ಅಂಬೇಡ್ಕರ್‌ರಂತೆ ವಿದ್ಯಾರ್ಥಿಗಳು ರಾಷ್ಟ್ರ ಪ್ರೀತಿಸಲಿ : ಸುಧಾಕರ್ ಹೊಸಳ್ಳಿ

ದಾವಣಗೆರೆ ಏ.೧೮; ಅಂಬೇಡ್ಕರ್‌ರರಂತೆ ವಿದ್ಯಾರ್ಥಿಗಳು ರಾಷ್ಟ್ರ ಪ್ರೀತಿಸಲಿ ಎಂದು ಸುಧಾಕರ ಹೊಸಳ್ಳಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ದಾವಣಗೆರೆ ಪ್ರಾದೇಶಿಕ ಕೇಂದ್ರದಲ್ಲಿ 130 ನೇ ಅಂಬೇಡ್ಕರ್ ಜಯಂತಿ ಆಚರಣೆ ಮತ್ತು ಅಭಿನಂದನಾ ಸಮಾರಂಭವನ್ನು ಏರ್ಪಡಿಸಿತ್ತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಾದೇಶಿಕ ನಿರ್ದೇಶಕ ಡಾ.ಸುಧಾಕರ ಹೊಸಳ್ಳಿ, ಅಖಂಡ ಭಾರತದ ಕಲ್ಪನೆಯನ್ನು ಗಂಭೀರವಾಗಿ ಪ್ರತಿಪಾದಿಸಿದ ಪರಮ ರಾಷ್ಟ್ರಭಕ್ತ ಅಂಬೇಡ್ಕರ್‌ರವರನ್ನು ರಾಷ್ಟ್ರ, ವಿಭಜನೆಯ ಹೋರಾಟಗಳಲ್ಲಿ ಬಳಸಿಕೊಳ್ಳುತ್ತಿರುವುದು ಅಪಾಯಕಾರಿ ಸಂಗತಿ. ಅಂಬೇಡ್ಕ್ರ್ ಅವರು ಆದರ್ಶವಾಗಬೇಕೆ ವಿನಹ ಅವಕಾಶವಾಗಬಾರದು ಅಂಬೇಡ್ಕರ್‌ರವರನ್ನು ಬೆಳಕು ಮೂಡಿಸಲು ಬಳಸಿಕೊಳ್ಳಬೇಕು ಹೊರತು ಬೆಂಕಿ ಹೊತ್ತಿಸಲು ಅಲ್ಲ ಎಂದು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳು ಅಂಬೇಡ್ಕರರಂತೆ ರಾಷ್ಟ್ರ ಪ್ರೀತಿಸಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ದಾವಣಗೆರೆ ಶಿಕ್ಷಣ ಶಾಸ್ತç ವಿಭಾಗದ ಡೀನ್ ಡಾ.ವೆಂಕಟೇಶ್.ಕೆ ಮತ್ತು ಮೊರಾರ್ಜಿ ವಸತಿ ಶಾಲೆಯ ಮುಖ್ಯೋಪಾಧ್ಯಾಯ ಟಿ.ಹೆಚ್.ಮಂಜುನಾಥ್ರವರನ್ನು ಅಭಿನಂದಿಸಲಾಯಿತು. ಅಧೀಕ್ಷಕರಾದ ಮಂಜುನಾಥ್.ಟಿ ಹಾಗೂ ರವಿ ಹೆಚ್ ಮಂಜುನಾಥ್ ಚಂದನ್ ಉಪಸ್ಥಿತರಿದ್ದರು.