬಾಬಾಸಾಹೇಬರು ಇಂದಿಗೂ ಅಲ್ಲಿ ಕಾನೂನು ಮತ್ತು ಸಂವಿಧಾನ ಅದ್ಯಯನ್ ವಿಭಾಗಕ್ಕೆ ಅವರ ಹೆಸರು ಇಡಲಾಗಿದೆ ಇಂತಹ ಮಹಾನ ಚೇತನ ಅವರ ಹಾಕಿಕೊಟ್ಟ ದಾರಿಯಲ್ಲಿ ಸಾಗುವುದು ನಮ್ಮೆಲ್ಲರ ಯುವಕರ ಕರ್ತವ್ಯವಾಗಿದೆ ಎಂದರು
ಇದೇ ವೇಳೆ ಕೊಕಟನೂರ ಜಿ.ಪಂ ವ್ಯಾಪ್ತಿಯ ಸಂಘಟನೆಯ ದೃಷ್ಟಿಯಿಂದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು .
ಈ ವೇಳೆ ತಾಲೂಕ ಉಪಾಧ್ಯಕ್ಷ ಭೀಮ್ ದೇವ್ ಪಟ್ಟಣ. ಕಾರ್ಯದರ್ಶಿ ನಿಖಿಲ್ ಕುಮಾರ್ ಕಾಂಬಳೆ. ಸದಸ್ಯರುಗಳಾದ ರಾಹುಲ್ ಧಡಕೆ. ಗೋವಿಂದ ಗಾಡಿ ವಡ್ಡರ್ ರಾಹುಲ್ ಕಾಂಬಳೆ
ಕೊಕಟನೂರ ಗ್ರಾಮದ ಅಧ್ಯಕ್ಷರು ಕುಮಾರ್ ಧಡಕೆ. ಉಪಾಧ್ಯಕ್ಷರು ಶ್ರೀಶೈಲ್ ಧಡಕೆ. ಪ್ರಧಾನ ಕಾರ್ಯದರ್ಶಿ ಆಕಾಶ ಧಡಕೆ .ಕಾರ್ಯದರ್ಶಿ ಉಮೇಶ್ ಭಜಂತ್ರಿ ಮಹಾಂತೇಶ ಧಡಕೆ ಹಾಗೂ ಇನ್ನುಳಿದ ಸದಸ್ಯರು ಉಪಸ್ಥಿತರಿದ್ದರು.