ಅಂಬೇಡ್ಕರ್‍ ರವರ ತತ್ವಾದರ್ಶಗಳನ್ನು ಪಾಲಿಸಿ

ಮೈಸೂರು:ಡಿ:31: ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್‍ ರವರ ಚಿಂತನೆಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕೆಂದು ಮಾಜಿ ಮಹಾಪೌರರು ಮತ್ತು ಸಮಾಜ ಸೇವಕರಾದ ಪುರುಶೋತ್ತಮ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಕಾನಿಷ್ಕ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ 5ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಹಾಗೂ 2021ನೇ ವರ್ಷದ ನೂತನ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ಕಳೆದ 30 ವರ್ಷಗಳಿಂದ ವಿದ್ಯಾರ್ಥಿ ಕ್ಷೇತ್ರದಲ್ಲಿ ನನ್ನದೇ ಆದಂತ ಕೊಡುಗೆಯನ್ನು ನೀಡಿದ್ದೇನೆ ಇದಕ್ಕೇ ಸ್ಪೂರ್ತಿ ಬಾಬಾ ಸಾಹೇಬ್ ಅಂಬೇಡ್ಕರ್‍ ರವರ ಚಿಂತನೆ ಮತ್ತು ತತ್ವಾದರ್ಶಗಳು. ಅಂಬೇಡ್ಕರ್‍ರವರು ಹೇಳಿದಂತೆ ಒಬ್ಬ ಮನುಷ್ಯನನ್ನು ಉತ್ತಮ ದಿಕ್ಕಿನಲ್ಲಿ ಸಾಗುವಂತೆ ಮಾಡುವ ಶಕ್ತಿ ಇರುವುದು ಶಿಕ್ಷಣಕ್ಕೆ ಮಾತ್ರ. ಆದ್ದರಿಂದ ಪ್ರತಿಯೊಬ್ಬರೂ ಶಿಕ್ಷಿತರಾಗಬೇಕು. ಶಿಕ್ಷಣ-ಜ್ಞಾನ ಒಂದೇ ನಮ್ಮ ಉಸಿರಿರುವ ತನಕ ನಮ್ಮನ್ನು ಗೌರವಿಸುವುದು ಕಾಪಾಡುವುದು. ಮೊದಲು ನಮ್ಮನ್ನು ನಾವು ಅಥವಾ ಇತರರನ್ನು ಟೀಕೆ ಮಾಡುವುದನ್ನು ನಿಲ್ಲಸಬೇಕು ಆಗ ಮಾತ್ರ ಏಳಿಗೆ ಪಡೆಯಲು ಸಾಧ್ಯ. ಇಂದು ನಾವೆಲ್ಲರೂ ಬಾಬಾ ಸಾಹೇಬರ ಸಂವಿಧಾನದ ಮೀಸಲಾತಿ ಭಿಕ್ಷೆಯಿಂದ ಹಣ-ಆಸ್ತಿ-ಐಶ್ವರ್ಯವನ್ನು ಮಾಡಿಕೊಂಡಿದ್ದೇವೆ, ಮಾಡಿಕೊಳ್ಳುತ್ತಿದ್ದೇವೆ ಎಂಬುದನ್ನು ಎಂದಿಗೂ ಮರೆಯಬಾರದು. ಅಂಬೇಡ್ಕರ್‍ ರವರ ಕನಸು ಪ್ರತಿಯೊಬ್ಬರು ತಮಗೆ ಬರುವ ಆಧಾಯದಲ್ಲಿ 5-10%ನನ್ನು ಸಮಾಜ ಮುಖಿ ಕೆಲಸಗಳಿಗೆ ಎತ್ತಿಡಬೇಕೆಂಬದು. ಆದರೆ ಇಂದು ಯಾರೊಬ್ಬರು ಅವರ ಕನಸ್ಸನ್ನು ನನಸು ಮಾಡುವ ದೃಷ್ಟಿಯಲ್ಲಿ ನಡೆಯುತ್ತಿಲ್ಲ. ಆದರೆ ಕಾನಿಷ್ಕ ಚಾರಿಟಬಲ್ ಟ್ರಸ್ಟ್ ತಮ್ಮಗೆ ಬರುವ ಆಧಾಯದಲ್ಲೇ ಸಮಾಜ ಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿರುವುದ ಹೆಮ್ಮೆಯ ಕೆಲಸ ಎಂದರು.
ಈ ಸಂದರ್ಭದಲ್ಲಿ ಮೈಸೂರು ಜಿ.ಪಂ. ಉಪಕಾರ್ಯದರ್ಶಿ (ಆಡಳಿತ) ಡಾ. ಪ್ರೇಮಕುಮಾರ್, ಕಾನಿಷ್ಕ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಹಿಮಾಂಜನ್ ಸಿಂಗ್ ಇತರರು ಇದ್ದರು.